ಗಲ್ವಾನ್ ಘರ್ಷಣೆಯ 'ಮಾತೃಭೂಮಿ' ಬಿಡುಗಡೆಗೆ ಕೊನೆಗೂ ಮುಹೂರ್ತ ಫಿಕ್ಸ್; ವಿಳಂಬಕ್ಕೆ ಕಾರಣ ನೀಡಿದ ಸಲ್ಮಾನ್

ಇಂದು ಮುಂಬೈನಲ್ಲಿ ನಡೆದ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಸ್ವತಃ ಸಲ್ಮಾನ್ ಖಾನ್ ಅವರೇ ಸಿನಿಮಾ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
Salman Khan's 'Maatrubhumi: May War Rest in Peace' to release on Dec 4
ಸಲ್ಮಾನ್ ಖಾನ್online desk
Updated on: 

ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್​ ಖಾನ್ ಅವರು​ ತಮ್ಮ ಮುಂಬರುವ ಬಹನಿರೀಕ್ಷಿತ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' ಬಿಡುಗಡೆಯ ದಿನಾಂಕವನ್ನು ಶುಕ್ರವಾರ ಘೋಷಿಸಿದ್ದಾರೆ.

ಸಲ್ಮಾನ್ ಖಾನ್ ಮತ್ತು ಚಿತ್ರಾಂಗದಾ ಸಿಂಗ್ ಅಭಿನಯದ, ಗಲ್ವಾನ್ ಕಣಿವೆ ಘರ್ಷಣೆ ಆಧಾರಿತ ಸಿನಿಮಾ "ಮಾತೃಭೂಮಿ" ಡಿಸೆಂಬರ್ 4 ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇಂದು ಮುಂಬೈನಲ್ಲಿ ನಡೆದ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಸ್ವತಃ ಸಲ್ಮಾನ್ ಖಾನ್ ಅವರೇ ಸಿನಿಮಾ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

Salman Khan's 'Maatrubhumi: May War Rest in Peace' to release on Dec 4
'ಸಾರಾ ಅಲಿ ಖಾನ್ ಫೇಕ್; ಅವರ ತಾಯಿ ನನ್ನನ್ನು ನಿಂದಿಸಿದರು': ಬೆಸ್ಟಿ ಜೊತೆಗಿನ ಮನಸ್ತಾಪ ಬಿಚ್ಚಿಟ್ಟ ಓರಿ!

ಭಾರತ ಮತ್ತು ಚೀನೀ ಸೈನಿಕರ ನಡುವೆ 2020ರಲ್ಲಿ ನಡೆದ ಗಲ್ವಾನ್ ಕಣಿವೆಯ ಸಂಘರ್ಷವನ್ನು ಆಧರಿಸಿದ ಹಾಗೂ ಅಪೂರ್ವ ಲಖಿಯಾ ನಿರ್ದೇಶಿಸಿರುವ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಚಿತ್ರದ ಬಿಡುಗಡೆಯಲ್ಲಿನ ವಿಳಂಬದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಲ್ಮಾನ್, ಚಿತ್ರದ ದೃಶ್ಯ ಪರಿಣಾಮಗಳು (VFX) ಅತ್ಯುತ್ತಮವಾಗಿರುವುದನ್ನು ಖಚಿತಪಡಿಸಿಕೊಳ್ಳಲು ತಂಡವು ಬಯಸಿತ್ತು. ಹೀಗಾಗಿ ವಿಳಂಬವಾಗಿದೆ ಎಂದು ಹೇಳಿದರು.

‘ಇತ್ತೀಚಿನ ದಿನಗಳಲ್ಲಿ ದೃಶ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುವ ತಜ್ಞರು ಹೆಚ್ಚಾಗಿದ್ದಾರೆ. ಹೀಗಾಗಿ ನಮ್ಮ ಚಿತ್ರದ ಯಾವುದೇ ದೃಶ್ಯವನ್ನು ಜೂಮ್ ಮಾಡಿ ಯಾರೂ ವಿಎಫ್‌ಎಕ್ಸ್ ಲೋಪಗಳನ್ನು ಎತ್ತಿ ತೋರಿಸಬಾರದು ಎಂಬುದು ನಮ್ಮ ಉದ್ದೇಶವಾಗಿತ್ತು. ಪ್ರೇಕ್ಷಕರಿಗೆ ಅದ್ಭುತ ದೃಶ್ಯ ವೈಭವದ ಅನುಭವ ನೀಡಲು ನಾವು ಶ್ರಮಿಸಿದ್ದೇವೆ’ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X