
ಸ್ಟಾರ್ ಜೊತೆ ಜೊತೆಗೆ ಸಿಂಗರ್ ಪಟ್ಟ ಗಳಿಸಿರುವ ಪವರಸ್ಟಾರ್ ಪುನೀತ್ ರಾಜಕುಮಾರ್, ರಿಯಲ್ ರ್ಸ್ಟಾರ್ ಉಪೇಂದ್ರ ಅವರ ಕಂಠಕ್ಕೆ ಬಹಳ ಬೇಡಿಕೆ ಹೆಚ್ಚಾದಂತಿದೆ.
ನಟನೆಯಲ್ಲಿ ಬಿಸಿಯಾಗಿರುವ ಇಬ್ಬರು ನಟರು, ಸಿಂಗರ್ ಗಳಾಗಿಯೂ ಬಹಳ ಬಿಸಿಯಾಗಿದ್ದಾರೆ. ಅಪ್ಪು ಮತ್ತು ಉಪ್ಪಿಯ ಧ್ವನಿ ಮೆಚ್ಚಿರುವ ಅಭಿಮಾನಿಗಳಿಗಾಗಿಯೇ ಎರಡು ಹಾಡುಗಳು ಸಿದ್ಧವಾಗಿದೆ.
ಹೌದು, ಅಪ್ಪು ಮತ್ತು ಉಪ್ಪಿ ಇಬ್ಬರು ಒಂದೇ ಚಿತ್ರಕ್ಕೆ ಹಾಡಿದ್ದಾರೆ. ಕೃಷ್ಣ ಲೀಲೆ ಚಿತ್ರಕ್ಕಾಗಿ ಹಾಡುತ್ತಿರುವ ಉಪ್ಪಿ ಮತ್ತು ಅಪ್ಪುವಿಗೆ ಪ್ರತ್ಯೇಕ ಹಾಡುಗಳನ್ನು ನೀಡಲಾಗಿದೆ ಎಂದು ಚಿತ್ರದ ನಿರ್ದೇಶಕ ಶಶಾಂಕ್ ತಿಳಿಸಿದ್ದಾರೆ.
ಚಿತ್ರದಲ್ಲಿರುವ ಒಂದು ಹಾಡು ಜನಪದದ ಸೊಗಡನ್ನು ಹೊಂದಿರುವುದರಿಂದ ಪುನೀತ್ ಅವರನ್ನು ಗಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಚಿತ್ರೀಕರಣ ಪ್ರಾರಂಭವಾದಗಿನಿಂದಲೂ ಪುನೀತ್ ಅವರು ಚಿತ್ರದ ತಂಡಕ್ಕೆ ಬೆಂಬಲಿಸಿದ್ದಾರೆ. ಅಪ್ಪು ಹಾಡಿರುವ ಹಾಡು ಮಾಸ್ ಹಾಡಾಗಿದ್ದು, ಅಭಿಮಾನಿಗಳನ್ನು ಮೆಚ್ಚಿಸಲಿದೆ.
ಚಿತ್ರದ ಪಾತ್ರಗಳನ್ನು ಪರಿಚಯ ಮಾಡಿಕೊಡುವಂತಹ ಒಂದು ಹಾಡಿಗೆ ಉಪೇಂದ್ರ ಅವರು ಹಾಡಿದ್ದಾರೆ. ನಿರ್ದೇಶಕನಿಗೆ ಬೇಕಾದಂತಹ ರೀತಿಯಲ್ಲಿ ಉಪೇಂದ್ರ ಅವರು ಹಾಡಿನ ಮೂಲಕ ಚಿತ್ರದ ಪಾತ್ರಗಳನ್ನು ಪರಿಚಯಿಸಿದ್ದಾರೆ.
ಈ ಇಬ್ಬರು ನಾಯಕರ ಗಾಯನದ ಹಾಡುಗಳನ್ನು ಜನ ಮೆಚ್ಚಲಿದ್ದಾರೆ ಎಂಬ ಭರವಸೆ ಇದೆ ಎದು ನಿದೇರ್ಶಕ ಹೇಳಿದ್ದಾರೆ.
ಅಜಯ್ ರಾವ್ ಅಭಿನಯದ ಕೃಷ್ಣ ಲೀಲೆ ಚಿತ್ರಕ್ಕಾಗಿ ಇಬ್ಬರು ಸೂಪರ್ ರ್ಸ್ಟಾರ್ ಗಳು ಹಾಡಿರುವುದು ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ. ಕೃಷ್ಣಲೀಲೆ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದ್ದು, ಉಪೇಂದ್ರ ಅವರ ಹಾಡಿಗೆ ಹರ್ಷ ಮತ್ತು ಪುನೀತ್ ಅವರ ಹಾಡಿಗೆ ಕಲೈ ಮಾಸ್ಟರ್ ಅವರು ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಶಶಾಂಕ್ ತಿಳಿಸಿದ್ದಾರೆ.
Advertisement