ಶೇಷಾಚಲಂ ಎನ್ಕೌಂಟರ್ ನಡೆದ ಪ್ರದೇಶ
ಸಿನಿಮಾ ಸುದ್ದಿ
ರಕ್ತಚಂದನ ಎನ್ಕೌಂಟರ್: ಈಗ ಸಿನೆಮಾ ಆಗಲಿದೆ
ಆಂಧ್ರದ ಶೇಷಾಚಲಂ ಅರಣ್ಯದಲ್ಲಿ ಇತ್ತೀಚೆಗೆ ಆಂಧ್ರ ಪೊಲೀಸರು ಎನ್ಕೌಂಟರ್ ನಲ್ಲಿ ಕೊಂದ ೨೦ ತಮಿಳು ನಾಡಿನ ಮರ ಕಡಿಯುವವರ ಕಥೆ ಈಗ
ಚೆನ್ನೈ: ಆಂಧ್ರದ ಶೇಷಾಚಲಂ ಅರಣ್ಯದಲ್ಲಿ ಇತ್ತೀಚೆಗೆ ಆಂಧ್ರ ಪೊಲೀಸರು ಎನ್ಕೌಂಟರ್ ನಲ್ಲಿ ಕೊಂದ ೨೦ ತಮಿಳು ನಾಡಿನ ಮರ ಕಡಿಯುವವರ ಕಥೆ ಈಗ ಬೆಳ್ಳಿತೆರೆಗೆ ಬರಲು ಸಿದ್ಧವಾಗುತ್ತಿದೆ. ತಮಿಳು ನಿರ್ದೇಶಕರಾದ ವಿ ಆರ್ ಕಾಳಿದಾಸ್ ಮತ್ತು ಅಗಸ್ಟಿನ್ ಜೊತೆಯಾಗಿ ಈ ಸಿನೆಮಾ ನಿರ್ದೇಶಿಸಲಿದ್ದಾರೆ.
'ತೂಕ್ಕುಮಾರ ಪೂಕಲ್' ಎಂದು ಹೆಸರಿಸಿರುವ ಈ ಸಿನೆಮಾಗೆ ಕಥೆ ಮತ್ತು ಸ್ಕ್ರೀನ್ ಪ್ಲೇ ಬರೆಯಲು 'ಅಪರಾಧಿ ಕಥೆ ಕಾದಂಬರಿ' ಪ್ರಾಕಾರದ ಜನಪ್ರಿಯ ಬರಹಗಾರ ರಾಜೇಶ್ ಕುಮಾರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ನಿರ್ದೇಶಕರು ನೀಡಿರುವ ಹೇಳಿಕೆಯಲ್ಲಿ "ಮುಗ್ಧ ತಮಿಳು ಜನರನ್ನು ಕೊಂದ ಈ ಹೀನ ಕೃತ್ಯದ ಸತ್ಯವನ್ನು ಹೊರಗೆಡವಲು ಈ ಸೂಕ್ಷ್ಮ ಪ್ರಕರಣದ ಮೇಲೆ ಸಿನೆಮಾ ಮಾಡಲು ನಿರ್ಧರಿಸಿದ್ದೇವೆ" ಎಂದು ತಿಳಿಸಿದ್ದಾರೆ.
ಚಿತ್ರದ ತಂಡವನ್ನು ಇನ್ನು ತಿಳಿಸಬೇಕಿದೆ. ಕೊಯಂಬತ್ತೂರಿನಲ್ಲಿ ಈ ಶುಕ್ರವಾರದಿಂದ ಸಿನೆಮಾ ಚಿತ್ರೀಕರಣ ಪ್ರಾರಂಭವಾಗಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ