
ಬೆಂಗಳೂರು: ಗಣೇಶ್ ಅವರ 'ಖುಷಿ ಖುಷಿಯಾಗಿ' ಹಾಗೂ ಉಪೇಂದ್ರ ಅವರ 'ಶಿವಂ' ೨೦೧೫ ಜನವರಿ 1 ಕ್ಕೆ ಬಿಡುಗಡೆಯಾಗಲಿವೆ. ದುನಿಯಾ ವಿಜಯ್ ಅಭಿನಯದ 'ಜಾಕ್ಸನ್' ಬಿಡುಗಡೆ ಜನವರಿ ೧೫ ಕ್ಕೆ ತಳ್ಳಲ್ಪಟ್ಟಿದ್ದು, ಹೊಸ ವರ್ಷದ ಗಲ್ಲಾ ಪೆಟ್ಟಿಗೆಯ ಕಿರೀಟಕ್ಕೆ ಈ ಎರಡು ಸಿನೆಮಾಗಳು ಸೆಣಸಲಿವೆ. "ಜಾಕ್ಸನ್ ಗೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಆದರೆ ಪ್ರಚಾರಕ್ಕೆ ಸ್ವಲ್ಪ ಸಮಯ ಬೇಕಾಗಿದೆ. ಅಲ್ಲದೆ ಹೊಸವರ್ಷಕ್ಕೆ ಈಗಾಗಲೇ ತೀವ್ರ ಪೈಪೋಟಿಯಿದೆ. 'ಖುಷಿ ಖುಷಿಯಾಗಿ' ಕರ್ನಾಟಕದ ಸುಮಾರು ೪೫೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಅಲ್ಲದೆ ಶಿವಂ ಕೂಡ ಬಿಡುಗಡೆಯಾಗುತ್ತಿದೆ. ಆ ಸಮಯಕ್ಕೆ ಯಶ್ ಅವರ ಮಿ&ಮಿಸೆಸ್ ರಾಮಾಚಾರಿ ಕೂಡ ಓಡುತ್ತಿರುತ್ತದೆ. ಆದುದರಿಂದ ನಮ್ಮ ಸಿನೆಮಾ ಬಿಡುಗಡೆಯನ್ನು ಮುಂದೂಡಿದ್ದೇವೆ" ಎನ್ನುತ್ತಾರೆ ಜಾಕ್ಸನ್ ಚಲನಚಿತ್ರದ ನಿರ್ದೇಶಕ ಸನತ್ ಕುಮಾರ್ ಡಿ.
ಜನವರಿ ೨೦೧೫ ಕ್ಕೆ ಸುಮಾರು ಒಂದು ಡಜನ್ ಸಿನೆಮಾಗಳು ಬಿಡುಗಡೆಗೆ ಕಾದಿವೆ. ಯೋಗರಾಜ್ ಭಟ್ ಅವರ ವಾಸ್ತು ಪ್ರಕಾರ, ಪೂಜಾ ಗಾಂಧಿ ಅವರ ಅಭಿನೇತ್ರಿ, ಎ ಪಿ ಅರ್ಜುನ್ ಅವರ ರಾಟೆ, ಸಿನೆಮಾ ಮಂದಿರಗಳತ್ತ ಹೆಜ್ಜೆ ಹಾಕುತ್ತಿದ್ದರೆ, ಸಿಗರೇಟ್, ಪೈಪೋಟಿ, ನಮಕ್ ಹರಾಮ್ ಕೂಡ ಸರದಿಯಲ್ಲಿವೆ.
Advertisement