ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಣಿ ಮುಖರ್ಜಿ ಆದಿತ್ಯ ಚೋಪ್ರಾ ದಂಪತಿ

ಬಾಲಿವುಡ್ ನಟಿ ರಾಣಿ ಮುಖರ್ಜಿ ಮತ್ತು ನಿರ್ದೇಶಕ ಆದಿತ್ಯ ಚೋಪ್ರಾ ದಂಪತಿಯ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ..
ರಾಣಿ ಮುಖರ್ಜಿ ಮತ್ತು ಆದಿತ್ಯ ಛೋಪ್ರಾ
ರಾಣಿ ಮುಖರ್ಜಿ ಮತ್ತು ಆದಿತ್ಯ ಛೋಪ್ರಾ

ಮುಂಬಯಿ: ಬಾಲಿವುಡ್ ನಟಿ ರಾಣಿ ಮುಖರ್ಜಿ ಮತ್ತು ನಿರ್ದೇಶಕ ಆದಿತ್ಯ ಚೋಪ್ರಾ ದಂಪತಿಯ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2016 ರ ಜನವರಿಯಲ್ಲಿ ರಾಣಿ ಮುಖರ್ಜಿಗೆ ಹೆರಿಗೆಯಾಗಲಿದೆ ಎಂದು ರಾಣಿ ಮುಖರ್ಜಿ ಸಹೋದರಿ ಜ್ಯೋತಿ ಮುಖರ್ಜಿ ತಿಳಿಸಿದ್ದಾರೆ.

ಬಾಲಿವುಡ್ ನ ಹೆಸರಾಂತ ನಿರ್ದೇಶಕ ಯಶ್ ರಾಜ್ ಪುತ್ರ ಆದಿತ್ಯ ಚೋಪ್ರಾರನ್ನು 2014 ರ ಏಪ್ರಿಲ್ 21 ರಂದು ಇಟಲಿಯಲ್ಲಿ ಗುಟ್ಚಾಗಿ ವಿವಾಹವಾಗಿದ್ದರು ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿತ್ತು.

ರಾಣಿ ಮುಖರ್ಜಿ ಗರ್ಭಿಣಿಯಾಗಿರುವ ವಿಷಯವನ್ನು ಇದುವರೆಗೂ ಗುಟ್ಟಾಗಿ ಇಡಲಾಗಿತ್ತು. ದಂಪತಿ ಲಂಡನ್ ನಲ್ಲಿ ವಾಸವಿದ್ದು ತಮ್ಮ ಖಾಸಗಿ ಜೀವನವದ ಯಾವುದೇ ವಿಷಯವನ್ನು ಬಹಿರಂಗ ಪಡಿಸದಿರಲು ನಿರ್ಧರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com