ಬಹುಮುಖ ಪ್ರತಿಭೆ ಶ್ರುತಿ
ಶ್ರುತಿ, ಅಪ್ಪ ಕಮಲ್ ಹಾಸನ್‍ರಂತೆಯೇ ಬಹುಮುಖ ಪ್ರತಿಭೆ. ಪ್ರಶಸ್ತಿ ಪ್ರದಾನ ಸಮಾರಂಭವೊಂದಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವ ವಿಡಿಯೋ ನೋಡಿದರೆ ಈಕೆ ಬೆಸ್ಟ್ ಡ್ಯಾನ್ಸರ್ ಎಂಬುದರಲ್ಲಿ ಎರಡು ಮಾತಿಲ್ಲ.
ಈ ವಿಡಿಯೋ ಬಿಡುಗಡೆಯಾಗಿ ಬಹಳ ದಿನಗಳಾಗಿವೆ. ಆದರೆ ಈಗ ಅಭಿಮಾನಿಗಳು ಮುಗಿಬಿದ್ದು ನೋಡುತ್ತಿರುವುದು ವಿಶೇಷ. `ಸೋಲು ಗೆಲುವಿನ ಬಗ್ಗೆ ಮಾತನಾಡುವುದು, ಅವುಗಳ ಬಗ್ಗೆ ಪದೇಪದೆ ಚರ್ಚಿಸುವುದು ನನಗೆ ಸುತಾರಾಂ ಇಷ್ಟವಿಲ್ಲ. ಫಲಿತಾಂಶ ಏನೇ ಇರಲಿ ಅದು ಮನಸ್ಸಿನಲ್ಲಿ ಸ್ವಲ್ಪ ಸಮಯವಷ್ಟೇ ಇರುವುದು ಒಳಿತು' ಎನ್ನುತ್ತಾರೆ ಶ್ರುತಿ.
`ನಾಲ್ಕು ಜನ ನಡೆಯುವ ಹಾದಿಯಲ್ಲಿ ನಾನೂ ಹೆಜ್ಜೆ ಹಾಕುವುದು ನನಗಿಷ್ಟವಿಲ್ಲ. ನನ್ನ ಈ ಗುಣವೇ ನನ್ನನ್ನು ವಿಶೇಷವಾಗಿ ನೋಡುವಂತೆ ಮಾಡಿದೆ. ಯಾವುದೇ ಸಿನಿಮಾದ ಸೋಲು ಗೆಲುವು ಇಡೀ ಚಿತ್ರತಂಡಕ್ಕೆ ಸಲ್ಲುತ್ತದೆ. ನಾನಂತೂ ಸಿನಿಮಾ ಒಂದರ ಗೆಲುವನ್ನು ಎಲ್ಲರಿಗೂ ಹಂಚುತ್ತೇನೆ. ಅದೇ ರೀತಿ ಸೋಲನ್ನೂ. ಹೆಚ್ಚಿನವರು ಹೊಸ ಪ್ರಯೋಗಕ್ಕೆ ಕೈಹಾಕುವುದಿಲ್ಲ. ಆದರೆ ನಾನು ಮಾತ್ರ ಹೊಸಹೊಸ ಪ್ರಯೋಗಗಳಿಗೆ ಸದಾ ಸಿದ್ಧ' ಎಂದು ಸೋಲನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದಾರೆ. ಶ್ರುತಿ ಹಾಸನ್‍ಗೆ ಆಲ್ ದಿ ಬೆಸ್ಟ್.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ