ಕಾಜೋಲ್ ಸಂಭಾವನೆ ಬರೋಬ್ಬರಿ 5 ಕೋಟಿ!

ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ' ಜೋಡಿ ಶಾರುಖ್-ಕಾಜೋಲ್ ವರ್ಷಗಳ ನಂತರ ಮತ್ತೆ ಬೆಳ್ಳಿಪರದೆ ಮೇಲೆ ಒಂದಾಗುತ್ತಿರುವ ಸುದ್ದಿಯಿದೆ.
ಕಾಜೋಲ್
ಕಾಜೋಲ್
Updated on

ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ' ಜೋಡಿ ಶಾರುಖ್-ಕಾಜೋಲ್ ವರ್ಷಗಳ ನಂತರ ಮತ್ತೆ ಬೆಳ್ಳಿಪರದೆ ಮೇಲೆ ಒಂದಾಗುತ್ತಿರುವ ಸುದ್ದಿಯಿದೆ. ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ
ಮೂಡಿಬರುತ್ತಿರುವ ದಿಲ್ವಾಲೆ ಚಿತ್ರದಲ್ಲಿ ಶಾರುಖ್ ಮತ್ತು ಕಾಜೋಲ್ ಜೋಡಿಯ ಮೋಡಿ ಇರುವುದು ಪಕ್ಕಾ ಆಗಿದೆಯಂತೆ.

ರೋಹಿತ್ ಶೆಟ್ಟಿಯ ಕೋರಿಕೆಗೆ ಅಸ್ತು ಅಂದಿರುವ ಕಾಜೋಲ್, ಶಾರುಖ್‍ನ ದಿಲ್ವಾಲೆ ಆಗಲು ಬರೋಬ್ಬರಿ 5 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರಂತೆ! ಇಂದಿನ ಟಾಪ್ ನಟೀ ಮಣಿಯರು ಪಡೆಯುವ ಸಂಭಾವನೆ ಕೂಡ ಇಷ್ಟೇ. ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಜೋಲ್ ತೆರೆ ಮೇಲೆ ಕಾಣಿಸಿ ಕೊಂಡು 5 ವರ್ಷಗಳಾಗಿವೆ.

ಕರಣ್ ಜೋಹರ್‍ನ ಒತ್ತಾಯದ ಮೇರೆಗೆ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಹಾಡೊಂದರಲ್ಲಿ ಹೆಜ್ಜೆ ಹಾಕಿರುವುದನ್ನು ಬಿಟ್ಟರೆ 2010ರ ನಂತರ ಕಾಜೋಲ್ ಬೇರೆ ಯಾವ ಚಿತ್ರಕ್ಕೂ ಸಹಿ ಹಾಕಿರಲಿಲ್ಲ. ಇಷ್ಟು ದೀರ್ಘ ಕಾಲದ ನಂತರ ಈಗ ದಿಲ್ವಾಲೆಗಾಗಿ ಬಣ್ಣ ಹಚ್ಚುತ್ತಿದ್ದಾರೆ. ಅಲ್ಲಿಗೆ, ಐದು ವರ್ಷಗಳ ಗ್ಯಾಪ್ ಆಗಿದ್ದರೂ ಕಾಜೋಲ್ ಚಾರ್ಮ್ ಕಮ್ಮಿ ಆಗಿಲ್ಲ ಎಂದಂತಾಯಿತು!


ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com