
ಚೆನ್ನೈ: ಜಲಪ್ರಳಯದ ಹಿನ್ನೆಲೆಯಲ್ಲಿ ಕೊಲಿವುಡ್ ಸೂಪರ್ ಸ್ಟಾರ್ ರಜನಿತಕಾಂತ್ ಅವರು ತಮ್ಮ 65ನೇ ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಅದರ ಬದಲು ಚೆನ್ನೈನೆರೆ ಸಂತ್ರಸ್ತರಿಗೆ ನೆರವಾಗಲು 10 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ.
ಇಂದು ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಭೇಟಿ ಮಾಡಿದ ತಮಿಳು ಸೂಪರ್ ಸ್ಟಾರ್, ಸಿಎಂ ಪರಿಹಾರ ನಿಧಿಗೆ 10 ಕೋಟಿ ರುಪಾಯಿ ಚೆಕ್ ನೀಡಿದರು.
ಡಿಸೆಂಬರ್ 12ಕ್ಕೆ 65ನೇ ವಸಂತಕ್ಕೆ ಕಾಲಿಡುತ್ತಿರುವ ರಜನಿಕಾಂತ್ ಅವರು ಈ ಮುಂಚೆ ನೆರೆ ಸಂತ್ರಸ್ತರಿಗೆ 10 ಲಕ್ಷ ರುಪಾಯಿ ದೇಣಿಗೆ ನೀಡಿದ್ದರು. ಇದೀಗ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಮತ್ತೆ 10 ಕೋಟಿ ರುಪಾಯಿ ನೀಡಿದ್ದಾರೆ.
ಶತಮಾನದ ಮಹಾಮಳೆಯಿಂದಾಗಿ ತಮಿಳು ನಾಡು ಈಗಷ್ಟೇ ಸಹಜ ಸ್ಥಿತಿಗೆ ಮರಳುತ್ತಿರುವ ಈ ಸಂದರ್ಭದಲ್ಲಿ ತಮ್ಮ ಹುಟ್ಟುಹಬ್ಬವನ್ನು ವೈಭವಪೂರಿತವಾಗಿ ಆಚರಿಸದಿರುವಂತೆ ರಜನಿಕಾಂತ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ ಪರಿಹಾರ ಕಾರ್ಯಕ್ಕೆ ಕೈಜೋಡಿಸುವಂತೆ ಕೇಳಿಕೊಂಡಿದ್ದಾರೆ.
Advertisement