Video: ಪತ್ನಿ, ಮಗಳೊಂದಿಗೆ ಲಾಲ್‌ಬಾಗ್ಚಾ ರಾಜನ ದರ್ಶನ ಪಡೆದ ಶಾರುಖ್ ಖಾನ್; ಗಣೇಶನಿಗೆ ಭಕ್ತಿಯಿಂದ ಕೈಮುಗಿದ ಕಿಂಗ್ ಖಾನ್!

ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆ, ಪತ್ನಿ ಗೌರಿ ಖಾನ್ ಮತ್ತು ಮಗಳು ಸುಹಾನಾ ಖಾನ್ ಅವರೊಂದಿಗೆ ಲಾಲ್‌ಬಾಗ್ಚಾ ರಾಜನ ಪೆಂಡಲ್‌ಗೆ ಆಗಮಿಸಿ, ಸಿದ್ಧಿವಿನಾಯಕನಿಗೆ ಭಕ್ತಿಯಿಂದ ನಮಸ್ಕರಿಸಿದ್ದಾರೆ.
Actor Shah Rukh Khan Visits Lalbaugcha Raja With Gauri Khan, Suhana
ಶಾರುಖ್ ಖಾನ್
Updated on

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಗಣೇಶ ಚತುರ್ಥಿ ಹಬ್ಬದ ಸಂಭ್ರಮದ ನಡುವೆ ಬಾಲಿವುಡ್ ನಟ ಶಾರುಖ್ ಖಾನ್ ಅವರು ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಮುಂಬೈನ ಪ್ರಸಿದ್ಧ ಲಾಲ್‌ಬಾಗ್ಚಾ ರಾಜನ ದರ್ಶನ ಪಡೆದಿದ್ದಾರೆ.

ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆ ಸೋಮವಾರ ತಮ್ಮ ಪತ್ನಿ ಗೌರಿ ಖಾನ್ ಮತ್ತು ಮಗಳು ಸುಹಾನಾ ಖಾನ್ ಅವರೊಂದಿಗೆ ಲಾಲ್‌ಬಾಗ್ಚಾ ರಾಜನ ಪೆಂಡಲ್‌ಗೆ ಆಗಮಿಸಿ, ಸಿದ್ಧಿವಿನಾಯಕನಿಗೆ ಭಕ್ತಿಯಿಂದ ನಮಸ್ಕರಿಸಿದ್ದಾರೆ.

ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಅವರೊಂದಿಗೆ ಇದ್ದರು. ನಟ ಬಂದ ತಕ್ಷಣ, ಪೆಂಡಲ್‌ನ ಸುತ್ತಲಿನ ಜನಸಮೂಹ ಅವರನ್ನು ನೋಡಲು ಮತ್ತು ತಮ್ಮ ಫೋನ್‌ಗಳಲ್ಲಿ ಆ ಕ್ಷಣವನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿತು.

Actor Shah Rukh Khan Visits Lalbaugcha Raja With Gauri Khan, Suhana
ರಾಮ ಮಂದಿರ ತೀರ್ಪು ಬಂದಾಗ ಶಾರುಖ್, ಸಲ್ಮಾನ್, ಆಮಿರ್ ಖಾನ್ ಬಳಿ ಕ್ಷಮೆ ಕೇಳಿದ್ದೆ; ಹಿಂದೂವಾಗಿ ನನಗೆ ಅಸಹ್ಯವಾಗಿತ್ತು: ನಟಿ ಸ್ವರಾ ಭಾಸ್ಕರ್

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಆರತಿಯ ಸಮಯದಲ್ಲಿ ಶಾರುಖ್ ಖಾನ್ ಅವರು ಕೈಗಳನ್ನು ಜೋಡಿಸಿ ಪ್ರಾರ್ಥಿಸುತ್ತಿರುವುದನ್ನು ಕಾಣಬಹುದು. ಶಾರುಖ್ ಕಡು ನೀಲಿ ಬಣ್ಣದ ಕುರ್ತಾ-ಪೈಜಾಮ ಧರಿಸಿ ಹಣೆಯ ಮೇಲೆ ತಿಲಕ ಹಚ್ಚಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com