೫೦೦ ಕೋಟಿ ಕ್ಲಬ್ ಸೇರಿದ ಮೊದಲ ಹಿಂದಿಯೇತರ ಸಿನೆಮಾ ಬಾಹುಬಲಿ

ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಕಿರೀಟಕ್ಕೆ ಈಗ ಮತ್ತೊಂದು ಗರಿ. ರಾಣಾ ದಗ್ಗುಭಟಿ, ಪ್ರಭಾಸ್ ಮತ್ತು ತಮನ್ನ ನಿರ್ದೇಶನದ ಈ ಸಿನೆಮಾ ೫೦೦ ಕೋಟಿ
ಬಾಹುಬಲಿ ಸಿನೆಮಾದ ದೃಶ್ಯ
ಬಾಹುಬಲಿ ಸಿನೆಮಾದ ದೃಶ್ಯ
Updated on

ನವದೆಹಲಿ: ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಕಿರೀಟಕ್ಕೆ ಈಗ ಮತ್ತೊಂದು ಗರಿ. ರಾಣಾ ದಗ್ಗುಭಟಿ, ಪ್ರಭಾಸ್ ಮತ್ತು ತಮನ್ನ ನಿರ್ದೇಶನದ ಈ ಸಿನೆಮಾ ೫೦೦ ಕೋಟಿ ಕ್ಲಬ್ ಸೇರಿದ ಮೊದಲ ಹಿಂದಿಯೇತರ ಸಿನೆಮಾ ಎಂಬ ಹೆಗ್ಗಳಿಕೆ ಪಡೆದಿದೆ.

ಜಾಗತಿಕವಾಗಿ ಈಗಲೂ ಸುಮಾರು ೨೦೦೦ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಈ ಸಿನೆಮ ಭಾನುವಾರದ ಗಳಿಕೆಯ ಪ್ರಕಾರ ೫೦೦ ಕೋಟಿ ಗೆರೆ ದಾಟಿದೆ.

ಅಮಿತಾಬ್ ಬಚ್ಚನ್, ರಿಷಿ ಕಪೂರ್, ಸಲ್ಮಾನ್ ಖಾನ್, ಶಾರುಕ್ ಖಾನ್ ಹೀಗೆ ಹಲವಾರು ಬಾಲಿವುಡ್ ದಿಗ್ಗಜರು ಈ ಸಿನೆಮಾಗೆ ಪ್ರಶಂಸೆಯ ಮಹಪೂರವನ್ನೇ ಹರಿಸಿದ್ದಾರೆ.

ಜೂನ್ ೧೦ ರಂದು ಬಿಡುಗಡೆಯಾಗಿದ್ದ ಈ ಸಿನೆಮಾ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com