'ಶಾರುಖ್ ಖಾನ್‌ಗೆ ಏನಾಯಿತು?' ನಡೆಯಲು ಕಷ್ಟಪಡುತ್ತಿರುವ ಖ್ಯಾತ ನಟ, Video ವೈರಲ್, ಅಭಿಮಾನಿಗಳಲ್ಲಿ ಆತಂಕ!

ನಿರೀಕ್ಷೆಯಂತೆಯೇ ಶಾರುಖ್ ಖಾನ್ ಟಿ-ಸೀರೀಸ್ ಕಚೇರಿಗೆ ಆಗಮಿಸಿ ಆಶೀರ್ವಾದ ಪಡೆಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ
Shah Rukh Khan
ಶಾರುಖ್ ಖಾನ್‌
Updated on

ಬಾಲಿವುಡ್ ನಟ ಶಾರುಖ್ ಖಾನ್ ಇತ್ತೀಚೆಗೆ ತಮ್ಮ ಮ್ಯಾನೇಜರ್ ಪೂಜಾ ದದ್ಲಾನಿ ಅವರೊಂದಿಗೆ ಟಿ-ಸೀರೀಸ್ (T-Series) ಕಚೇರಿಗೆ ಭೇಟಿ ನೀಡಿದ್ದು, ಅಲ್ಲಿ ಪ್ರತಿಷ್ಠಾಪಿಸಿದ ಗಣಪತಿಯ ಆಶೀರ್ವಾದ ಪಡೆದಿದ್ದಾರೆ. ಕಪ್ಪು-ಬಿಳುಪಿನ ಚೆಕ್ಡ್ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದ ನಟ, ಗಣಪತಿ ಪ್ರತಿಷ್ಠಾಪಿಸಿದ್ದ ಸ್ಥಳದತ್ತ ಸಾಗುತ್ತಿರುವುದು ಕಂಡುಬಂದಿದೆ.

ನಿರೀಕ್ಷೆಯಂತೆಯೇ ಶಾರುಖ್ ಖಾನ್ ಟಿ-ಸೀರೀಸ್ ಕಚೇರಿಗೆ ಆಗಮಿಸಿ ಆಶೀರ್ವಾದ ಪಡೆಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ ನಟ ನಡೆಯುವಾಗ ತೊಂದರೆ ಅನುಭವಿಸುತ್ತಿರುವಂತೆ ಕಂಡುಬಂದಿದ್ದರಿಂದ ಕೆಲವು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಪೂಜಾ ದದ್ಲಾನಿ ಮತ್ತು ಶಾರುಖ್ ಖಾನ್ ಗಣಪತಿಯ ಆಶೀರ್ವಾದ ಪಡೆಯಲು ಟಿ-ಸೀರೀಸ್ ಕಚೇರಿಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು. ಆರಂಭದಲ್ಲಿ ನಟ ಸಹಜವಾಗಿ ನಡೆಯುತ್ತಿರುವಂತೆ ಕಂಡರೂ, ವಿಡಿಯೋದ ಕೆಲವು ಭಾಗಗಳಲ್ಲಿ ಅವರು ನಡೆಯಲು ಕಷ್ಟಪಡುತ್ತಿರುವುದನ್ನು ಸಾಮಾಜಿಕ ಜಾಲತಾಣದ ಬಳಕೆದಾರರು ಗಮನಿಸಿದ್ದಾರೆ. ಆಶೀರ್ವಾದ ಪಡೆದ ನಂತರ ಕಚೇರಿಯಿಂದ ಹೊರಬರುವಾಗಲೂ ಇದನ್ನೆ ಕೆಲವು ಅಭಿಮಾನಿಗಳು ಕಂಡಿದ್ದಾರೆ.

ಈ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆದ ಬಳಿಕ ಅನೇಕ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದು, ನಟ ಆರೋಗ್ಯವಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. "ಅವರ ಬಗ್ಗೆ ಯಾವುದೇ ದ್ವೇಷವಿಲ್ಲ, ಆದರೆ ಅವರನ್ನು ಈ ಸ್ಥಿತಿಯಲ್ಲಿ ನೋಡಿ ನನಗೆ ತುಂಬಾ ಬೇಸರವಾಯಿತು. ಅವರಿಗೆ ಸರಿಯಾಗಿ ನಡೆಯಲೂ ಸಾಧ್ಯವಾಗುತ್ತಿಲ್ಲ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

Shah Rukh Khan
ಶಾರುಖ್ ಖಾನ್ ಪುತ್ರಿ ಸುಹಾನ ಖಾನ್‌ ಹೊಸ ಫೋಟೋ ನೋಡಿ ನೆಟಿಗರು ಕಕ್ಕಾಬಿಕ್ಕಿ, ಯಾಕೆ ಅಂತೀರಾ?

ಬಹುಶಃ ಅವರ ಮುಂಬರುವ ಚಿತ್ರ 'ಕಿಂಗ್'ಗಾಗಿ ಶೇ. 80ರಷ್ಟು ಭಾಗದ ಚಿತ್ರೀಕರಣ ನಡೆಸಿದ್ದಾರೆ ಎಂಬ ವರದಿಗಳು ಕೇಳಿಬಂದಿವೆ. ಆಗಾಗಿ ವರ್ಕ್ ಔಟ್ ನಿಂದ ಹಾಗೆ ಆಗಿರಬಹುದು ಎಂದು ಕೆಲವರು ಹೇಳಿದರೆ, ಇಲ್ಲ ಅವರಿಗೆ ಗಾಯವಾಗಿರಬಹುದು, ಅನಾರೋಗ್ಯವಿರಬಹುದು ಅಥವಾ ಕೇವಲ ಸುಸ್ತಾಗಿರಬಹುದು ಇನ್ನೂ ಕೆಲವರು ಪ್ರತಿಕ್ರಿಯಿಸಿದ್ದಾರೆ.

X
Kannada Prabha
www.kannadaprabha.com