ವಿಶ್ವ ಸಿನೆಮಾ ನೋಡಿದ ಲಕ್ಷಾಂತರ ಮಕ್ಕಳು: ಕಿಂಚಿಫ್ ಅಮೋಘ ಪ್ರಾರಂಭ

ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿರುವ ಕರ್ನಾಟಕ ಅಂತರಾಷ್ಟ್ರೀಯ...
ಟೈನಾ ಚಲನಚಿತ್ರದ ಸ್ಥಿರ ಚಿತ್ರ
ಟೈನಾ ಚಲನಚಿತ್ರದ ಸ್ಥಿರ ಚಿತ್ರ

ಬೆಂಗಳೂರು: ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿರುವ ಕರ್ನಾಟಕ ಅಂತರಾಷ್ಟ್ರೀಯ ಮಕ್ಕಳ ಚಲಚಿತ್ರೋತ್ಸವ (ಕಿಂಚಿಫ್) ಇಂದು ಅಮೋಘ ಪ್ರಾರಂಭ ಕಂಡಿತು. ಸಟಲ್ಲೈಟ್ ತಂತ್ರಜ್ಞಾನದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಏಕಕಾಲಕ್ಕೆ ಪ್ರಾರಂಭವಾದ ಚಲನಚಿತ್ರೋತ್ಸವದ ಪ್ರದರ್ಶನಗಳನ್ನು ಲಕ್ಷಾಂತರ ವಿದ್ಯಾರ್ಥಿಗಳು ನೋಡಿ ಸವಿಯುವ ಮೂಲಕ ಕಿಂಚಿಫ್ ನ ಮೊದಲನೇ ಆವೃತ್ತಿ ತನ್ನ ಯಶೋಗಾಥೆಗೆ ನಾಂದಿ ಹಾಡಿತು.

ಇಂದು ಎರಡು ಚಲನಚಿತ್ರಗಳ ಹಲವು ಪ್ರದರ್ಶನಗಳಿದ್ದು, ೬ ರಿಂದ ೧೦ ವರ್ಷದೊಳಗಿನ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಬ್ರೆಜಿಲ್ ದೇಶದ ಟೈನಾ ಪ್ರದರ್ಶನಗೊಳ್ಳುತ್ತಿದ್ದರೆ, ೧೧ರಿಂದ ೧೬ ವರ್ಷದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಮಕ್ಕಳಿಗಾಗಿ ಚೈನಾದ ಸಿಂಡ್ರೆಲ್ಲಾ ಮೂನ್ ಚಲನಚಿತ್ರ ಪ್ರದರ್ಶನ ಕಾಣುತ್ತಿದೆ.

ಲಕ್ಷಾಂತರ ವಿದ್ಯಾರ್ಥಿಗಳನ್ನು ಈ ವಿಶ್ವ ಸಿನೆಮಾಗಳಿಗೆ ಪರಿಚಯ ಮಾಡಿಕೊಡುತ್ತಿರುವ ಈ ಯೋಜನೆ ಕ್ರಾಂತಿಕಾರಕವಾಗಿದ್ದು, ರಂಜನೆಯ ದೃಷ್ಟಿಯಿಂದಲೂ, ಮಕ್ಕಳ ಮಾನಸಿಕ-ವೈಚಾರಿಕ ಬೆಳವಣಿಗೆಯ ದೃಷ್ಟಿಯಿಂದಲೂ ಇದೊಂದು ಅತ್ಯುತ್ತಮ ಬೆಳವಣಿಗೆ ಎಂದು ಬಣ್ಣಿಸಲಾಗಿದೆ. ರಾಜ್ಯಾದ್ಯಂತ ೧೦ ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಪಲಾನುಭವಿಗಳು ಎನ್ನುತ್ತಾರೆ ಕರ್ನಾಟಕ ಚಲನಚಿತ ಅಕಾಡೆಮಿಯ ಅಧಿಕಾರಿಗಳು.

ಎರಡನೇ ದಿನವಾದ ನಾಳೆ ಬ್ಲೂ ಟೈಗರ್, ಖೋಬ್ ಮತ್ತು ಟಚಿಂಗ್ ವೈಲ್ಡ್ ಹಾರ್ಸಸ್ ಚಿತ್ರಗಳು ಪ್ರದರ್ಶನವಾಗಲಿವೆ. ಈ ಉತ್ಸವ ಗುರುವಾರ ಕೊನೆಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com