ಚಾಂದಿನಿ
ಚಾಂದಿನಿ

ಚಾಂದಿನಿ ಅಭಿನಯದ 'ಖೈದಿ' ಚಿತ್ರ ಇದೇ ವಾರ ತೆರೆಗೆ

ಸ್ಯಾಂಡಲ್‌ವುಡ್‌ನಲ್ಲಿ ಎಕೆ 47, ಎ ನಂತ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಕೊಟ್ಟು ಕಣ್ಮರೆಯಾಗಿದ್ದ ಚಾಂದಿನಿ ಅವರು ಖೈದಿ ಚಿತ್ರದ ಮೂಲಕ ಮತ್ತೆ ನಾಯಕಿಯಾಗಿ...
Published on

ಸ್ಯಾಂಡಲ್‌ವುಡ್‌ನಲ್ಲಿ 'ಎಕೆ 47', 'ಎ' ನಂತ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಕೊಟ್ಟು ಕಣ್ಮರೆಯಾಗಿದ್ದ ಚಾಂದಿನಿ ಅವರು ಖೈದಿ ಚಿತ್ರದ ಮೂಲಕ ಮತ್ತೆ ನಾಯಕಿಯಾಗಿ ಎಂಟ್ರಿ ಕೊಟ್ಟಿರುವುದು ನಿಮಗೆಲ್ಲ ತಿಳಿದಿರುವ ಸಂಗತಿ. ಅವರ ಅಭಿನಯದ ಖೈದಿ ಚಿತ್ರ ಇದೇ ವಾರ ಪ್ರೇಕ್ಷಕರ ಮುಂದೆ ಬರುತ್ತಿದೆ.

ಎರಡು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಕೊಟ್ಟಿದ್ದ ಚಾಂದಿನಿ ಅವರನ್ನು ಚಿತ್ರ ಪ್ರೇಕ್ಷಕರು ಆದರದಿಂದ ಕೈಹಿಡಿದಿದ್ದರು. ಹಲವು ವರ್ಷಗಳ ನಂತರ ಮತ್ತೆ ಖೈದಿ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದು ಈ ಚಿತ್ರದ ಕುರಿತಂತೆ ಚಾಂದಿನಿ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು, ಪ್ರೇಕ್ಷಕರು ಮತ್ತೆ ತಮ್ಮ ಕೈ ಹಿಡಿತ್ತಾರ ಎಂಬ ನಿರೀಕ್ಷೆಯಲ್ಲಿದ್ದಾರೆ.

ಇದೇ ವಾರ ಖೈದಿ ಚಿತ್ರ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಮಾತನಾಡಿದ ಅವರು, ಹಲವು ವರ್ಷಗಳ ನಂತರ ನನ್ನ ಚಿತ್ರವೊಂದು ತೆರೆಕಾಣುತ್ತಿರುವುದು ಸಂತಸ ವಿಚಾರ. ನಾನೆಂದು ಚಿತ್ರರಂಗದಿಂದ ಬಹುದೂರ ಹೋಗಿರಲಿಲ್ಲ ಹೀಗಾಗಿ ಚಿತ್ರರಂಗಕ್ಕೆ ಮತ್ತೆ ಕಮ್ ಬ್ಯಾಕ್ ಮಾಡುವ ಪ್ರಶ್ನೆಯೇ ಇಲ್ಲ. ಈ ದೂರವನ್ನು ಎರಡು ಚಿತ್ರಗಳ ನಡುವಿನ ಅಂತರ ಎಂದು ಕರೆಯಬಹುದು ಎಂದು ಚಾಂದಿನಿ ಹೇಳಿದ್ದಾರೆ.

ನಿರ್ದೇಶಕ ಗುರುದತ್ ಅವರು ಚಿತ್ರದ ಕತೆ ಹೇಳುವಾಗ ನಾನಗೆ ಹೆಚ್ಚು ಖುಷಿಯಾಯ್ತು. ಪ್ರಸ್ತುತ ಪ್ರೇಕ್ಷಕರಿಗೆ ತಕ್ಕ ಚಿತ್ರಕಥೆಯನ್ನು ನಿರ್ದೇಶಕರು ಹೆಣೆದಿದ್ದಾರೆ. ಈಗಾಗಿಯೇ ನಾಯಕಿಯಾಗಿ ನಟಿಸಲು ಒಪ್ಪಿಕೊಂಡೆ ಎಂದರು.

ಇದೇ ವೇಳೆ ಇನ್ನು ಹೆಸರಿಡದ ಚಿತ್ರ ತಮಿಳು ಮತ್ತು ಹಿಂದಿ ದ್ವಿಭಾಷೆಯಲ್ಲಿ ತಯಾರಾಗುತ್ತಿದ್ದು , ಆ ಚಿತ್ರದಲ್ಲಿ ನಟ ಗುಲ್ಷನ್ ಗ್ರೋವರ್ ಜತೆ ಅಭಿನಯಿಸುತ್ತದ್ದು, ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದೇನೆ. ಈ ಚಿತ್ರವನ್ನು ವಸಂತ್ ಎಂಬುವರು ನಿರ್ದೇಶಿಸುತ್ತಿದ್ದಾರೆ ಎಂದು ಚಾಂದಿನಿ ಹೇಳಿದ್ದಾರೆ.

ಚಾಂದಿನಿಗೆ ಇಲ್ಲಿ ಸಾಥ್ ಕೊಟ್ಟಿರುವ ಹೀರೋ ಹೆಸರು ಧನುಷ್. "ಸೈಕೋ" ಚಿತ್ರದಲ್ಲಿ ನಾಯಕರಾಗಿದ್ದವರು ಈ ಧನುಷ್. ಸೈಕೋ ಆದ್ಮೇಲೆ ಕಳೆದೆ ಹೋಗದ್ದ ಧನುಷ್, ಇತ್ತೀಚಿಗೆ ‘ನಮಸ್ತೆ ಇಂಡಿಯಾ’ ಅನ್ನೋ ಒನ್'ಟೇಕ್ ಸಿನಿಮಾದಲ್ಲಿ ಅಭಿನಯಿಸಿದ್ದರು.

ಖೈದಿ ಚಿತ್ರಕ್ಕೆ ಗುರುದತ್ ನಿರ್ದೇಶಕರು. ಈ ಗುರುದತ್ ಬೇರೆ ಯಾರೂ ಅಲ್ಲ. ಸೈಕೋ ಚಿತ್ರದ ನಿರ್ಮಾಪಕರೇ. ಕತೆ-ಚಿತ್ರಕತೆ-ನಿರ್ದೇಶನ ಎಲ್ಲವೂ ಇವರೇ ಮಾಡುತ್ತಿದ್ದಾರೆ.

1984 ರಲ್ಲಿ ಬಂದ ಖೈದಿ ಚಿತ್ರದಲ್ಲಿ ‘ತಾಳೆ ಹೂ ಎದೆಯಿಂದ’ ಹಾಡು ಸಖತ್ ಫೇಮಸ್ ಆಗಿತ್ತು. ಚಿತ್ರವನ್ನೂ ಜನ ಅಷ್ಟೇ ಮೆಚ್ಚಿಕೊಂಡಿದ್ದರು. ಅದೇ ಒಂದು ನೇಮ್ ಅಂಡ್ ಫೇಮ್​ ಅನ್ನ ಈ ಚಿತ್ರದಲ್ಲಿ ಬಳಸಿಕೊಳ್ಳುತ್ತಿದ್ದಾರೆ ನಿರ್ದೇಶಕ ಗುರುದತ್, ಖೈದಿಯ ಅದೇ "ತಾಳೆ ಹೂ ಎದೆಯಿಂದ" ಹಾಡನ್ನ ರಿಮಿಕ್ಸ್ ಮಾಡಿದ್ದಾರೆ. ಇದು ಕೂಡ ಒಂದು ರೀತಿ ಅಟ್ರ್ಯಾಕ್ಟಿವ್ ಆಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com