ಪ್ರಿಯಾಮಣಿ ಕೆಟ್ಟವಳಾದರೆ...

ನಾಯಕ ನಟಿಯರು ಋಣಾತ್ಮಕ ಪಾತ್ರವನ್ನು ಪೋಷಿಸುವುದು ಸಾಮಾನ್ಯವಾಗಿ ಕಡಿಮೆ....
ಪ್ರಿಯಾಮಣಿ (ಸಂಗ್ರಹ ಚಿತ್ರ)
ಪ್ರಿಯಾಮಣಿ (ಸಂಗ್ರಹ ಚಿತ್ರ)

ಬೆಂಗಳೂರು: ನಾಯಕ ನಟಿಯರು ಋಣಾತ್ಮಕ ಪಾತ್ರವನ್ನು ಪೋಷಿಸುವುದು ಸಾಮಾನ್ಯವಾಗಿ ಕಡಿಮೆ. ಬಿಡುಗಡೆಯಾಗುತ್ತಿರುವ ಮಹೇಶ್ ಸುಖದರೆ ಅವರ ಅಂಬರೀಷ ಚಲನಚಿತ್ರದಲ್ಲಿ ಪ್ರಿಯಾಮಣಿ ಅಂತಹ ಒಂದು ಪಾತ್ರದಲ್ಲಿ ನಟಿಸಿದ್ದಾರೆ. "ಪಾತ್ರ ಆಸಕ್ತಿದಾಯಕವಾಗಿದ್ದರೆ ಇಮೇಜ್ ಮುಖ್ಯವಲ್ಲ. ಸಾಮಾನ್ಯವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವುದಕ್ಕಿಂತ ವಿಭಿನ್ನ ಪಾತ್ರದಲ್ಲಿ ನಟಿಸುವುದು ಕುತೂಹಲಕಾರಿ ಸಂಗತಿ. ಈ ಪಾತ್ರ ನನ್ನ ಜೀವನದ ಗತಿಯನ್ನು ಬದಲಾಯಿಸಿಬಿಡುತ್ತದೆ ಅಂತಲೂ ಅಲ್ಲ. ಹಾಗೂ ಇದು ಸಂಪೂರ್ಣ ಋಣಾತ್ಮಕ ಪಾತ್ರವೂ ಅಲ್ಲ. ಈ ಪಾತ್ರದಲ್ಲಿ ಗ್ರೆ ಶೇಡ್ ಇದೆ. ನಾನು ಅತ್ಯತ್ತಮ ಮೈಕಟ್ಟಿನ ಹುಡುಗಿಯಾಗಿ ಜನ ನೋಡಿದ್ದಾರೆ. ಚಲನಚಿತ್ರರಂಗದ ಮುಖ್ಯನೆಲೆಯ ಪಾತ್ರಕ್ಕೆ ಸೀಮಿತವಾಗುವ ಇಂತಹ ಪಾತ್ರ ಮಾಡುವುದು ಕುತೂಹಲಕಾರಿಯಾಗಿರುತ್ತದೆ," ಎನ್ನುತ್ತಾರೆ ಪ್ರಿಯಾಮಣಿ.

ಈ ಸಿನೆಮಾದಲ್ಲಿ, ಪ್ರಿಯಾಮಣಿಯವರ ಪಾತ್ರ, ನಾಯಕ ನಟ ದರ್ಶನ್ ಅವರ ಪಾತ್ರಕ್ಕೆ ಸರಿಸಮನಾಗಿದ್ದು, ಅವರ ಭೇಟಿಯ ಮೊದಲ ಸನ್ನಿವೇಶದಿಂದಲೂ ಸಂಘರ್ಷವಿರುತ್ತದೆ. "ಕೆಟ್ಟವಳ ಪಾತ್ರ ಮಾಡುವುದು ಕುತೂಹಲಕಾರಿಯಾಗಿತ್ತು, ಆದುದರಿಂದ ಜನಕ್ಕೆ ಕೂಡ ಚಿತ್ರದಲ್ಲಿ ನನ್ನನ್ನು ನೋಡಲು ಕುತೂಹಲವಿರುತ್ತದೆ" ಎನ್ನುತ್ತಾರೆ ಪ್ರಿಯಾಮಣಿ.

ಸಾಮಾನ್ಯವಾಗಿ ಸ್ಯಾಂಡಲ್ ವುಡ್ ನಲ್ಲಿ ನಾಯಕ ನಟರಿಗೆ ಹೆಚ್ಚಿನ ಮಹತ್ವ, ಇಂತಹ ಸಮಯದಲ್ಲಿ ನಾಯಕ ನಟನ ಸರಿಸಮನಾದ ಪಾತ್ರಗಳು ಸಿನೆಮಾದಲ್ಲಿರಿವುದು ಅಗತ್ಯ ಎಂದು ಒಪ್ಪಿಕೊಳ್ಳುವ ಪ್ರಿಯಾಮಣಿ "ನಾಯಕ ನಟಿಯಾಗಿ ಎಲ್ಲ ತರಹದ ಪಾತ್ರಗಳನ್ನೂ ಪೋಷಿಸುವ ಆಸೆಯಿರುತ್ತದೆ. ಆದರೆ ಹೆಚ್ಚಿನ ಸಮಯದಲ್ಲಿ ನಾಯಕ ನಟಿಯರನ್ನು ಪ್ರಣಯ ಸನ್ನಿವೇಶಗಳಿಗೆ ಮಾತ್ರ ಬಳಸಿಕೊಳ್ಳುತ್ತಾರೆ. ಅದು ಅವರ ವೃತ್ತಿಜೀವನಕ್ಕೆ ಅಷ್ಟೇನೂ ಸಹಕಾರಿಯಲ್ಲ. ಕೆಲವು ಪಾತ್ರಗಳು ಮಾತ್ರ ಹೀರೋ ಜೊತೆಗಿನ ಪ್ರಣಯಕ್ಕಿಂತಲೂ, ಅಥವಾ ಹಾಡುಗಳಲ್ಲಿ ನೃತ್ಯ ಮಾಡುವುದಕ್ಕಿಂತಲೂ ಅಥವಾ ಅಂದವಾಗಿ ಕಾಣಿಸಿಕೊಳ್ಳುವುದಕ್ಕಿಂತಲೂ ವಿಭಿನ್ನವಾಗಿರುತ್ತವೆ. ಅಂಬರೀಷ ಚಿತ್ರದಲ್ಲಿ ನನ್ನ ಈ ಪಾತ್ರ ಪಡೆಯಪ್ಪ ಚಿತ್ರದಲ್ಲಿ ರಮ್ಯ ಕೃಷ್ಣ ಅವರ ಪಾತ್ರಕ್ಕೆ ಹೋಲಿಸಬಹುದೇನೋ ಗೊತ್ತಿಲ್ಲ, ಆದರೆ ದರ್ಶನ್ ಎದುರಿಗೆ ನಟಿಸುತ್ತಿರುವ ಈ ಪಾತ್ರ ವಿಭಿನ್ನ ಎಂದಂತೂ ಹೇಳಬಲ್ಲೆ" ಎನ್ನುತ್ತಾರೆ.

ದಕ್ಷಿಣ ಭಾರತದ ಸಿನೆಮಾಗಳಲ್ಲದೆ, ಪ್ರಿಯಾಮಣಿ ಎರಡು ಬಾಲಿವುಡ್ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ತನ್ನೆಡೆಗೆ ಬರುವ ವಿಭಿನ್ನ ಪಾತ್ರಗಳನ್ನು ಯಾವಾಗಲೂ ಎದುರು ನೋಡುವ ಪ್ರಿಯಾಮಣಿ "ತನಗೆ ದೊರಕುವ ಪಾತ್ರಗಳನ್ನು ಸರಿಯಾಗಿ ನಿಭಾಯಿಸಿದಾಗ ಮಾತ್ರವೇ ನಟಿಯರು ತಮ್ಮ ವೃತ್ತಿ ಜೀವನದಲ್ಲಿ ಒಳ್ಳೆಯ ಬದಲಾವಣೆ ತಂದುಕೊಳ್ಳಲು ಸಾಧ್ಯ. ನನಗೆ ಒಳ್ಳೆಯ ನಿರ್ದೇಶಕರ ಜೊತೆಗೆ ಮತ್ತು ಒಳ್ಳೆಯ ಸಿನೆಮಾಗಳಲ್ಲಿ ನಟಿಸುವ ಅವಕಾಶ ದೊರಕಿತು. ಈ ಚಿತ್ರಗಳು ಗಳಿಕೆಯ ದ್ರಷ್ಟಿಯಿಂದ ಚೆನ್ನಾಗಿ ಪ್ರದರ್ಶನ ಕಂಡವೋ ಇಲ್ಲವೋ ಆದರೆ ನನಗೆ ನಟಿಯಾಗಿ ಇಲ್ಲಿ ಸ್ಥಾಪನೆಯಾಗಿ ಹೆಚ್ಚಿನ ದಿನಗಳವರೆಗೆ ಉಳಿಯಲು ಸಾಧ್ಯವಾಯಿತು. ನನಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿಸಿದ ಪರುಥಿವೀರನ್ ನಂತಹ ಚಿತ್ರಕ್ಕೂ ನಾಡು ಸಿದ್ಧಳಿದ್ದೇನೆ. ನನ್ನನ್ನು ಎಕ್ಸೈಟ್ ಮಾಡುವ ಪಾತ್ರಗಳನ್ನು ತೆಗೆದುಕೊಳ್ಳುತ್ತೇನೆ. ಸದ್ಯಕ್ಕೆ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಒಳ್ಳೆಯ ಸ್ಕ್ರಿಪ್ಟ್ ಗಳಿಗಾಗಿ ಹುಡುಕಾಟ ನಡೆಸಿದ್ದೇನೆ." ಎನ್ನುತಾರೆ ಈ ಬಹುಭಾಷಾ ನಟಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com