ಕ್ರಿಕೆಟ್ ಪ್ರೇಮಿಗಳಿಗಾಗಿ 'ಬೆಂಗಳೂರು 23'

ಪಡ್ಡೆ ಹುಡುಗರ ಗಲ್ಲಿ ಕ್ರಿಕೆಟ್ ಕಾನ್ಸೆಪ್ಟ್ನೊಂದಿಗೆ ನಿರ್ಮಾಣಗೊಂಡಿರುವ...
ಕ್ರಿಕೆಟ್ ಪ್ರೇಮಿಗಳಿಗಾಗಿ 'ಬೆಂಗಳೂರು 23'

ಪಡ್ಡೆ ಹುಡುಗರ ಗಲ್ಲಿ ಕ್ರಿಕೆಟ್ ಕಾನ್ಸೆಪ್ಟ್ನೊಂದಿಗೆ ನಿರ್ಮಾಣಗೊಂಡಿರುವ ಚಿತ್ರ `ಬೆಂಗಳೂರು-560023. `ಕಿರಾತಕ  ಚಿತ್ರದ ನಿರ್ದೇಶಕ ಪ್ರದೀಪ್ ರಾಜ್ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಶತಮಾನಗಳ ಇತಿಹಾಸ ಹೊಂದಿರುವ ಕ್ರಿಕೆಟ್ ನಮ್ಮ ನೆಲದ ಆಟವಲ್ಲ. ಇಂಗ್ಲೆಂಡ್ನಲ್ಲ್ಲಿ 16ನೇ ಶತಮಾನದಲ್ಲಿ ಆರಂಭವಾದ ಈ ಆಟ ಈಗ ಪ್ರಪಂಚದಾದ್ಯಂತ ವಿಸ್ತರಿಸಿ ಅಂತಾರಾಷ್ಟ್ರೀಯ ಆಟವಾಗಿ ಬೆಳೆದಿದೆ. ದೇಶ ವಿದೇಶಗಳ ಪ್ರತಿಷ್ಠಯ ಆಟವಾಗಿ ಖ್ಯಾತಿ ಪಡೆದಿದೆ. ಈ ಆಟವನ್ನೇ ಪ್ರಧಾನವಾಗಿಟ್ಟುಕೊಂಡು ಪ್ರದೀಪ್ ರಾಜ್ ಈ ಚಿತ್ರ ಮಾಡಿದ್ದಾರೆ.

ಸಿಸಿಎಲ್ ಟೀಮಿನ ಜಯ ಕಾರ್ತಿಕ್, ಧೃವ, ರಾಜೀವ್, ಪ್ರದೀಪ್ ಸೇರಿದಂತೆ 5 ಜನ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಕಳೆದವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ಕಿಚ್ಚ ಸುದೀಪ್, ಯಶ್, ಕ್ರಿಕೆಟಿಗರಾದ ಸೈಯದ್  ಕಿಮರ್ಾನಿ, ವಿಜಯ ಭಾರಧ್ವಾಜ್, ಮೇಯರ್ ಶಾಂತಕುಮಾರಿ, ಛೇಂಬರ್ ಅಧ್ಯಕ್ಷರಾದ ಹೆಚ್.ಡಿ ಗಂಗರಾಜು, ಕರಿಸುಬ್ಬು ಸೇರಿದಂತೆ ಹಲವಾರು ಗಣ್ಯರು ಆಗಮಿಸಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಿದರು.

ಬೃಹತ್ ಕ್ರಿಕೆಟ್ ಬ್ಯಾಟಿನಿಂದ ಸಿಡಿಗಳನ್ನು ಹೊರತೆಗೆದು ಚಿತ್ರದ ಆಡಿಯೋ ರಿಲೀಸ್  ಮಾಡಿದ್ದು ಈ ಸಮಾರಂಭದ ವಿಶೇಷವಾಗಿತ್ತು. ಈ ಚಿತ್ರ ಚೆನೈ-23 ಎಂಬ ತಮಿಳು ಚಿತ್ರದ ರೀಮೇಕ್ ಆದರೂ ನಮ್ಮ ನೇಟಿವಿಟಿ, ಕನ್ನಡಿಗರ ಅಭಿರುಚಿಗೆ ತಕ್ಕಂತೆ ಸ್ಕ್ರಿಪ್ಟ್ನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೇವೆ. ಈಗಾಗಲೇ ಚಿತ್ರದ ಎಲ್ಲಾ ಕಾರ್ಯ ಮುಗಿದಿದ್ದು, ಡಿಟಿಎಸ್ ಅಂತಿಮ ಹಂತದಲ್ಲಿದೆ. ಮುಂದಿನ ವಾರ ಮೊದಲ ಪ್ರತಿ ಹೊರಬರುತ್ತಿರುವುದಾಗಿ ಪ್ರದೀಪ್ ರಾಜ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಜೆ.ಕೆ. `ಕ್ರಿಕೆಟ್ಗೆ ಸಂಬಂಧಪಟ್ಟ ಕಥೆಯಿಟ್ಟುಕೊಂಡು 5 ಜನ ಹುಡುಗರ ಮೇಲೆ ಪ್ರದೀಪ್ ರಾಜ್ ಈ ಸಿನಿಮಾ ಮಾಡಿದ್ದಾರೆ. ನನ್ನ ನೆಚ್ಚಿನ ಗಾಯಕ ವಿಜಯಪ್ರಕಾಶ್ ಟೈಟಲ್ ಹಾಡನ್ನು ಸೊಗಸಾಗಿ ಹಾಡಿದ್ದಾರೆ. ಹಿಂದಿಯಲ್ಲಿ ಕ್ರಿಕೆಟ್ ಆಟದ ಮೇಲೆ ಹಲವಾರು ಚಿತ್ರಗಳು ಬಂದಿವೆ. ಕನ್ನಡದಲ್ಲಿ ಈ ಥರದ ಚಿತ್ರಗಳು ತುಂಬಾ ವಿರಳ. ಕ್ರಿಕೆಟ್ ಅಲ್ಲದೇ ಲವ್, ಫ್ರೆಂಡ್ಶಿಪ್ ಬಗ್ಗೆ ಒಳ್ಳೆಯ ಅಂಶಗಳು ಚಿತ್ರದಲ್ಲಿವೆ. ಆಟದ ದೃಷ್ಯಗಳನ್ನು ಸಾಧ್ಯವಾದಷ್ಟು ನೈಜವಾಗಿಯೇ ಶೂಟ್ ಮಾಡಿದ್ದೇವೆ ಎಂದು ಹೇಳಿದರು.

ಚೆನೈನಿಂದ ಶೂಟಿಂಗ್ ಮುಗಿಸಿ ನೇರವಾಗಿ ಸಮಾರಂಭಕ್ಕೆ ಬಂದ ನಟ ಕಿಚ್ಚ ಸುದೀಪ್ ಮಾತನಾಡಿ `ಜೆಕೆ, ದೃವ, ಪ್ರದೀಪ್ ಎಲ್ಲಾ ನಮ್ಮ ಹುಡುಗರೇ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜೆಕೆ ನನಗೆ ಕೆಂಪೇಗೌಡ ಚಿತ್ರದಿಂದ, ಅದಕ್ಕೂ ಹಿಂದೆ ರಾಜ್ ಕಪ್ ಕ್ರಿಕೆಟ್ ಟೂನರ್ಿಯಿಂದ ಪರಿಚಯ. ಧೃವ ಬುಲ್ಡೋಜರ್ ಟೀಮಿನಲ್ಲಿದ್ದವರು. ಚಿಕ್ಕಣ್ಣ ರನ್ನ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೊಬ್ಬ ಹುಡುಗ ರಾಜೀವ ಎಲ್ಲಾ ನನ್ನ ಬಳಗದವರು. ವಿಜಯ ಭಾರಧ್ವಾಜ್ ಕನರ್ಾಟಕದ ಬಹು ದೊಡ್ಡ ಆಸ್ತಿ ಎಂದು ಹೇಳಿದರು.

ಸಮಾರಂಭದ ಅಂತ್ಯದಲ್ಲಿ ಆಗಮಿಸಿದ ನಟ ಯಶ್ ಮಾತನಾಡುತ್ತಾ `ಕಿರಾತಕ ಚಿತ್ರದಲ್ಲಿ ಪ್ರದೀಪ್ ರಾಜ್ ನನಗೆ ದೊಡ್ಡ ಬ್ರೇಕ್ ನೀಡಿದವರು.  ರೀಮೇಕ್ ಸಿನಿಮಾ ಮಾಡುವಾಗ ಏನಾದರೂ ಹೊಸತನ್ನು ಹುಡುಕಲೇ ಬೇಕಾಗಿತ್ತು. ಆಗ ಸ್ನೇಹಿತರಿಗೆ ಸಾಮಾನ್ಯವಾಗಿ ಬಳಸುತ್ತಿದ್ದ ಮಚ್ಚಾ, ಮಗಾ ಪದಗಳ ಬದಲಾಗಿ ನಮ್ಮ ಆಡುಭಾಷೆಯಾದ `ಅಣ್ತಮ್ಮಾ ಎಂಬ ಪದ ಬಳಸಿದರೆ ಹೇಗೆ ಅಂತ ಪ್ರದೀಪ್ ರಾಜ್ಗೆ ಸಲಹೆ ನೀಡಿದೆ. ಅದಕ್ಕವರು ಸರಿ ಎಂದು ಅದನ್ನೇ ಬಳಸಿಕೊಂಡರು. ಎಲ್ಲಾ ಯುವ ಪಡೆಯೇ ಸೇರಿ ಮಾಡಿದ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಸ್ಪೆಷಲ್ ಚಿತ್ರವಾಗಿ ಹೊರಹೊಮ್ಮಲಿ ಎಂದು ತನ್ನ ಸ್ನೇಹಿತರಿಗೆ ಹಾಗೂ ನಿದರ್ೇಶಕ ಪ್ರದೀಪ್ ರಾಜ್ ಅವರಿಗೆ ಶುಭಕೋರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com