ಸತ್ಯಮೇವ ಜಯತೆಯಂತಹ ಕಾರ್ಯಕ್ರಮದ ನಿರೀಕ್ಷೆಯಲ್ಲಿ ರಮೇಶ್

ಸದಾ ಒಂದಲ್ಲೊಂದು ಕೆಲಸದಲ್ಲಿ...
ಸತ್ಯಮೇವ ಜಯತೆಯಂತಹ ಕಾರ್ಯಕ್ರಮದ ನಿರೀಕ್ಷೆಯಲ್ಲಿ ರಮೇಶ್
Updated on: 

ಅತೀ ಕುತೂಹಲ ಕೆರಳಿಸಿರುವ ತಮಿಳು ನಟ ಕಮಲಹಾಸನ್ ಅಭಿನಯದ ಚಿತ್ರ 'ಉತ್ತಮ ವಿಲ್ಲನ್‌', ಇದೇ ನವೆಂಬರ್ 7ರಂದು ಕಮಲ್‌ಹಾಸನ್ ಹುಟ್ಟುಹಬ್ಬಕ್ಕೆ ತೆರೆ ಕಾಣುತ್ತಿದೆ. ನಟ, ನಿರ್ದೇಶಕ ರಮೇಶ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರ ಸಂಪೂರ್ಣ ಮುಗಿದಿದ್ದು ರಮೇಶ್ ಇದೀಗ ಕೊಂಚ ರಿಲೀಫ್ ಆಗಿದ್ದಾರೆ.

 'ಉತ್ತಮ ವಿಲ್ಲನ್‌' ಚಿತ್ರದ ನಿರ್ದೇಶದ ಜೊತೆಗೆ 'ವೀಕೆಂಡ್ ವಿತ್ ರಮೇಶ್‌' ಖಾಸಗಿ ಟಿವಿ ಕಾರ್ಯಕ್ರದ ಮೂಲಕ ಮನೆಮಾತಾಗಿದ್ದ ರಮೇಶ್ ಈಗ ಬಾಲಿವುಡ್ ನಟ ಅಮೀರ್ ಖಾನ್ ನಿರೂಪಣೆಯ 'ಸತ್ಯಮೇವ ಜಯತೆ'ಯಂತಹ ಕಾರ್ಯಕ್ರಮದ ನಿರೀಕ್ಷೆಯಲ್ಲಿದ್ದಾರೆ.  

ರಮೇಶ್ ನಿರೂಪಣೆಯ 'ವೀಕೆಂಡ್ ವಿತ್ ರಮೇಶ್‌' ಕಾರ್ಯಕ್ರಮಕ್ಕೆ ಜನತೆಯಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದ್ದು, ಕನ್ನಡಿಗರ ಅಚ್ಚುಮೆಚ್ಚಿನ ಕಾರ್ಯಕ್ರಮವೂ ಆಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ವಿದೇಶಿ ಕನ್ನಡಿಗರಿಂದಲೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

ಪ್ರತಿ ಸಂಚಿಕೆಯಲ್ಲೂ ವಿವಿಧ ರಂಗಗಳಲ್ಲಿ ಸಮಾಜಕ್ಕೆ ಕೊಡುಗೆಗಳನ್ನು ನೀಡಿದ ಸಾಧಕರನ್ನು ಪರಿಚಯಿಸುವ ಕಾರ್ಯಕ್ರಮ ಇದಾಗಿತ್ತು. ಪ್ರತಿ ವಾರದ ಅತಿಥಿಯಾಗಿ ಆಗಮಿಸುವ ವ್ಯಕ್ತಿಯ, ಸಮಾಜದ ಕೊಡುಗೆಗಳು, ಅವರ ಶಿಕ್ಷಣ, ಹವ್ಯಾಸ, ಬಾಲ್ಯ, ಜೀವನದ ಏಳು ಬೀಳುಗಳು, ವೈಯಕ್ತಿಕ ಘಟನೆಗಳು ಇತ್ಯಾದಿ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.

ಇದು ಕನ್ನಡಿಗರ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ಈ ಕಾರ್ಯಕ್ರಮದಲ್ಲಿ ಹಂಚಿಕೊಳ್ಳುವ ವಯಕ್ತಿಕ ವಿಚಾರಗಳು ಅವರ ಆಪ್ತರಿಗೂ ತಿಳಿದಿರುವುದಿಲ್ಲ. ಅಚ್ಚರಿ ಮೂಡಿಸಿದ ಸಂದರ್ಭಗಳು, ತಮ್ಮ ಸಾಧನೆಗಳಿಗೆ ಎದುರಾದ ಸಮಸ್ಯೆಗಳು, ಜೀವನದಲ್ಲಿ ಎದುರಿಸಿದ ಕಷ್ಟ, ಸುಖಗಳು ಈ ವೇದಿಕೆಯಲ್ಲಿ ರಮೇಶ್‌ನೊಂದಿಗೆ ಹಂಚಿಕೊಂಡಿದ್ದಾರೆ.

ಈ ಕಾರ್ಯಕ್ರಮದ ನಿರೂಪಣೆಯಿಂದ ಸಂತಸಗೊಂಡಿರುವ ರಮೇಶ್, ಮತ್ತೊಂದು ವಿಭಿನ್ನ ಕಾರ್ಯಕ್ರಮವನ್ನು ನೀಡಲು ಚಿಂತನೆ ನಡೆಸಿದ್ದಾರೆ. ಭಾರತದಾದ್ಯಂತ ಹೆಸರು ಮಾಡಿರುವ ಸುಪ್ರಸಿದ್ದ ಕಾರ್ಯಕ್ರಮ 'ಸತ್ಯಮೇವ ಜಯತೆ' ಕಾರ್ಯಕ್ರಮದಿಂದ ಸ್ಫೂರ್ತಿಯಾಗಿರುವ ರಮೇಶ್,  ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮವಾಗಿ, 'ವೀಕೆಂಡ್ ವಿತ್ ರಮೇಶ್‌' ಕಾರ್ಯಕ್ರಮವನ್ನು ಸ್ವೀಕಸಿ, ನಿರೂಪಣೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಸಾಧಕ ಅತಿಥಿಗಳೊಂದಿಗೆ ಸಂವಾದ ಮಾಡಲು 'ಸತ್ಯಮೇವ ಜಯತೇ' ಕಾರ್ಯಕ್ರಮವೇ ಸ್ಪೂರ್ತಿಯಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರ ಅಚ್ಚುಮೆಚ್ಚಿನ 'ವೀಕೆಂಡ್ ವಿತ್ ರಮೇಶ್‌' ಕಾರ್ಯಕ್ರಮ ಇದೀಗ ಮುಕ್ತಾಯದ ಹಂತ ತಲುಪಿದೆ. 'ವೀಕೆಂಡ್ ವಿತ್ ರಮೇಶ್‌' ಕಾರ್ಯಕ್ರಮದ ಒಪ್ಪಂದದ ಅವಧಿ ಮುಕ್ತಾಯಗೊಂಡಿದೆ.

'ವೀಕೆಂಡ್ ವಿತ್ ರಮೇಶ್‌' ಕಾರ್ಯಕ್ರಮದ ಬಳಿಕ ಮುಂದೆ ಏನು? ಎಂಬ ನಮ್ಮ ಸಂದರ್ಶನಕಾರರ ಪ್ರಶ್ನೆಗೆ ಉತ್ತರಿಸಿದ ರಮೇಶ್, 'ಸತ್ಯಮೇವ ಜಯತೆ'ಯಂತಹ ಸಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮ ಮಾಡುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ' ಎಂದು ಮಂದಹಾಸ ಮೂಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com