ಕಡಲೂರ್ ಬಗ್ಗೆ ಕಾಳಜಿಯಿರಲಿ; ನಾಟಕೀಯತೆ ಬೇಡ: ಸಿದ್ಧಾರ್ಥ್

ಪ್ರವಾಹ ಪೀಡಿತ ಕಡಲೂರು ಜಿಲ್ಲೆಯ ಜನರಿಗೆ ಸಹಾಯಹಸ್ತ ಚಾಚಲು ಮುಂದಾಗಿರುವ ನಟ ಸಿದ್ಧಾರ್ಥ್ ಅಲ್ಲಿನ ಪರಿಸ್ಥಿತಿಯನ್ನು ಉತ್ಪ್ರೇಕ್ಷಿಸಲಾಗುತ್ತಿದೆ ಎಂದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಪ್ರವಾಹ ಪೀಡಿತ ಕಡಲೂರು ಜಿಲ್ಲೆಯ ಜನರಿಗೆ ಸಹಾಯಹಸ್ತ ಚಾಚಲು ಮುಂದಾಗಿರುವ ನಟ ಸಿದ್ಧಾರ್ಥ್ ಅಲ್ಲಿನ ಪರಿಸ್ಥಿತಿಯನ್ನು ಉತ್ಪ್ರೇಕ್ಷಿಸಲಾಗುತ್ತಿದೆ ಎಂದಿದ್ದಾರೆ. ನಾಟಕೀಯವಾಗಿ ಕೆಲಸ ಮಾಡುವುದಕ್ಕಿಂತ ಕಾಳಜಿ ಮುಖ ಎಂದು ಕಿವಿಮಾತು ಹೇಳಿದ್ದಾರೆ.

ತಮಿಳುನಾಡಿನಾದ್ಯಂತ ಧಾರಾಕಾರವಾಗಿ ಸುರಿದಿರುವ ಭಾರಿ ಮಳೆಯಿಂದಾಗಿ ಸಮುದ್ರ ತೀರದ ನಗರ ಕಡಲೂರ್ ಗೆ ಅತಿ ಹೆಚ್ಚು ಹಾನಿಯಾಗಿದೆ.

"ನಾವು ಸುಮಾರು ೧೫ ಗ್ರಾಮಗಳಿಗೆ ಭೇಟಿ ನೀಡಿದೆವು. ಅವುಗಳೆಲ್ಲ ಮುಳುಗಿವೆ, ಜನ ಉಪವಾಸದಿಂದ ನರಳುತ್ತಿದ್ದಾರೆ, ಯಾವ ಸೇವೆಯು ದೊರಕುತ್ತಿಲ್ಲ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಹೊರಗಿನಿಂದ ಕಡಲೂರ್ ಬಗ್ಗೆ ಪ್ರತಿಕ್ರಿಯಿಸಬೇಡಿ. ನರಳುತ್ತಿರುವ ಪ್ರದೇಶಗಳು ಇಲ್ಲಿವೆ, ಆದರೆ ಪರಿಹಾರದ ಬಗ್ಗೆ ಗೊಂದಲ ಬೇಡ. ಕಾಳಜಿ ಇರಲಿ ಆದರೆ ನಾಟಕೀಯತೆ ಬೇಡ" ಎಂದು ಸಿದ್ಧಾರ್ಥ್ ಟ್ವೀಟ್ ಮಾಡಿದ್ದಾರೆ.

ಕಡಲೂರ್ ಗೆ ಸಹಾಯ ಬೇಕು ಆದರೆ ಭೀತಿಯಲ್ಲ ಎಂದು ಕೂಡ ಹೇಳಿದ್ದಾರೆ.

"ಹಾಸಿಗೆಗಳು, ಹೊದಿಕೆಗಳು ಮತ್ತು ಸೊಳ್ಳೆ ಬತ್ತಿಗಳನ್ನು ಕಳುಹಿಸಿ. ಸಣ್ಣ ರಸ್ತೆಗಳಲ್ಲಿ ತೆರಳಬಹುದಾದ ಸಣ್ಣ ಟ್ರಕ್ ಗಳಲ್ಲಿ ಸಾಮಗ್ರಿಗಳನ್ನು ಕಳುಹಿಸಿ. ಮುಖ್ಯ ರಸ್ತೆಗಳಿಮ್ದ ದೂರವಿರುವ ಸಣ್ಣ ಹಳ್ಳಿಗಳತ್ತ ಗಮನ ಹರಿಸಿ. ಟ್ರಕ್ಕಿನ ಮೇಲೆ ಪರಿಹಾರ ಸಾಮಗ್ರಿಗಳ ಮೇಲೆ ಪರಿಹಾರ ಸಾಮಗ್ರಿ ಎಂಬ ಸ್ಟಿಕ್ಕರ್ ಹಾಕಬೇಡಿ. ಸಾಮಗ್ರಿಗಳಿಗಾಗಿ ದಾಳಿ ಮಾಡುವ ಅಪಾಯವಿರುತ್ತದೆ" ಎಂದು ಕೂಡ ಹೇಳಿದ್ದಾರೆ.

ಸ್ವಯಂಸೇವಕರು ಪೊಲೀಸರ ಸಹಾಯ ಪಡೆಯುವಂತೆ ಕೂಡ ಅವರು ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com