ಯಾವುದೇ ಕತ್ತರಿಯಿಲ್ಲದೆ 'ಆಲ್ ಇಸ್ ವೆಲ್' ಗೆ ಸೆನ್ಸಾರ್ ಮಂಡಲಿಯ 'ಯು' ಪ್ರಮಾಣಪತ್ರ

ಅಭಿಶೇಕ್ ಬಚ್ಚನ್ ಮತ್ತು ರಿಷಿ ಕಪೂರ್ ಅಭಿನಯದ 'ಆಲ್ ಇಸ್ ವೆಲ್' ಸಿನೆಮಾಗೆ ಸೆನ್ಸಾರ್ ಮಂಡಲಿಯಿಂದ 'ಯು' ಪ್ರಮಾಣಪತ್ರ ದೊರೆತಿದ್ದು, ಸಿನೆಮಾಗೆ
'ಆಲ್ ಇಸ್ ವೆಲ್' ಸಿನೆಮಾದ ಭಿತ್ತಿಚಿತ್ರ
'ಆಲ್ ಇಸ್ ವೆಲ್' ಸಿನೆಮಾದ ಭಿತ್ತಿಚಿತ್ರ

ಮುಂಬೈ: ಅಭಿಶೇಕ್ ಬಚ್ಚನ್ ಮತ್ತು ರಿಷಿ ಕಪೂರ್ ಅಭಿನಯದ 'ಆಲ್ ಇಸ್ ವೆಲ್' ಸಿನೆಮಾಗೆ ಸೆನ್ಸಾರ್ ಮಂಡಲಿಯಿಂದ 'ಯು' ಪ್ರಮಾಣಪತ್ರ ದೊರೆತಿದ್ದು, ಸಿನೆಮಾಗೆ ಯಾವುದೇ ಕತ್ತರಿ ಬಿದ್ದಿಲ್ಲ ಎಂಬುದು ವಿಶೇಷ.

ನಿರ್ಮಾಣ ಸಂಸ್ಥೆ ಟಿ-ಸೀರೀಸ್ ಅಧಿಕೃತ ಘೋಷಣೆಯಲ್ಲಿ ಈ ವಿಷಯ ತಿಳಿಸಿದ್ದು, 'ಆಲ್ ಇಸ್ ವೆಲ್' ಎಂದಿದೆ.

'ಓ ಮೈ ಗಾಡ್' ಸಿನೆಮಾ ಖ್ಯಾತಿಯ ಉಮೇಶ್ ಶುಕ್ಲಾ ಈ ಸಿನೆಮಾವನ್ನು ನಿರ್ದೇಶಿಸಿದ್ದು, ಒಡಕು ಮೂಡಿದ ಕುಟುಂಬದಲ್ಲಿ ಹೊಂದಾಣಿಕೆಯಿಲ್ಲದೆ ಬದುಕುವವರ ಕಥಾಹಂದರ ಹೊಂದಿದೆ. ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಈ ಕುಟುಂಬ ವರ್ಗ ರಸ್ತೆ ಪ್ರವಾಸ ಹೊರಡುವ ಕಥೆ ಹೊಂದಿದೆ.

ಅಭಿಶೇಕ್ ಅವರೊಂದಿಗೆ ರಿಷಿ, ಆಸಿನ್ ಮಾತು ಸುಪ್ರಿಯಾ ಪಾಠಕ್ ಮುಖ್ಯಭೂಮಿಕೆಯಲ್ಲಿದ್ದಾರೆ.

'ಆಲ್ ಇಸ್ ವೆಲ್' ಈ ಶುಕ್ರವಾರ ತೆರೆ ಕಾಣಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com