

ತಮಿಳುನಾಡಿನಾದ್ಯಂತ ಶುಕ್ರವಾರ ಸೂಪರ್‌ಸ್ಟಾರ್ ರಜನೀಕಾಂತ್ ಅವರ 64ನೇ ಹುಟ್ಟಹಬ್ಬದ ಸಂಭ್ರಮ. ಅವರ ಹುಟ್ಟಹಬ್ಬದ ಉಡುಗೊರೆಯಾಗಿ ವಿಶ್ವಾದ್ಯಂತ ತೆರಕಂಡ ಬಹುನಿರೀಕ್ಷಿತ ಲಿಂಗಾ ಸಿನಿಮಾ ಭಾರೀ ಹವಾ ಎಬ್ಬಿಸಿದೆ.
ಲಿಂಗ ಚಿತ್ರ ಬಿಡುಗಡೆ ಮತ್ತು ಹುಟ್ಟಹಬ್ಬದ ಸಂಭ್ರಮದಲ್ಲಿದ್ದ ಸೂಪರ್‌ಸ್ಟಾರ್ ರಜನೀ ಕಾಂತ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.
ರಜನಿಗೆ ದೇವರು ಆರೋಗ್ಯಪೂರ್ಣ ಹಾಗೂ ದೀರ್ಘ ಆಯಸ್ಸನ್ನು ಕೊಡಲಿ ಎಂದು ತಮಿಳು ಭಾಷೆಯಲ್ಲೇ ಪ್ರಧಾನಿ ಟ್ವೀಟಿಸಿದ್ದಾರೆ.
ಇದಲ್ಲದೇ ಡಿಎಂಕೆ ನಾಯಕ ಎಂ.ಕರುಣಾನಿಧಿ, ಎಂ.ಕೆ. ಸ್ಟಾಲಿನ್, ನಟರಾದ ಕಮಲ್‌ಹಾಸನ್ ಮತ್ತು ಮೋಹನ್ ಲಾಲ್, ಕೇಂದ್ರ ಸಚಿವ ಪೊನ್ ರಾಧಕೃಷ್ಣನ್ ಮತ್ತಿತರ ಮುಖಂಡರು ಹಾಗೂ ನಟ-ನಟಿಯರು ಶುಭಕೇರಿದ್ದಾರೆ.