
ಪಿಕೆ ಚಿತ್ರದಲ್ಲಿ ಮಿಸ್ಟರ್ ಪರ್ಫೆಕ್ಟನಿಸ್ಟ್ ಅಮೀರ್ ಖಾನ್ ಬೆತ್ತಲಾಗುವ ಮೂಲಕ ದೇಶಾದ್ಯಂತ ಬಾರಿ ಸುದ್ದಿ ಮಾಡಿದ್ದರು. ಸುದ್ದಿಗಿಂತ ಚಿತ್ರಕ್ಕೆ ಬಿಟ್ಟಿ ಪ್ರಚಾರ ಸಿಕ್ಕಿದ್ದೇ ಹೆಚ್ಚಾಗಿತ್ತು. ಆದೇ ರೀತಿ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಚಿತ್ರ ತಂಡ ಅಂತಹ ಪ್ರಯತ್ನಕ್ಕೆ ಕೈ ಹಾಕಿದೆ.
ಹೀರೋಯಿನ್‌ಗಳು, ಐಟಂ ಗರ್ಲ್‌ಗಳನ್ನು ಅರೆಬೆತ್ತಲು ಮಾಡಿಸಿ, ಚಿತ್ರಗಳನ್ನು ಸೂಪರ್‌ಹಿಟ್ ಮಾಡುವ ಟ್ರೆಂಡ್ ಬದಲಾಗಿದ್ದು, ಇದೀಗ ಚಿತ್ರದ ಹೀರೋಗಳೇ ಬೆತ್ತಲಾಗುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳವ ಗಿಮಿಕ್ ಹೆಚ್ಚಾಗಿದೆ.
ಸ್ಯಾಂಡಲ್‌ವುಡ್‌ನಲ್ಲಿ ಹೀರೋಗಳು ಬೆತ್ತಲಾಗುವ ದೃಶ್ಯಗಳು ಇದೇ ಮೊದಲೇನಲ್ಲ. ಪರಪಂಚ ಚಿತ್ರದಲ್ಲಿ ದಿಗಂತ್, ಡಿ.ಕೆ.ಚಿತ್ರದಲ್ಲಿ ಶೋಭರಾಜ್ ಮತ್ತು ಹಗ್ಗದ ಕೊನೆ ಚಿತ್ರದಲ್ಲಿ ನವೀನ್ ಕೃಷ್ಣ, ಹೀಗೆ ಹಲವು ನಾಯಕ ನಟರು ಬೆತ್ತಲೆ ಸುದ್ದಿಗೆ ಗ್ರಾಸವಾಗಿದ್ದರು.
ನಟ ತರುಣ್ ಇದೀಗ ಕೋಮಲ್ ಅಭಿನಯದ 'ಗೋವಾ' ಚಿತ್ರದಲ್ಲಿ ಬೆತ್ತಲಾಗುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ. ಸಿನಿಮಾದಲ್ಲಿ ಕೋಮಲ್, ಶ್ರೀಕಿ ಸಹಾ ನಗೆ ಪಟಾಕಿ ಸಿಡಿಸುವ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಬೆಡ್‌ರೂಂನಲ್ಲಿ ಮಲಗಿರುವ ಶ್ರೀಕಿಯನ್ನು ಎಬ್ಬಿಸಲು ಬಾತ್ ರೂಂನಿಂದ ತರುಣ್ ಬೆತ್ತಲೆಯಾಗಿ ಓಡಿಬರುವ ದೃಶ್ಯ ಪ್ರೇಕ್ಷಕರನ್ನು ದಂಗುಬಡಿಸುವಂತೆ ಮಾಡಿದೆ. ಟಾಪ್ ಟು ಬಾಟಮ್ ನ್ಯೂಡ್‌ಆಗಿ ಕಾಣಿಸಿಕೊಂಡಿದ್ದು, ಗಾಂಧಿನಗರದಲ್ಲಿ ತರುಣ್ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ.
ಇತ್ತೀಚೆಗಷ್ಟೇ ಗೋವಾ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ತರುಣ್ ಕೆರಿಯರ್‌ಗೆ ಹೊಸ ಟರ್ನ್ ನೀಡಿದೆ. ಚಿತ್ರಕಥೆಗಿಂತ ತರುಣ್ ಅವರ ಬೆತ್ತಲೆ ದೃಶ್ಯದ ವಿಚಾರವೇ ಗಾಂಧಿನಗರದಲ್ಲಿ ಬಾರಿ ಸದ್ದು ಮಾಡುತ್ತಿದೆ. ಹಲವು ದಿನಗಳಿಂದ ಕಣ್ಮರೆಯಾಗಿದ್ದ ತರುಣ್, ಬೆತ್ತಲೇ ದೃಶ್ಯದ ಮೂಲಕ ಕಾಣಿಸಿಕೊಂಡಿದ್ದು, ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದ್ದಾರೆ.
Advertisement