ಬಾಲಿವುಡ್ ನಟ ಕಿಂಗ್ ಖಾನ್ ಶಾರುಖ್ (ಸಂಗ್ರಹ ಚಿತ್ರ)
ಸಿನಿಮಾ ಸುದ್ದಿ
ಬಾಹುಬಲಿ ತಂಡಕ್ಕೆ ಧನ್ಯವಾದ ಹೇಳಿದ ಕಿಂಗ್ ಖಾನ್ ಶಾರುಖ್
ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ದೇಶ-ವಿದೇಶದಾದ್ಯಂತ ಸದ್ದು ಮಾಡುತ್ತಿದ್ದು, ಚಿತ್ರಕ್ಕೆ ಸಾಕಷ್ಟು ಹಿರಿಯ ನಟ-ನಿರ್ದೇಶಕರಿಂದ ಪ್ರಶಂಸೆ ವ್ಯಕ್ತವಾದ ಹಿನ್ನೆಲೆಯಲ್ಲೇ ಇದೀಗ ಬಾಲಿವುಡ್ ನಟ ಕಿಂಗ್ ಖಾನ್ ಶಾರುಖ್ ಸಹ ಚಿತ್ರದ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ...
ನವದೆಹಲಿ: ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ದೇಶ-ವಿದೇಶದಾದ್ಯಂತ ಸದ್ದು ಮಾಡುತ್ತಿದ್ದು, ಚಿತ್ರಕ್ಕೆ ಸಾಕಷ್ಟು ಹಿರಿಯ ನಟ-ನಿರ್ದೇಶಕರಿಂದ ಪ್ರಶಂಸೆ ವ್ಯಕ್ತವಾದ ಹಿನ್ನೆಲೆಯಲ್ಲೇ ಇದೀಗ ಬಾಲಿವುಡ್ ನಟ ಕಿಂಗ್ ಖಾನ್ ಶಾರುಖ್ ಸಹ ಚಿತ್ರದ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಬಾಹುಬಲಿ ಚಿತ್ರ ನೋಡಿ ಟ್ವಿಟರ್ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಅವರು, ಬಾಹುಬಲಿ ಚಿತ್ರ ನೋಡಿ ಬಹಳ ಸಂತೋಷವಾಯಿತು. ಚಿತ್ರ ತಂಡದ ತಂತ್ರಜ್ಞರು, ನಟ, ನಿರ್ದೇಶಕರ ಬೆವರು ಇದೀಗ ಪರದೆಯ ಮೇಲೆ ಅದ್ಭುತವಾಗಿ ಮೂಡಿಬಂದಿದ್ದು, ತಂಡದ ಕೆಲಸ ಮತ್ತಿತರರಿಗೆ ಪ್ರೇರಣೆಯಾಗಲಿದೆ. ತಂತ್ರಜ್ಞರ ಕೈಚಳಕ, ಶ್ರದ್ಧೆಯನ್ನು ಪ್ರಶಂಸಿಸಲೇಬೇಕು ಎಂದು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
ಶ್ರಮ ಪಟ್ಟಾಗ ಮಾತ್ರವೇ ಆಕಾಶದೆತ್ತರಕ್ಕೆ ಬೆಳೆಯಲು ಸಾಧ್ಯ. ಬಾಹುಬಲಿ ಚಿತ್ರದ ಚಿತ್ರೀಕರಣದಲ್ಲಿ ಪ್ರತಿಯೊಬ್ಬರು ಕಾರ್ಯೋನ್ಮುಖರಾಗಿರುವುದು ಚಿತ್ರ ಮೂಡಿಬಂದಿರುವ ಮೂಲಕ ತಿಳಿಯಬಹುದು ಎಂದು ಬಾಹುಬಲಿ ಚಿತ್ರವನ್ನು ಹಾಡಿಹೊಗಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ