
ಟಾಲಿವುಡ್ ಮತ್ತು ಕಾಲಿವುಡ್‌ನ ನಂ.1 ನಟಿ ತಮನ್ನಾ ಭಾಟಿಯಾ ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಚಿತ್ರದಲ್ಲಿ ನಟಿಸಲ್ವಂತೆ.
ಪುನೀತ್ ಅಭಿನಯದ ದುನಿಯಾ ಸೂರಿ ನಿರ್ದೇಶನದ 'ದೊಡ್ಮನೆ ಹುಡುಗ' ಚಿತ್ರದಲ್ಲಿ ನಟಿಸಲು ತಮನ್ನಾ ನಿರಾಕರಿಸಿದ್ದಾರಂತೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದ್ದು, ಸದ್ಯ ಚರ್ಚೆಗೆ ಗ್ರಾಸವಾಗಿದೆ.
'ದೊಡ್ಮನೆ ಹುಡುಗ' ಚಿತ್ರದಲ್ಲಿ ಪುನೀತ್‌ಗೆ ನಾಯಕಿ ನಟಿಯಾಗಲು ತಮನ್ನಾ ಕೇಳಲಾಗಿತ್ತು. ಆದರೆ, ಯಾಕೋ ಏನೋ ಆಕೆ ಸ್ಯಾಂಡಲ್‌ವುಡ್‌ನಲ್ಲಿ ನಟಿಸಲು ನಿರಾಕರಿಸಿದ್ದಾಳೆ.
ಪುನೀತ್ ಜತೆ ತಮನ್ನಾ ನಟಿಸುತ್ತಾಳೆ ಎಂಬ ವದಂತಿ ಹರಡಿದ ಬೆನ್ನಲ್ಲೇ, ಆಕೆ ಕನ್ನಡ ಚಿತ್ರದಲ್ಲಿ ನಟಿಸಲು ನಿರಾಕರಿಸಿರುವುದು ಕನ್ನಡ ಚಿತ್ರರಂಗದ ಬಗ್ಗೆ ಇರುವ ತಾತ್ಸಾರವನ್ನು ತೋರಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈಗಾಗಲೇ ಕನ್ನಡದ ಅನೇಕ ಚಿತ್ರಗಳಿಗೆ ನಾಯಕಿಯಾಗಿ ನಟಿಸಲು ತಮನ್ನಾಗೆ ಮಾಡಿದ ಆಫರ್ ಗಳನ್ನು ಅವರು ನಿರಾಕರಿಸುತ್ತಾ ಬಂದಿದ್ದಾರೆ.
ತಮನ್ನಾ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಗಾಳಿ ಮಾತು ಕೇಳಿದ ತಮನ್ನಾ, ಸದ್ಯಕ್ಕೆ ನಾನು ತಮಿಳಿನ ಆರ್ಯ ಚಿತ್ರದಲ್ಲಿ ನಟಿಸುತ್ತಿದ್ದು, ಇತರೆ ಯಾವುದೇ ಭಾಷೆಗಳಲ್ಲಿ ನಟಿಸುತ್ತಿಲ್ಲ ಎಂದಿದ್ದಾರೆ.
Advertisement