

ಬಾಲಿವುಡ್ ನ 'ಆಶಿಕಿ 2' ಚಿತ್ರದ ರೊಮ್ಯಾಂಟಿಕ್ ಹಾಡಿನ ಮೂಲಕ ಕೋಟ್ಯಾಂತರ ಜನರ ಮನಸ್ಸುನ್ನು ಮುಟ್ಟಿದ್ದ ಗಾಯಕ ಅರ್ಜಿತ್ ಸಿಂಗ್ ಅವರಿಗೆ ಭೂಗತ ಪಾತಕಿ ರವಿ ಪೂಜಾರಿ ಜೀವ ಬೆದರಿಕೆ ನೀಡಿದ್ದಾರೆಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಅರ್ಜಿತ್ ಸಿಂಗ್ ಗೆ ಕರೆ ಮಾಡಿದ ಭೂಗತ ಪಾತಕಿ ರವಿ ಪೂಜಾರಿ, 5 ಕೋಟಿ ಹಣ ನೀಡುವಂತೆ ಹೇಳಿದ್ದು, ಆದಾಯವಿಲ್ಲದೆಯೇ ಎರಡು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಬೆದರಿಕೆ ನೀಡಿದ್ದಾನೆಂದು ತಿಳಿದುಬಂದಿದೆ.
ರವಿ ಪೂಜಾರಿ ಬೆದರಿಕೆ ಕರೆ ಕುರಿತಂತೆ ಅರ್ಜಿತ್ ಸಿಂಗ್ ಅವರು ಈಗಾಗಲೇ ಬರವಣಿಗೆ ಮೂಲಕ ಮುಂಬೈನ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸ್ ಭದ್ರತೆಯನ್ನು ನಿರಾಕರಿಸಿದ್ದಾರೆಂದು ಹೇಳಲಾಗುತ್ತಿದೆ.
Advertisement