
ತೆಲುಗು ಹಿರಿಯ ನಿರ್ದೇಶಕ ಕೋಡಿ ರಾಮಕೃಷ್ಣ ಅವರ ಮುಂದಿನ ಚಿತ್ರದಲ್ಲಿ ನಟಿಸುವ ಮೂಲಕ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ರೀ ಎಂಟ್ರಿ ಪಡೆಯಲಿದ್ದಾರೆ.
ಈ ಚಿತ್ರ ತಯಾರಿ ಸಂಬಂಧ ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆದಿದ್ದು, ಅಧಿಕೃತವಾಗಿ ಘೋಷಣೆ ಮಾಡುವುದೊಂದೇ ಬಾಕಿಯಿದೆ. ನಾಲ್ಕು ವರ್ಷಗಳ ಹಿಂದೆಯೇ ಚಿತ್ರದ ಶೂಟಿಂಗ್ ಆರಂಭವಾಗಬೇಕಿತ್ತು. ಆದರೆ ನಿರ್ದೇಶಕ ಕೋಡಿ ರಾಮಕೃಷ್ಣ ಅವರು ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದರಿಂದ, ಶೂಟಿಂಗ್ ಮುಂದೆ ಹಾಕಲಾಯಿತು.
ಸದ್ಯ ಕೋಡಿ ರಾಮಕೃಷ್ಣ ಚೇತರಿಸಿಕೊಂಡಿದ್ದು, ಚಿತ್ರದ ಬಗ್ಗೆ ಸಾರ್ವಜನಿಕವಾಗಿ ಪ್ರಕಟಿಸುವುದೊಂದೇ ಬಾಕಿಯಿದೆ. ಈ ಮೊದಲು ಚಿತ್ರಕ್ಕೆ ನಾಗಕನ್ಯೆ ಎಂದು ಹೆಸರಿಡಲಾಗಿತ್ತು. ನಂತರ ಅದನ್ನು ನಾಗರ ಹಾವು ಬದಲಾಯಿಸಲಾಯಿತು. ಅದ್ದೂರಿಯಾಗಿ ಕಾರ್ಯಕ್ರಮ ನಡೆಸಿ ಚಿತ್ರದ ಹೆಸರನ್ನು ಪ್ರಕಟಿಸಲು ನಿರ್ಧರಿಸಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ನಾಗರಹಾವು ಹೆಸರಿನಲ್ಲಿ ಬರುತ್ತಿರುವ ಮೂರನೇ ಚಿತ್ರ ಇದಾಗಿದೆ. 1970 ರಲ್ಲಿ ಡಾ. ವಿಷ್ಣು ವರ್ಧನ್ ಅಭಿನಯಿಸಿದ ನಾಗರಹಾವು ಚಿತ್ರ ತೆರೆಕಂಡಿತ್ತು. ನಂತರ ಹಿಂದಿಯ ಬಾಜಿಗಾರ್ ಸಿನಿಮಾವನ್ನು ಕನ್ನಡದಲ್ಲಿ ರಿಮೇಕ್ ಮಾಡಿ ನಾಗರಹಾವು ಎಂದು ಟೈಟಲ್ ಕೊಡಲಾಗಿತ್ತು. ಈಗ ರಮ್ಯಾ ಮತ್ತು ದಿಗಂತ್ ಅಭಿನಯದ ಚಿತ್ರಕ್ಕೂ ನಾಗರ ಹಾವು ಎಂದು ಹೆಸರಿಡಲಾಗಿದೆ.
Advertisement