ಈ ಹಿಂದೆ 'ಮಸಣದ ಮಕ್ಕಳು' ಎನ್ನುವ ಮಕ್ಕಳ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿಯಾಗಿ, ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿರುವ ತಾನಿಷ್ಕಾ ಅಲಿಯಾಸ್ ತೇಜಸ್ವಿನಿ ಪ್ರಕಾಶ್, ಕನ್ನಡದ ಸಿನಿರಸಿಕರಿಗೆ ಅಪರಿಚಿತರೇನಲ್ಲ. ತೀರಾ ಇತ್ತೀಚೆಗೆ `ಗೂಳಿಹಟ್ಟಿ' ಚಿತ್ರದಲ್ಲೂ ನಾಯಕಿ ಆಗಿದ್ದರು. ಆದರೆ ಇಲ್ಲಿಯ ತನಕ ಇವರು ಮೈ ತುಂಬಾ ಬಟ್ಟೆ ತೊಟ್ಟು ಹೋಮ್ಲಿ ಕ್ಯಾರೆಕ್ಟರ್‍ಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು.