ಈಗ 'ಗಾಂಧಿಗಿರಿ' ಜೈ ಅನ್ನಿ

ಏನೇ ವಿವಾದಗಳು ಎದುರಾಗಿ ಅದರಿಂದ ಯಾವುದೇ ರೀತಿಯ ಸಮಸ್ಯೆಗಳು ಬಂದರೂ ಕಥೆ ಮೇಲೆ ಗಟ್ಟಿಯಾದ ನಂಬಿಕೆ...
ಗಾಂಧಿಗಿರಿ ಚಿತ್ರದ ಸ್ಟಿಲ್
ಗಾಂಧಿಗಿರಿ ಚಿತ್ರದ ಸ್ಟಿಲ್

ಏನೇ ವಿವಾದಗಳು ಎದುರಾಗಿ ಅದರಿಂದ ಯಾವುದೇ ರೀತಿಯ ಸಮಸ್ಯೆಗಳು ಬಂದರೂ ಕಥೆ ಮೇಲೆ ಗಟ್ಟಿಯಾದ ನಂಬಿಕೆ, ಸಿನಿಮಾ ಮಾಡಬೇಕೆನ್ನುವ ಆಸಕ್ತಿ ಇದ್ದರೆ ಎಲ್ಲವನ್ನು ಸರಿಯಾಗಿ ನಿಭಾಯಿಸಬಹುದು ಎನ್ನುವುದು ನಿರ್ದೇಶಕ ರಘು ಹಾಸನ್ ಅವರೇ ಸಾಕ್ಷಿ.

ಹುಚ್ಚುಡುಗ್ರು ಚಿತ್ರದ ನಂತರ ಹಿಟ್ಲರ್ ಹೆಸರಿನಲ್ಲಿ ಸಿನಿಮಾ ಶುರು ಮಾಡಿದ್ದೇ ತಡ, ಅದಕ್ಕೆ ಎಲ್ಲಿಲ್ಲದ ವಿವಾದಗಳು ಸುತ್ತಿಕೊಂಡವು. ವಿವಾದಗಳಿಂದ ಅನಗತ್ಯ ಪ್ರಚಾರ ಬರುತ್ತದೆ ಹೊರತು, ಒಳ್ಳೆಯ ಸಿನಿಮಾ ಮಾಡುವುದಕ್ಕೆ ಆಗಲ್ಲ ಎಂದುಕೊಂಡ ರಘು, ಕೊನೆಗೂ ಚಿತ್ರದ ಟೈಟಲ್ ಬದಲಾಯಿಸಿದ್ದಾರೆ. ಹಿಟ್ಲರ್ ಬದಲು ಗಾಂಧಿಗಿರಿ ಹೆಸರಿನೊಂದಿಗೆ ತಮ್ಮ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದಕ್ಕೆ ತಯಾರಿ ನಡೆಸಿಕೊಂಡಿದ್ದಾರೆ. ಜೋಗಿ ಪ್ರೇಮ್ ಹಾಗೂ ನಟಿ ಶರ್ಮಿಳಾ ಮಾಂಡ್ರೆ ಈ ಚಿತ್ರದ ನಾಯಕ, ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ವೇದಮೂರ್ತಿ ಹಾಗೂ ಆರ್.ಜೆ. ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ, ಗಿರೀಶ್ ಆರ್. ಗೌಡ ಛಾಯಾಗ್ರಾಹಣ ಚಿತ್ರಕ್ಕಿದೆ. ನಿರ್ದೇಶಕ ರಘು ಹಾಸನ್, ಈ ಬಾರಿ ಎಲ್ಲ ವರ್ಗದ ಪ್ರೇಕ್ಷಕರಿಗೂ ಮೆಚ್ಚುಗೆಯಾಗುವಂಥ ಸಿನಿಮಾ ಮಾಡುತ್ತೇನೆಂಬ ನಂಬಿಕೆಯಲ್ಲಿದ್ದಾರೆ. ಅವರ ಈ ನಂಬಿಕೆಗೆ ಗಾಂಧಿಗಿರಿ ಚಿತ್ರ ಸಾಥ್ ಕೊಡುತ್ತದಂತೆ.

ಅಂದಹಾಗೆ ಗಾಂಧಿಗಿರಿ ಚಿತ್ರಕ್ಕೆ ಇದೇ ತಿಂಗಳು 20ಕ್ಕೆ ಅದ್ದೂರಿಯಾಗಿ ಪೂಜೆ ನಡೆಯಲಿದೆ. ಅಂದಿನಿಂದಲೇ ಚಿತ್ರೀಕರಣ ಕೂಡ ಶುರುವಾಗಲಿದೆ. ಹಿರಿಯ ನಟಿ ಅರುಂಧತಿ ನಾಗ್ ಚಿತ್ರದಲ್ಲಿ ಪ್ರೇಮ್ ಅವರಿಗೆ ತಾಯಿ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಉಳಿದಂತೆ ರವಿಶಂಕರ್, ಚಿಕ್ಕಣ್ಣ, ರಂಗಾಯಣ ರಘು ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

ತಾಯಿ ಸೆಂಟಿಮೆಂಟ್ ಜೊತೆಗೆ ಸಂದೇಶ ಕೂಡ ಈ ಚಿತ್ರ ಒಳಗೊಂಡಿದೆ. ಹಿಂಸೆಯ ದಾರಿಯಲ್ಲಿರುವ ವ್ಯಕ್ತಿ ಗಾಂಧಿಯಾಗುವ ಕತೆ ಇಲ್ಲಿದೆ. ಹೀಗಾಗಿ ಚಿತ್ರಕ್ಕೆ ಹಿಟ್ಲರ್ ಅಥವಾ ಗಾಂಧಿಗಿರಿ ಎರಡೂ ರೀತಿಯ ಹೆಸರುಗಳು ಸೂಕ್ತವಾಗುತ್ತವೆ. ಆದರೆ, ಹಿಟ್ಲರ್ ಹೆಸರು ವಿವಾದಕ್ಕೆ ಒಳಗಾಗಿರುವುದರಿಂದ ಗಾಂಧಿಗಿರಿ ಅಂತ ಬದಲಾಯಿಸಿದ್ದೇನೆ. ಕೊನೆ ತನಕ ವಿವಾದ ಮಾಡಿಕೊಳ್ಳುವುದು ನನಗೆ ಬೇಕಿಲ್ಲ. ಹೀಗಾಗಿ ಹೆಸರು ಬದಲಾಯಿಸಿದೆ' ಎನ್ನುತ್ತಾರೆ ನಿರ್ದೇಶಕ ರಘು ಹಾಸನ್. ಎರಡು ಹಂತದಲ್ಲಿ ಗಾಂಧಿಗಿರಿ ಚಿತ್ರಕ್ಕೆ ಶೂಟಿಂಗ್ ನಡೆಯಲಿದೆ. ಕಾರ್ಕಳ, ಉಡುಪಿ, ಮೈಸೂರು, ಊಟಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡುವ ಯೋಜನೆ ನಿರ್ದೇಶಕರದ್ದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com