
ಹೈದ್ರಾಬಾದ್: ಬಾಲಿವುಡ್ ಬೆಡಗಿ, ಮಾದಕ ನೋಟದ ಚೆಲುವೆ ಸನ್ನಿ ಲಿಯೋನ್ ಹೊಸ ವರ್ಷದ ಡ್ಯಾನ್ಸ್ ಮಾಡಲು ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ ರು. 5 ಕೋಟಿ ರು!
ಡಿ.31ರ ರಾತ್ರಿ ಹೈದ್ರಾಬಾದ್‌ನಲ್ಲಿ ನಡೆಯಲಿರುವ ಹೊಸವರ್ಷದ ಪಾರ್ಟಿಯಲ್ಲಿ ಇತ್ತೀಚಿಗಿನ ಹಿಟ್ ಸಾಂಗ್‌ಗಳಿಗೆ 'ಬೇಬಿ ಡಾಲ್' ಸನ್ನಿ ಸೊಂಟ ಬಳುಕಿಸಲಿದ್ದಾಳೆ.
"ಆಕೆ ದೇಶದಲ್ಲಿ ಸಂಚಲನ ಮೂಡಿಸಿರುವ ತಾರೆ. ಆದ್ದರಿಂದ ಪಾರ್ಟಿಗೆ ಆಕೆಯನ್ನೇ ಆಯ್ಕೆ ಮಾಡಿಕೊಂಡೆವು. ಆಕೆಯನ್ನು ಕರೆ ತರುವುದೇನೋ ಸುಲಭ ಆದರೆ ಜನರನ್ನು ನಿಯಂತ್ರಿಸುವುದು ಕಷ್ಟವೇ. ಆದಾಗ್ಯೂ, ಹೈದ್ರಾಬಾದ್‌ನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು ಸನ್ನಿ ಭದ್ರತೆಗಾಗಿಯೇ 10 ಗಾರ್ಡ್‌ಗಳನ್ನು ನೇಮಕ ಮಾಡಲಾಗಿದೆ "ಎಂದು ಕಾರ್ಯಕ್ರಮದ ಆಯೋಜಕರು ಹೇಳಿದ್ದಾರೆ.
ಹೈದ್ರಾಬಾದ್‌ನ ಜುಬ್‌ಲೀ ಹಿಲ್ಸ್‌ನ ಜೆ ಆರ್‌ಸಿ ಕನ್ವೆನ್‌ಶನ್ ಸೆಂಟರ್‌ನಲ್ಲಿ ಸನ್ನಿ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ.
ದೇಶದಲ್ಲಿ ಸನ್ನಿ ಲಿಯೋನ್ ಒಂದು ರಾತ್ರಿಯ ಡ್ಯಾನ್ಸ್‌ಗೆ 5 ಕೋಟಿ ಸಂಭಾವನೆ ಪಡೆಯುತ್ತಿದ್ದರೆ, ಪಾಪ್ ಗಾಯಕಿ ಜೆನ್ನಿಫರ್ ಲೋಪೆಜ್ ನೃತ್ಯ ಮತ್ತು ಗಾಯನ ಪ್ರದರ್ಶನಕ್ಕೆ 14 ಕೋಟಿ ತೆಗೆದುಕೊಂಡಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದೆ.
ಪ್ರಸಕ್ತ ವರ್ಷ ಗೂಗಲ್ ಶೋಧದಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸಿಲೆಬ್ರಿಟಿ ಸನ್ನಿ ಲಿಯೋನ್ ಆಗಿದ್ದಳು. ಪ್ರಧಾನಿ ನರೇಂದ್ರ ಮೋದಿ ಮತ್ತು ಸಲ್ಮಾನ್ ಖಾನ್‌ನ್ನು ಹಿಂದಿಕ್ಕಿ ಸನ್ನಿ ಅತೀ ಹೆಚ್ಚು ಶೋಧಕ್ಕೊಳಗಾದ ಸಿಲೆಬ್ರಿಟಿ ಎಂಬ ಖ್ಯಾತಿ ಪಡೆದಿದ್ದಳು. ಸನ್ನಿ ನಟಿಸಿದ ರಾಗಿಣಿ ಎಂಎಂಎಸ್-2 ಸಿನಿಮಾದ ಬೇಬಿ ಡಾಲ್ ಕೂಡಾ ಈ ಬಾರಿ ಸರ್ಚ್ ಇಂಜಿನ್‌ಗಳಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಹಾಡು ಆಗಿತ್ತು.
ಅದೇ ವೇಳೆ ಇನ್ನೊಬ್ಬ ಹಾಟ್ ಬೆಡಗಿ, ವಿವಾದಪ್ರಿಯೆ ಪೂನಂ ಪಾಂಡೆ ಕೂಡಾ ಹೈದ್ರಾಬಾದ್‌ನಲ್ಲಿ ಡ್ಯಾನ್ಸ್ ಮಾಡಲಿದ್ದಾಳೆ. ದುರ್ಗಂ ಚೆರುವು ಎಂಬಲ್ಲಿ ಹೊಸವರ್ಷಾಚರಣೆ ಕಾರ್ಯಕ್ರಮ ನಡೆಯಲಿದ್ದು ಅಲ್ಲಿ ತೆಲುಗು ಹಿಟ್ ಸಾಂಗ್‌ಗಳಿಗೆ ಪೂನಂ ಸ್ಟೆಪ್ ಹಾಕಲಿದ್ದಾಳೆ.
Advertisement