'ತಿಲಕ ಹಣೆಗೆ ಬೇಡ, ಕೈಗೆ ಇಡಿ' ಎಂದ ಬಾಲಿವುಡ್ ನಿರ್ದೇಶಕಿ ಫರಾ ಖಾನ್, ನೆಟ್ಟಿಗರಿಂದ ಟೀಕೆ; Video

ಸಾರ್ವಜನಿಕ ಕಾರ್ಯಕ್ರಮದಲ್ಲಿ ನಡೆದ ಈ ಘಟನೆ ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗಿದ್ದು, ಸಾಂಪ್ರದಾಯಿಕವಾಗಿ ಹಣೆಗೆ ತಿಲಕ ಇಡುವುದನ್ನು ನಿರಾಕರಿಸಿದ್ದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Farah Khan
ಫರಾ ಖಾನ್
Updated on: 

ಬಾಲಿವುಡ್ ಚಿತ್ರ ನಿರ್ದೇಶಕಿ ಹಾಗೂ ನೃತ್ಯ ಸಂಯೋಜಕಿ ಫರಾ ಖಾನ್ ಅವರು ಕಾರ್ಯಕ್ರಮವೊಂದರಲ್ಲಿ ತಮ್ಮ ಹಣೆಗೆ ತಿಲಕ ಇಡಿಸಿಕೊಳ್ಳಲು ನಿರಾಕರಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಟೀಕೆಗೆ ಗುರಿಯಾಗಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮದಲ್ಲಿ ನಡೆದ ಈ ಘಟನೆ ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗಿದ್ದು, ಸಾಂಪ್ರದಾಯಿಕವಾಗಿ ಹಣೆಗೆ ತಿಲಕ ಇಡುವುದನ್ನು ನಿರಾಕರಿಸಿದ್ದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೈರಲ್ ಆಗಿರುವ ವಿಡಿಯೊದಲ್ಲಿ ಕಾರ್ಯಕ್ರಮವೊಂದರಲ್ಲಿ ಫರಾ ಖಾನ್ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸುವುದನ್ನು ಕಾಣಬಹುದು. ಮಹಿಳೆಯೊಬ್ಬರು ಅವರ ಹಣೆಗೆ ತಿಲಕ ಇಡಲು ಮುಂದಾದಾಗ, ನಿರ್ದೇಶಕಿ ಫರಾ ಖಾನ್ ಅದನ್ನು ನಿರಾಕರಿಸಿ, ಬದಲಿಗೆ ತಮ್ಮ ಕೈಗೆ ತಿಲಕ ಇಡುವಂತೆ ವಿನಯದಿಂದ ಕೇಳಿಕೊಂಡಿದ್ದಾರೆ. ಅದರಂತೆ ಕೈಗೆ ತಿಲಕ ಇರಿಸಿಕೊಂಡಿದ್ದಾರೆ.

Farah Khan
Farah Khan-ಹೋಳಿ ಛಪ್ರಿಗಳ ಹಬ್ಬ ಎಂದು ಕರೆದ ಬಾಲಿವುಡ್ ನಿರ್ದೇಶಕಿ ಫರಾ ಖಾನ್: ಎಫ್ ಐಆರ್ ದಾಖಲು

ಸಾಂಪ್ರದಾಯಿಕ ಸ್ವಾಗತವನ್ನು ಸ್ವೀಕರಿಸಲು ನಿರಾಕರಿಸಿದ್ದಕ್ಕೆ ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಣೆಗೆ ತಿಲಕ ಇಡುವುದನ್ನು ಅವರು ಒಪ್ಪಿಕೊಳ್ಳಬೇಕಿತ್ತು ಎಂದು ಕೆಲವರು ವಾದಿಸಿದ್ದಾರೆ. ಈ ವಿಡಿಯೊ ವ್ಯಾಪಕವಾಗಿ ಹರಿದಾಡಿದ್ದು, ಕೆಲವರು ಈ ಘಟನೆಯನ್ನು ಕೋಮು ದೃಷ್ಟಿಕೋನದಿಂದ ಬಿಂಬಿಸಿ, ಧಾರ್ಮಿಕ ಆಚರಣೆಗೆ ಅವರು ನೀಡಿದ ಪ್ರತಿಕ್ರಿಯೆಯನ್ನು ಪ್ರಶ್ನಿಸಿದ್ದಾರೆ.

ಎಕ್ಸ್‌ ಬಳಕೆದಾರರೊಬ್ಬರು, ಮಹಿಳೆಯೊಬ್ಬರು ಸ್ವಾಗತದ ಭಾಗವಾಗಿ ತಿಲಕ ಇಡಲು ಮುಂದಾದಾಗ ಫರಾ ಖಾನ್‌ಗೆ ಬೇಸರವಾಗುತ್ತದೆ. ಇಸ್ಲಾಂನಲ್ಲಿ ಹರಾಮ್ ಎಂದು ಪರಿಗಣಿಸಲಾಗುವ ನೇಲ್ ಪಾಲಿಶ್ ಬಳಸುವ ಅವರು, ತಿಲಕವು ಹಿಂದೂ ಸಂಪ್ರದಾಯವಾಗಿರುವುದರಿಂದ ಅದನ್ನು ಇಡಿಸಿಕೊಳ್ಳಲು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಬಾಲಿವುಡ್‌ನ ಸ್ವಯಂಘೋಷಿತ ಸೆಲೆಬ್ರಿಟಿಗಳಿಂದ ಇಂತಹದ್ದನ್ನೇ ನಿರೀಕ್ಷಿಸಬಹುದು ಎಂದು ಬರೆದಿದ್ದಾರೆ.

ಮತ್ತೊಬ್ಬರು, ಮಹಿಳೆಯೊಬ್ಬರು ಹಣೆಗೆ ತಿಲಕ ಇಡಲು ಮುಂದಾದಾಗ ಬಾಲಿವುಡ್‌ನ ಸ್ವಯಂಘೋಷಿತ ಉದಾರವಾದಿ ನಿರ್ದೇಶಕಿ ಫರಾ ಖಾನ್‌ಗೆ ಬೇಸರವಾಗಿದೆ. ಇದೇನಾ ಗಂಗಾ-ಜಮುನಿ ತಹಜೀಬ್ ಎಂದು ಬರೆದಿದ್ದಾರೆ.

ಮತ್ತೊಬ್ಬರು, ಜಾತ್ಯತೀತರೆಂದು ಹೇಳಿಕೊಳ್ಳುವ ಫರಾ ಖಾನ್ ಹಣೆಗೆ ತಿಲಕ ಇಡಿಸಿಕೊಳ್ಳಲು ಏಕೆ ನಿರಾಕರಿಸಿದರು ಎಂದು ಪ್ರಶ್ನಿಸಿದ್ದಾರೆ.

ಇನ್ನು ಕೆಲವರು ಫರಾ ಖಾನ್ ಅವರನ್ನು ಬೆಂಬಲಿಸಿದ್ದಾರೆ. ಧಾರ್ಮಿಕ ಅಥವಾ ಸಾಂಸ್ಕೃತಿಕ ಆಚರಣೆಯಲ್ಲಿ ಹೇಗೆ ಪಾಲ್ಗೊಳ್ಳಬೇಕು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇರಬೇಕು, ವೈಯಕ್ತಿಕ ಆಯ್ಕೆ ಮತ್ತು ಮಿತಿಗಳನ್ನು ಗೌರವಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com