ಬಾಲಚಂದರ್ ಎದ್ದು ಮುಗುಳ್ನಕ್ಕರು: ರಜನಿ

ಖ್ಯಾತ ಚಲನಚಿತ್ರ ನಿರ್ದೇಶಕ, ರಜನಿಕಾಂತ್ ಮತ್ತು ಕಮಲಹಾಸನ್ ಅವರ ಗುರು
ಕೆ ಬಾಲಚಂದರ್
ಕೆ ಬಾಲಚಂದರ್

ಚೆನ್ನೈ: ಖ್ಯಾತ ಚಲನಚಿತ್ರ ನಿರ್ದೇಶಕ, ರಜನಿಕಾಂತ್ ಮತ್ತು ಕಮಲಹಾಸನ್ ಅವರ ಗುರು ಕೆ. ಬಾಲಚಂದರ್ ಅವರ ಸ್ಥಿತಿ ಸುಧಾರಿಸಿಕೊಳ್ಳುತ್ತಿದೆ, ಆದರೆ ಇನ್ನೂ ಗಂಭೀರ ಎಂದು ಸಂಜೆ ೬ ಘಂಟೆಗೆ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಇವರನ್ನು ಕಾಣಲು ಬಂದ ನಟರ ಹೇಳಿಕೆಗಳೂ ಕೂಡ ಇದನ್ನೇ ಧ್ವನಿಸಿವೆ.

ಕಾವೇರಿ ಆಸ್ಪತ್ರೆಗೆ ಸಂಜೆ ೫:೪೫ ಕ್ಕೆ ಬಂದ ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸುಮಾರು ಅರ್ಧ ಘಂಟೆ ಸಮಯ ಕಳೆದರು. ಆಸ್ಪತ್ರೆಗೆ ಬಂದಾಗ ಕನಲಿದಂತೆ ಮತ್ತು ಒದ್ದೆ ಕಣ್ಣುಗಳಿಂದ ಕಂಡು ಬಂದ ನಟ, ಐ ಸಿ ಯು ನಿಂದ ಹೊರ ಬಂದ ನಂತರ, ಮುತ್ತಿಕೊಂಡ ಮಾಧ್ಯಮದವರು ಮತ್ತು ರೋಗಿಗಳಿಗೆ "ಕೆ ಬಿ ಸರ್ ನೋಡಲು ಹೋಗಿದ್ದೆ. ಅವರು ನನ್ನನು ಗುರುತಿಸಿದರು ಎಂದು ಹೇಳಲು ಸಂತೋಷವಾಗುತ್ತಿದೆ. ಅವರು ಈಗ ಚೆನ್ನಾಗಿದ್ದಾರೆ ಮತ್ತು ಬೇಗ ಸುಧಾರಿಸಿಕೊಳ್ಳುತ್ತಾರೆ" ಎಂದಿದ್ದಾರೆ.

ನಟಿ ಮತ್ತು ರಾಜಕಾರಿಣಿ ಖುಷ್ಬು ಕೂಡ ತುಂಬಿದ ಕಣ್ಣುಗಳಿಂದಲೇ ಆಸ್ಪತ್ರೆಗೆ ಬಂದರೂ, ಐ ಸಿ ಯು ಇಂದ ಹೊರ ಬಂದಾಗ ಸ್ವಲ್ಪ ಸಮಾಧಾನದಿಂದ ಇದ್ದಂತಿತ್ತು. "ಅವರು ಚೆನ್ನಾಗಿದ್ದಾರೆ. ದಯವಿಟ್ಟು ಆ ದೊಡ್ಡ ಮನುಷ್ಯನ ಬಗ್ಗೆ ವದಂತಿಗಳನ್ನು ಹಬ್ಬಿಸಬೇಡಿ. ಅವರಿಗೆ ವಯಸ್ಸಾಗಿದೆ ಆದುದರಿಂದ ಅವರು ಆಸ್ಪತ್ರೆಯಲ್ಲಿದ್ದಾರೆ. ಅವರು ಚೆನ್ನಾಗಿದ್ದಾರೆ, ಅವರು ಚಚೆನ್ನಾಗಿದ್ದಾರೆ" ಎಂದು ಹೇಳಿ ಹೊರನಡೆದರು.

ಖ್ಯಾತ ತಮಿಳು ಚಲನಚಿತ್ರ ನಿರ್ದೇಶಕ ಕೆ ಬಾಲಚಂದರ್ ಕನ್ನಡದಲ್ಲು 'ಬೆಂಕಿಯಲ್ಲಿ ಅರಳಿದ ಹೂವು' ಮತ್ತು 'ತಪ್ಪಿದ ತಾಳ' ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com