
ಚೆನ್ನೈ: ರಜನಿಕಾಂತ್ ಅವರ ಹೆಸರು, ಭಾವಚಿತ್ರ, ವ್ಯಂಗ್ಯ ಚಿತ್ರ ಅಥವಾ ಅವರ ಶೈಲಿಯ ಅನುಕರಣೆಯನ್ನು ಬಳಸದಂತೆ ಮುಂಬೈ ಮೂಲದ ನಿರ್ಮಾಣ ಸಂಸ್ಥೆಗೆ ಮಧ್ಯಂತರ ತಡೆ ನೀಡಿದ್ದ ಮದ್ರಾಸ್ ಉಚ್ಛ ನ್ಯಾಯಾಲಯ ಈಗ ಫೆಬ್ರವರಿ ೩ ರಂದು ಶಾಶ್ವತ ತಡೆ ನೀಡಿದೆ. ಮುಂಬೈನ ವರ್ಶಾ ನಿರ್ಮಾಣ ಸಂಸ್ಥೆ 'ಮೈ ಹೂ ರಜನಿಕಾಂತ್' ಎಂಬ ಸಿನೆಮಾ ನಿರ್ಮಾಣ ಮಾಡಿದ ಹಿನ್ನಲೆಯಲ್ಲಿ ಈ ವಿವಾದ ಗರಿಗೆದರಿತ್ತು.
ಒಬ್ಬ ವ್ಯಕ್ತಿ ತಾರಾಮಟ್ಟಕ್ಕೆ ಏರಿದ ಮೇಲೆ ಅವನ ವೈಯಕ್ತಿಕ ಬದುಕನ್ನು ಚಿತ್ರಿಸುವಾಗ ಆ ವ್ಯಕ್ತಿಯ ಒಪ್ಪಿಗೆ ಪಡೆಯುವುದು ಅವಶ್ಯಕ ಎಂದು ನ್ಯಾಯಾಧೀಶ ಆರ್ ಸುಬ್ಬಯ್ಯ ಹೇಳಿದ್ದಾರೆ.
ಈ ಹಿಂದೆ ಸೆಪ್ಟಂಬರ್ ೧೭ರಂದು ನ್ಯಾಯಧೀಶ ಎಸ್ ತಮಿಲ್ವಾಣನ್ ಅವರು ರಜನಿಕಾಂತ್ ಅವರ ಹೆಸರು, ಭಾವಚಿತ್ರ, ವ್ಯಂಗ್ಯ ಚಿತ್ರ ಅಥವಾ ಅವರ ಶೈಲಿಯ ಅನುಕರಣೆಯನ್ನು ಬಳಸದಂತೆ ಮಧ್ಯಂತರ ತಡೆ ಆದೇಶ ನೀಡಿದ್ದರು.
ವಿಶ್ವವಿಖ್ಯಾತ ನಟ ರಜನಿಕಾಂತ್, ತಮ್ಮ ಹೆಸರನ್ನು ವ್ಯವಹಾರಕ್ಕೆ ದುರ್ಬಳಕೆಯಾಗದಂತೆ ತಡೆಯಲು ತಮ್ಮ ಜೀವನಾಧಾರಿತ ಯಾವುದೇ ಚಲನಚಿತ್ರಕ್ಕೆ ಅವಕಾಶ ನೀಡಿಲ್ಲ. ಆದುದರಿಂದ ಈ ಚಿತ್ರದ ವಿರುದ್ದ ಅರ್ಜಿ ಸಲ್ಲಿಸಿದ್ದರು.
Advertisement