ಅರೆಬೆತ್ತಲೆ ವ್ಯಕ್ತಿ ಜೊತೆಗೆ ಬಾಲಿವುಡ್ ಬೆಡಗಿ ಊರ್ವಶಿ ರೌಟೆಲಾ! Video ವೈರಲ್

ಆಕರ್ಷಕ ಹಸಿರು ಬಣ್ಣದ ಉಡುಪನ್ನು ಧರಿಸಿರುವ ರೌಟೆಲಾ, ಆ ವ್ಯಕ್ತಿಯೊಂದಿಗೆ ಪೋಸ್ ನೀಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದೆ.
Urvashi Rautela
ಊರ್ವಶಿ ರೌಟೆಲಾ
Updated on: 

ಬಾಲಿವುಡ್ ನಟಿ ಊರ್ವಶಿ ರೌಟೆಲಾ ಇತ್ತೀಚಿಗೆ ಅರೆಬೆತ್ತಲೆ ವ್ಯಕ್ತಿ ಜೊತೆಗೆ ಇರುವ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದ್ದಾರೆ.

ಆಕರ್ಷಕ ಹಸಿರು ಬಣ್ಣದ ಉಡುಪನ್ನು ಧರಿಸಿರುವ ರೌಟೆಲಾ, ಆ ವ್ಯಕ್ತಿಯೊಂದಿಗೆ ಪೋಸ್ ನೀಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದ್ದು, ಅವರೊಂದಿಗೆ ಇರುವ ಆ ವ್ಯಕ್ತಿ ಯಾರು ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.

ಊರ್ವಶಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಆಕರ್ಷಕ ಹಸಿರು ದಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಪುರುಷ ಮಾಡೆಲ್ ಒಬ್ಬರೂ ಇದ್ದು, ಇಬ್ಬರೂ ಕ್ಯಾಮೆರಾ ಮುಂದೆ ಆಪ್ತವಾಗಿ ಪೋಸ್ ನೀಡುತ್ತಿದ್ದಾರೆ. ಇವರಿಬ್ಬರ ನಡುವಿನ ಹೊಂದಾಣಿಕೆ (ಕೆಮಿಸ್ಟ್ರಿ) ನೆಟ್ಟಿಗರ ಗಮನ ಸೆಳೆದಿದ್ದು, ಆ ಅಪರಿಚಿತ ವ್ಯಕ್ತಿ ಯಾರೆಂದು ತಿಳಿಯಲು ಅವರು ಪ್ರಯತ್ನಿಸುತ್ತಿದ್ದಾರೆ.

ಈ ವಿಡಿಯೋಗೆ ನೆಟ್ಟಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಊರ್ವಶಿಯ ಆಕರ್ಷಕ ಲುಕ್ ಅನ್ನು ಶ್ಲಾಘಿಸಿದರೆ, ಇನ್ನು ಕೆಲವರು ಅವರೊಂದಿಗೆ ಕಾಣಿಸಿಕೊಂಡ ವ್ಯಕ್ತಿಯ ಬಗ್ಗೆ ತಿಳಿಯಲು ಹೆಚ್ಚು ಆಸಕ್ತಿ ವಹಿಸಿದ್ದಾರೆ. ನೆಟ್ಟಿಗರೊಬ್ಬರು "ಈ ವ್ಯಕ್ತಿ ಯಾರು?" ಎಂದು ಕೇಳಿದರೆ, ಮತ್ತೊಬ್ಬರು ಊರ್ವಶಿ ಬಹುಶಃ ಸಿನಿಮಾವೊಂದರ ಚಿತ್ರೀಕರಣದಲ್ಲಿ ಭಾಗವಹಿಸುತ್ತಿರಬಹುದು ಎಂದು ಊಹಿಸಿದ್ದಾರೆ; ಹಾಗೆಯೇ ಇನ್ನೊಬ್ಬರು ಯಾವ ಸಿನಿಮಾದ ಚಿತ್ರೀಕರಣಕ್ಕಾಗಿ ಈ ವಿಡಿಯೋ ಮಾಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.

Urvashi Rautela
ಬಾಲಿವುಡ್ ನಟಿ ಊರ್ವಶಿ ರೌಟೆಲಾ ನಕಲಿ ಆಧಾರ್ ಕಾರ್ಡ್ ದುರ್ಬಳಕೆ!

ಈ ವಿಡಿಯೋ ಚಿತ್ರೀಕರಣದ ಭಾಗವಾಗಿರುವಂತೆ ತೋರುತ್ತಿದ್ದು, ಬಹುಶಃ ಜಾಹೀರಾತಿಗಾಗಿ ಇರಬಹುದು. ಆದಾಗ್ಯೂ, ಆ ಪ್ರಾಜೆಕ್ಟ್ ಅಥವಾ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯ ಗುರುತಿನ ಬಗ್ಗೆ ಊರ್ವಶಿಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ಅನುಯಾಯಿಗಳಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com