
ಕುದುರೆ ಸವಾರಿ ಮಾಡೋಕೆ ತೂಕ ಇಳಿಸ್ಕೋಬೇಕಾ? ಹೂಂ ಅಂತಾಳೆ ತಮನ್ನಾ!
ಮೊದಲೇ... ಬಳುಕಿದ್ರೆ ಮುರಿದುಹೋಗ್ತಾಳೋ ಎಂಬಂತಿದ್ದ ತಮನ್ನಾ, ಕ್ವಿಂಟಾಲುಗಳ ತೂಕದ ಕುದುರೆಗೆ ಭಾರವೇ? ಆದರೆ ತಮನ್ನಾ ತೂಕ ಇಳಿಸಿರೋದು ಕುದುರೆಗೆ ಭಾರವಾದೇನೆಂಬ ಭಯಕ್ಕಲ್ಲ.
ಬಹು ನಿರೀಕ್ಷಿತ ರಾಜಮೌಳಿಯ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿ ಆಕೆಗೆ ಸಾಹಸ ಸನ್ನಿವೇಶಗಳಿವೆಯಂತೆ. ಅವಂತಿಕಾ ಎಂಬ ರಾಜ ಕುಮಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ತಮನ್ನಾ ಬಲ್ಗೇರಿಯಾದಲ್ಲಿ ಕುದುರೆಯೇರಿ ಕತ್ತಿ-ಬೆಂಕಿ ಹಿಡಿದು ಯುದ್ಧವಾಡಿ ಶಭಾಶ್ ಎನಿಸಿಕೊಂಡಿದ್ದಾಳಂತೆ.
ಪ್ರಭಾಸ್, ರಾಣಾ ಮತ್ತು ಅನುಷ್ಕಾ ಜೊತೆಯಲ್ಲಿ ತಮನ್ನಾಳಿಗೂ ಕುದುರೆ ಸವಾರಿ, ಕತ್ತಿವರಸೆಯ ತರಬೇತಿ ನೀಡಿದಾಗಲೇ ತಮನ್ನಾಗೆ ತನ್ನ ಪಾತ್ರದ ಪ್ರಾಮುಖ್ಯತೆ ಅರಿವಾಗಿದ್ದಂತೆ! ಪ್ರತಿ ನಟನಟಿಯರಿಂದಲೂ ಹತ್ತು ಟೇಕ್‌ಗಳಲ್ಲೊಂದು ಬೆಸ್ಟ್ ಟೇಕ್ ಓಕೆ ಮಾಡುವ ರಾಜಮೌಳಿಯಂಥ ಪರ್ಫೆಕ್ಷನಿಸ್ಟ್ ಕೈಲಿ ಹೆಚ್ಚೂ ಕಮ್ಮಿ ತನ್ನೆಲ್ಲ ದೃಶ್ಯಗಳಿಗೂ ಎರಡನೇ ಟೇಕ್‌ನಲ್ಲೇ ಓಕೆ ಅನಿಸಿಕೊಂಡಿದ್ದಕ್ಕೆ ತಮನ್ನಾಳಿಗೆ ಎಲ್ಲಿಲ್ಲದ ಖುಷಿ.
Advertisement