"Angoor Khatte Hain": ರಿಯಾಲಿಟಿ ಶೋಗಳು 'ಫೇಕ್' ಎಂದಿದ್ದ ಸುನಿಧಿ ಚೌಹಾಣ್ ಗೆ ನೇಹಾ ಕಕ್ಕರ್ ತಿರುಗೇಟು! Video

ಪ್ರಸ್ತುತ ರಿಯಾಲಿಟಿ ಶೋಗಳಲ್ಲಿ ಹೆಚ್ಚು ನಾಟಕೀಯತೆ ಇರುತ್ತದೆ ಮತ್ತು ಅವು ಹಿಂದೆ ಇದ್ದಷ್ಟು ನೈಜವಾಗಿಲ್ಲ ಎಂದು ಸುನಿಧಿ ಈ ಹಿಂದೆ ಹೇಳಿದ್ದರು.
Sunidhi Chauhan, Neha Kakkar
ಸುನಿಧಿ ಚೌಹಾಣ್, ನೇಹಾ ಕಕ್ಕರ್
Updated on

ಬಾಲಿವುಡ್ ನ ಹೆಸರಾಂತ ಗಾಯಕಿ ನೇಹಾ ಕಕ್ಕರ್ ಹಲವು ವರ್ಷಗಳಿಂದ ರಿಯಾಲಿಟಿ ಶೋಗಳಲ್ಲಿ ಪರಿಚಿತ ಮುಖವಾಗಿದ್ದಾರೆ. ಅವರು ಅನೇಕ ಗಾಯನ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದು, ಈ ಕಾರ್ಯಕ್ರಮಗಳ ಸ್ವರೂಪವನ್ನು ಹತ್ತಿರದಿಂದ ಕಂಡಿದ್ದಾರೆ. ಆದರೆ ಅಂತಹ ರಿಯಾಲಿಟಿ ಶೋಗಳನ್ನು ಫೇಕ್ ಎಂದಿದ್ದ ಸುನಿಧಿ ಚೌಹಾಣ್ ಗೆ ತಿರುಗೇಟು ನೀಡಿದ್ದಾರೆ.

ಪ್ರಸ್ತುತ ರಿಯಾಲಿಟಿ ಶೋಗಳಲ್ಲಿ ಹೆಚ್ಚು ನಾಟಕೀಯತೆ ಇರುತ್ತದೆ ಮತ್ತು ಅವು ಹಿಂದೆ ಇದ್ದಷ್ಟು ನೈಜವಾಗಿಲ್ಲ ಎಂದು ಸುನಿಧಿ ಈ ಹಿಂದೆ ಹೇಳಿದ್ದರು. ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ನೇಹಾ, ಈ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಲಾಗುವ ಭಾವನೆಗಳು ಮತ್ತು ಸಂಕಷ್ಟಗಳು ಕೇವಲ 'ಸ್ಕ್ರಿಪ್ಟೆಡ್' (ಮುಂಚಿತವಾಗಿ ಬರೆದ ಸಂಭಾಷಣೆ ಅಥವಾ ಸನ್ನಿವೇಶ) ಎಂದು ಹೇಳಲಾಗುವುದಿಲ್ಲ ಎಂದು ಪ್ರತಿಪಾದಿಸಿದರು.

ನಂತರ ಅವರು "ಅಂಗೂರ್ ಖಟ್ಟೆ ಹೈಂ" (ದ್ರಾಕ್ಷಿ ಹುಳಿ) ಎಂದು ಹೇಳುವ ಮೂಲಕ ಸುನಿಧಿಯವರನ್ನು ಪರೋಕ್ಷವಾಗಿ ಲೇವಡಿ ಮಾಡಿದಂತಿದೆ.

ಇತ್ತೀಚಿನ ಮಾಧ್ಯಮ ಸಂವಾದವೊಂದರಲ್ಲಿ ರಿಯಾಲಿಟಿ ಶೋಗಳು ಸ್ಕ್ರಿಪ್ಟೆಡ್ ಆಗಿರುತ್ತವೆ ಎಂಬ ಆರೋಪಗಳ ಬಗ್ಗೆ ನೇಹಾ ಕಕ್ಕರ್ ಅವರನ್ನು ಕೇಳಲಾಯಿತು. ಈ ಅಭಿಪ್ರಾಯವನ್ನು ತಕ್ಷಣವೇ ತಳ್ಳಿಹಾಕಿದ ನೇಹಾ ಕಕ್ಕರ್, ತಾವು ತೀರ್ಪುಗಾರರಾಗಿದ್ದ ಅವಧಿಯಲ್ಲಿ ಶೋನ ಉತ್ತಮ ಟಿಆರ್‌ಪಿ (TRP) ರೇಟಿಂಗ್‌ಗೆ ತಾವೇ ಕಾರಣ ಎಂದು ತಮಾಷೆಯಾಗಿ ಹೇಳಿಕೊಂಡರು.

"ನಾನು ಇದನ್ನು ಮಾಡುವುದನ್ನು ನಿಲ್ಲಿಸಿದ್ದರಿಂದಲೇ ಆ ಜನಪ್ರಿಯತೆ ಕುಸಿಯಿತು. ನಾನು ಮಾಡುತ್ತಿದ್ದಾಗ ಟಿಆರ್‌ಪಿ ಅತ್ಯಧಿಕ ಮಟ್ಟದಲ್ಲಿತ್ತು ಎಂದರು. ಇದೇ ವೇಳೆ ಸಿಂಗಿಂಗ್ ರಿಯಾಲಿಟಿ ಶೋಗಳು ಸ್ಕ್ರಿಪ್ಟೆಡ್ ಮತ್ತು ಫೇಕ್' ಎಂದು ಹೇಳಿದ್ದ ಸುನಿಧಿ ಚೌಹಾಣ್ ಮತ್ತು ಇತರ ಮಾಜಿ ತೀರ್ಪುಗಾರರ ಬಗ್ಗೆ ಕೇಳಿದಾಗ, ನೇಹಾ ಚುರುಕಾದ ಪ್ರತಿಕ್ರಿಯೆ ನೀಡಿದರು. ಅವರು, "ದ್ರಾಕ್ಷಿ ಸಿಗದಿದ್ದರೆ ಅವು ಹುಳಿ ಎನಿಸುತ್ತವೆ. ದ್ರಾಕ್ಷಿ ಸಿಗದವರಿಗೆ ಅವು ಹುಳಿಯಾಗಿಯೇ ಕಾಣುತ್ತವೆ ಎಂದು ಹೇಳಿದರು.

ಸಿಂಗಿಂಗ್ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳ ಪಯಣ ಮತ್ತು ಅವರು ವ್ಯಕ್ತಪಡಿಸುವ ಭಾವನೆಗಳ ನೈಜತೆಯನ್ನು ನೇಹಾ ಕಕ್ಕರ್ ಎತ್ತಿಹಿಡಿದರು. ಈ ಶೋಗಳು ಖಂಡಿತವಾಗಿಯೂ ಸ್ಕ್ರಿಪ್ಟೆಡ್ ಆಗಿರುವುದಿಲ್ಲ. ಜನರ ಜೀವನವೂ ಸ್ಕ್ರಿಪ್ಟೆಡ್ ಆಗಿರುವುದಿಲ್ಲವಲ್ಲ. ಯಾರಾದರೂ ತಮ್ಮ ಕಥೆಯನ್ನು ಹೇಳುವಾಗ ನನಗೆ ಭಾವನೆಗಳು ಉಂಟಾದರೆ, ಆ ಭಾವನೆ ಸಹಜವಾದುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಹಂಚಿಕೊಳ್ಳುವ ವೈಯಕ್ತಿಕ ಅನುಭವಗಳು ಮತ್ತು ಅವರು ಎದುರಿಸಿದ ಸಂಕಷ್ಟಗಳನ್ನು ಸುಮ್ಮನೆ ಕಲ್ಪಿಸಿಕೊಂಡು ಸೃಷ್ಟಿಸಲು ಸಾಧ್ಯವಿಲ್ಲ. "ನಾವೆಲ್ಲರೂ ವಿವಿಧ ಸಣ್ಣ ಪಟ್ಟಣಗಳಿಂದ ಬಂದವರು ಮತ್ತು ಇಲ್ಲಿಗೆ ತಲುಪಲು ಅನೇಕ ಅಡೆತಡೆಗಳನ್ನು ದಾಟಿ ಬಂದಿದ್ದೇವೆ. ಸ್ಪರ್ಧಿಗಳು ಯಾವುದೇ ಹೊಸ ಕಥೆಯನ್ನು ಸೃಷ್ಟಿಸುವುದಿಲ್ಲ. ಸತ್ಯವೆಂದರೆ ಸತ್ಯವೇ, ಮತ್ತು ನಾವು ನೋಡುವುದು ಅದೇ ಸತ್ಯವನ್ನು ಎಂದು ಅವರು ಹೇಳಿದರು.

Sunidhi Chauhan, Neha Kakkar
'ಇದರಲ್ಲಿ ನನ್ನ ಗಂಡನನ್ನು ಎಳೆಯಬೇಡಿ': ವಿಚ್ಛೇದನ ವದಂತಿಗೆ ಗಾಯಕಿ ನೇಹಾ ಕಕ್ಕರ್ ತೀವ್ರ ಅಸಮಧಾನ!

ಈ ಹಿಂದೆ ರಾಜ್ ಶಮಾನಿ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಸುನಿಧಿ ಚೌಹಾಣ್, ರಿಯಾಲಿಟಿ ಶೋಗಳ ಪ್ರಸ್ತುತ ಸ್ಥಿತಿಯನ್ನು ಟೀಕಿಸಿದ್ದರು. ಪರದೆಯ ಮೇಲೆ ಕಾಣಿಸುವ ವಿಷಯಗಳಲ್ಲಿ ಹೆಚ್ಚಿನವು ನೈಜವಾಗಿರುವುದಕ್ಕಿಂತ ಹೆಚ್ಚಾಗಿ 'ಕೃತಕ'ವಾಗಿರುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಆದಾಗ್ಯೂ, ಈ ಮಾದರಿಯ ಕಾರ್ಯಕ್ರಮಗಳಲ್ಲಿ ತಾವು ಕೆಲಸ ಮಾಡಿದ ಆರಂಭಿಕ ದಿನಗಳನ್ನು ಆನಂದಿಸಿದ್ದಾಗಿ ಹೇಳಿದ ಅವರು, 'ಇಂಡಿಯನ್ ಐಡಲ್' ಕಾರ್ಯಕ್ರಮದೊಂದಿಗಿನ ತಮ್ಮ ಅನುಭವವನ್ನು ತಮ್ಮ ವೃತ್ತಿಜೀವನದ ಒಂದು ಸಕಾರಾತ್ಮಕ ಹಂತ ಎಂದು ಹೇಳಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com