
ಬೆಂಗಳೂರು: ವಿಮರ್ಶಕರಿಂದ ಹಾಗೂ ಕನ್ನಡ ಅಭಿಮಾನಿಗಳಿಂದ ಬಹುಪರಾಕ್ ಎನ್ನಿಸಿಕೊಂಡಿದ್ದ ಹೊಸಬರೆ ಕೂಡಿ ಮಾಡಿರುವ ರಂಗಿತರಂಗ ಚಿತ್ರವನ್ನು ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ವಿಕ್ಷೀಸಿದ್ದಾರೆ.
ಸ್ಯಾಂಡಲ್‌ವುಡ್ ನ ದೊಡ್ಡ ದೊಡ್ಡ ನಟರ ಚಿತ್ರ ಪರಭಾಷಾ ನಟರು ನೋಡುವುದು ಸಾಮಾನ್ಯ. ಹೊಸಬರ ಚಿತ್ರವನ್ನು ಅಲ್ಲು ಅರ್ಜುನ್ ನೋಡಿದ್ದಾರೆ. ಆಗಸ್ಟ್ 2 ರಂದು ಬೆಂಗಳೂರಿಗೆ ಬಂದಿದ್ದ ಅರ್ಜುನ್ ಓರಾಯನ್ ಮಾಲ್ ನಲ್ಲಿ ರಂಗಿತಂರಗ ಚಿತ್ರವನ್ನು ವಿಕ್ಷೀಸಿದ್ದಾರೆ.
ಮಾಲ್ ಗೆ ಬಂದಿದ್ದ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟನನ್ನು ನೋಡಿದ ಅಭಿಮಾನಿಗಲು ಅಲ್ಲು ಅರ್ಜುನ್ ಜತೆ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಕನ್ನಡಿಗರ ಮನಗೆದ್ದಿದ್ದ ರಂಗಿತರಂಗ ಚಿತ್ರಇದೀಗ ಪರಭಾಷ ನಟರ ಪ್ರಶಂಸೆಗೂ ಭಾಜನವಾಗಿದೆ.
Advertisement