'ಹಲವರು ಕೋಪಗೊಳ್ಳಬಹುದು': ಧರ್ಮ ಯಾವುದಾದರೂ, ಪ್ರತಿಯೊಬ್ಬ ಭಾರತೀಯನ ರಕ್ತದಲ್ಲಿಯೂ ರಾಮನಿದ್ದಾನೆ; ಜಾವೇದ್ ಅಖ್ತರ್

ನಾನಿನ್ನೂ ರಾಮಾಯಣ ಚಿತ್ರವನ್ನು ನೋಡಿಲ್ಲ. 'ನನ್ನ ಮಗಳು ಚಿತ್ರವನ್ನು ನೋಡಿದ್ದಾಳೆ. ಅವಳು ಚಿತ್ರವನ್ನು ಹೊಗಳಿದ್ದಾಳೆ. ಅವಳು ಸಾಮಾನ್ಯವಾಗಿ ಯಾವ ಚಿತ್ರವನ್ನೂ ಹೊಗಳುವುದಿಲ್ಲ. ಆಕೆ ನನ್ನ ಕೆಲಸವನ್ನೇ ಹೊಗಳಿಲ್ಲ' ಎಂದು ಹೇಳಿದರು.
Javed Akhtar
ಜಾವೇದ್ ಅಖ್ತರ್
Updated on: 

ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಹಿರಿಯ ಗೀತರಚನೆಕಾರ ಜಾವೇದ್ ಅಖ್ತರ್ ಭಾರತೀಯ ಸಂಸ್ಕೃತಿಯಲ್ಲಿ ರಾಮನ ಮಹತ್ವವನ್ನು ಒತ್ತಿ ಹೇಳಿದರು. ಧರ್ಮಗಳ ಮಿತಿಗಳನ್ನು ಲೆಕ್ಕಿಸದೆ ಪ್ರತಿಯೊಬ್ಬ ಭಾರತೀಯನ ರಕ್ತದಲ್ಲಿ ರಾಮನಿದ್ದಾನೆ ಎಂದು ಹೇಳಿಕೊಂಡರು.

'ರಾಮನ ಬಗ್ಗೆ ನನ್ನ ಮಾತುಗಳು ಕೆಲವು ಜನರನ್ನು ಕೆರಳಿಸಬಹುದು. ಆದರೆ, ರಾಮ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ; ರಾಮ ಎಂದರೆ ನೈತಿಕತೆ. ರಾಮ ಎಂದರೆ ಜೀವನ ವಿಧಾನ. ರಾಮ ಎಂದರೆ ಒಂದು ನಿರ್ದಿಷ್ಟ ಸೌಂದರ್ಯಶಾಸ್ತ್ರ, ನಿರ್ದಿಷ್ಟ ನೈತಿಕತೆ... ಪ್ರತಿಯೊಬ್ಬ ಭಾರತೀಯರು ಯಾವುದೇ ಧರ್ಮವನ್ನು ಅನುಸರಿಸಿದರೂ, ಅವರ ರಕ್ತದಲ್ಲಿ ರಾಮ ಇದ್ದಾನೆ. ಅದೊಂದು ಜೀವನ ವಿಧಾನ' ಎಂದು ಹೇಳಿದ್ದಾರೆ.

ನಾನಿನ್ನೂ ರಾಮಾಯಣ ಚಿತ್ರವನ್ನು ನೋಡಿಲ್ಲ. 'ನನ್ನ ಮಗಳು ಚಿತ್ರವನ್ನು ನೋಡಿದ್ದಾಳೆ. ಅವಳು ಚಿತ್ರವನ್ನು ಹೊಗಳಿದ್ದಾಳೆ. ಅವಳು ಸಾಮಾನ್ಯವಾಗಿ ಯಾವ ಚಿತ್ರವನ್ನೂ ಹೊಗಳುವುದಿಲ್ಲ. ಆಕೆ ನನ್ನ ಕೆಲಸವನ್ನೇ ಹೊಗಳಿಲ್ಲ' ಎಂದು ಅಖ್ತರ್ ತಮಾಷೆಯಾಗಿ ಹೇಳಿದರು.

ಶಾರುಖ್ ಖಾನ್ ಅವರ ಸ್ವದೇಶ್ ಚಿತ್ರದ 'ಪಲ್ ಪಲ್ ಹೈ ಭಾರಿ' ಹಾಡಿನಲ್ಲಿನ ತಮ್ಮ ಮಾತುಗಳನ್ನು ಪತ್ರಕರ್ತರೊಬ್ಬರು ನಿತೇಶ್ ತಿವಾರಿ ಅವರ ರಾಮಾಯಣ ಹಾಡುಗಳು ಮತ್ತು ಮ್ಯೂಸಿಕ್ ಅನ್ನು ಹೋಲಿಸಿದ ನಂತರ ಜಾವೇದ್ ಅಖ್ತರ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ಎಆರ್ ರೆಹಮಾನ್ ಸಂಗೀತ ಸಂಯೋಜಿಸಿ ಅಖ್ತರ್ ಬರೆದಿರುವ ಪಲ್ ಪಲ್ ಹೈ ಭಾರಿ ಹಾಡಿನಲ್ಲಿ 'ಮನ್ ಸೆ ರಾವಣ್ ಜೋ ನಿಕಲೆ, ರಾಮ್ ಉಸ್ಕೆ ಮನ್ ಮೈ ಹೈ' ಎಂಬ ಸಾಲು ಇದೆ.

Javed Akhtar
'ರಾಮಾಯಣ ಚಿತ್ರದ ಸಂಗೀತದಿಂದ ನಿರಾಶೆಯಾಗಿದೆ': ರಮಾನಂದ ಸಾಗರ್ ರಾಮಾಯಣದಲ್ಲಿ ಲಕ್ಷ್ಮಣನಾಗಿ ನಟಿಸಿದ್ದ ಸುನೀಲ್ ಲಹರಿ!

ಎ.ಆರ್. ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಅವರ ಸಹಯೋಗದ ಹೊರತಾಗಿಯೂ, ರಾಮಾಯಣ ಚಿತ್ರದ ಸಂಗೀತವು ಟೀಕೆಗಳಿಗೆ ಗುರಿಯಾಗಿದೆ.

ರಮಾನಂದ ಸಾಗರ್ ಅವರ ರಾಮಾಯಣದಲ್ಲಿ (1987-88) ಲಕ್ಷ್ಮಣನ ಪಾತ್ರವನ್ನು ನಿರ್ವಹಿಸಿದ ಸುನಿಲ್ ಲಹರಿ, ಚಿತ್ರದ ಸಂಗೀತವು ತಮ್ಮನ್ನು ನಿರಾಶೆಗೊಳಿಸಿತು ಎಂದು ಈ ಹಿಂದೆ ಹೇಳಿದ್ದರು.

ಸಂಗೀತದ ಬಗ್ಗೆ ಮಾತನಾಡಿದ ಸುನಿಲ್, 'ನನಗೆ ನಂಬಿಕೆಯಿದೆ... ನಿತೇಶ್ ಜಿ ಒಬ್ಬ ಅತ್ಯುತ್ತಮ ನಿರ್ದೇಶಕರು; ಅವರು ಹಿಂದೆ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಸಂಗೀತವು ಬಹಳ ಪ್ರಮುಖ ಪಾತ್ರ ವಹಿಸುತ್ತದೆ—ಒಂದು ರೀತಿಯಲ್ಲಿ ಹೇಳಬೇಕೆಂದರೆ, ಅದು ಬೆನ್ನೆಲುಬಿನಂತೆ ಕಾರ್ಯನಿರ್ವಹಿಸುತ್ತದೆ. ಈ ಚಿತ್ರಕ್ಕಾಗಿ ನಾನು ಕೇಳಿರುವ ಸಂಗೀತದ ವಿಷಯಕ್ಕೆ ಬಂದರೆ, ಕೆಲವು ಹಾಡುಗಳು ನನಗೆ ಸ್ವಲ್ಪ ನಿರಾಶೆಯನ್ನುಂಟುಮಾಡಿದವು' ಎಂದಿದ್ದಾರೆ.

ಸಂಗೀತದಲ್ಲಿ ಅಯೋಧ್ಯೆ ಮತ್ತು ಮಿಥಿಲೆಯ ಸ್ಥಳೀಯ ಸೊಗಡು ಇರಬೇಕಿತ್ತು. ಆದರೆ ಅದು ಅಲ್ಲಿ 'ಕಾಣೆಯಾಗಿದೆ'. ತಾನು ಸಂಗೀತದ ವಿಷಯದಲ್ಲಿ ಪರಿಣಿತನಲ್ಲ; ಆದರೂ, ಒಬ್ಬ ಕೇಳುಗನಾಗಿ ತನ್ನ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದೇನೆ ಎಂದರು.

ಚಿತ್ರವು ದೊಡ್ಡ ಮಟ್ಟದ ಯಶಸ್ಸನ್ನು ಕಾಣಲಿ ಎಂದು ಹಾರೈಸಿದ ಸುನೀಲ್ ಲಹರಿ, ಅನೇಕ ಜನರ ಜೀವನೋಪಾಯವು ಈ ಚಿತ್ರದೊಂದಿಗೆ ಬೆಸೆದುಕೊಂಡಿರುವುದರಿಂದ, ಇದು ಖಂಡಿತವಾಗಿಯೂ ದೊಡ್ಡ ಹಿಟ್ ಆಗಬೇಕಿದೆ ಎಂದು ಹೇಳಿದರು.

4,000 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾದ ರಾಮಾಯಣ, ಭಾರತೀಯ ಸಿನಿಮಾ ಇದುವರೆಗೆ ಕಂಡ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರ ಎಂದು ಹೇಳಲಾಗುತ್ತಿದೆ.

ಆರಂಭಿಕ ವಾರಾಂತ್ಯದಲ್ಲಿ ಅಸಮಂಜಸ ಪ್ರದರ್ಶನದೊಂದಿಗೆ, ರಾಮಾಯಣ ಸ್ಥಿರವಾಗಿ ಚೇತರಿಸಿಕೊಂಡಿತು. ಚಿತ್ರದ ಒಟ್ಟು ದೇಶೀಯ ಸಂಗ್ರಹವು ₹981.10 ಕೋಟಿಗೆ ಏರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X