
ಪ್ರೀತಿ, ಪ್ರೇಮದ ವಿಧಾನಗಳು ಬದಲಾಗಿವೆ. ಹಾಗೆ ಪ್ರೀತಿಯನ್ನು ಹೇಳಿಕೊಳ್ಳುವುದರಲ್ಲೂ ಕೊಂಚ ಭೀನ್ನವಾಗಿದೆ. ಈಗ ಪ್ರೀತಿ ಮಾಡಿಕೊಳ್ಳುವುದಕ್ಕೆ ಪಾರ್ಕ್, ನಂದಿ ಹಿಲ್ಸ್, ಕಾಲೇಜು ಕಾರಿಡಾರ್ ಸೇರಿಂದಂತೆ ಯಾವುದೇ ಲವರ್ಸ್ ಸ್ಪಾಟ್ ಗಳ ಅಗತ್ಯವಿಲ್ಲ, ಅಂಗೈಯಲ್ಲೊಂದು ಫೋನ್ ಇದ್ದರೆ ಸಾಕು, ಲವ್ ಅನ್ನೋ ಹಳೆ ಕಟ್ಟಡ ಹರೊಸದಾಗಿ ರೂಪಗೊಳ್ಳತ್ತದೆ. ಆದರೆ, ನಿಮ್ಮ ಮೊಬೈಲ್ ನಲ್ಲಿ ವಾಟ್ಸ್ ಅಪ್, ಫೇಸ್ ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳಿರಬೇಕು. ಇಷ್ಟಿದ್ದರೆ ಲವ್ ಹುಟ್ಟಿಕೊಳ್ಳುತ್ತದೆ ಎಂಬುದು ಈ ಕಾಲದ ನಂಬಿಕೆ.
ಯುವ ಜನಾಂಗದ ಇಂಥ ನಂಬಿಕೆಗಳನ್ನೇ ಬಂಡವಾಳ ಮಾಡಿಕೊಂಡು ಸೋಷಿಯಲ್ ನೆಟ್ ವರ್ಕ್ ಗಳ ಹಿನ್ನೆಲೆಯಲ್ಲಿ ಸಿನಿಮಾ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ನಿರ್ದೇಶಕ ರಾಮ್. ಅಂದಹಾಗೆ ಇವರ ನಿದೇಶನದ ಚಿತ್ರದ ಹೆಸರು ವಾಟ್ಸ್ ಅಪ್ ಲವ್. ಕಥೆ, ಚಿತ್ರಕಥೆಯನ್ನೂ ತಾನೇ ಮಾಡಿಕೊಂಡಿರುವ ರಾಮ್, ಇತ್ತೀಚೆಗೆ ತಮ್ಮ ಚಿತ್ರಕ್ಕೆ ಬೆಂಗಳೂರಿನ ನಾಗರಭಾವಿಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ನಡೆಸಿಕೊಂಡಿದ್ದಾರೆ.
ಸೋಷಿಯಲ್ ನೆಟ್ ವರ್ಕ್ ಗಳ ಮೂಲಕ ಶುರುವಾಗುವ ಸಂಬಂಧಗಳ ಮೇಲೆ ಈ ಚಿತ್ರವನ್ನು ಮಾಡಲಾಗುತ್ತಿದೆ. ಇದು ಪ್ರೇಮ ಕಥೆಯ ಚಿತ್ರ. ಪ್ರೇಮಿಗಳ ನಡುವೆ ಸಣ್ಣ ಅನುಮಾನ ಮೂಡುತ್ತದೆ. ಆದರೆ, ಈ ಪ್ರೇಮಿಗಳಿಗೆ ವಾಟ್ಸ್ ಅಪ್ ಹೇಗೆ ಸಹಾಯವಾಗುತ್ತದೆ ಎಂಬುದು ಚಿತ್ರದ ಒಂದು ಸಾಲಿನ ಕಥೆ ಎಂದರು ರಾಮ್.
ಜೀವ ಚಿತ್ರದ ನಾಯಕ. ಇವರಿಗೆ ಇದು ಮೊದಲ ಸಿನಿಮಾ. ಎಲ್ಲ ಹೊಸ ನಟರಂತೆಯೇ ಇವರಿಗೂ ಸಿನಿಮಾಗಳಲ್ಲಿ ಹೀರೋ ಆಗಬೇಕು ಎಂಬುದು ಸಿನಿಮಾಗಳಲ್ಲಿ ಹೀರೋ ಆಗಬೇಕು ಎಂಬುದು ಬಾಲ್ಯದ ಕನಸಂತೆ. ಇನ್ನು ಬಾಲ ನಟನಾಗಿಯೂ ನಟಿಸಿರುವ ಜೀವ, ಈ ಚಿತ್ರದ ಕಥೆ ಕೇಳಿ ತುಂಬಾ ಖುಷಿಯಾಗಿ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರಂತೆ. ಐಶ್ವರ್ಯ ಸಿಂದೋಗಿ ಹಾಗೂ ಶ್ರವ್ಯ ಚಿತ್ರದ ನಾಯಕಿಯರು. ಚಿತ್ರದ ಕಥೆ ಚೆನ್ನಾಗಿದೆ. ನಾನು ಈ ಚಿತ್ರದಲ್ಲಿ ಕಾಲೇಜ್ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಾಲೇಜಿನಲ್ಲಿ ಲವ್ ಬ್ರೇಕ್ ಅಪ್ ಆಗುತ್ತದೆ. ಮುಂದೆ ಹೇಗೆ ಇಬ್ಬರು ಇಂಟರ್ ನೆಟ್ ನಲ್ಲಿ ಒಂದಾಗುತ್ತೇವೆ ಎಂಬುದನ್ನು ನನ್ನ ಪಾತ್ರದ ಮೂಲಕ ಹೇಳಿದ್ದಾರೆ ಎಂಬುದು ಐಶ್ವರ್ಯ ಸಿಂದೋಗಿ ಹೇಳುವ ಮಾತು. ನಟಿ ಶ್ರವ್ಯ ಅವರಿಗೆ ಇಲ್ಲಿ ಸ್ಪೆಷಲ್ ಪಾತ್ರ ಇದೆ. ಚಿತ್ರದ ನಿರ್ಮಾಪಕ ಕುಮಾರ್. ಸಂಗೀತ ಹೇಮಂತ ಕುಮಾರ್.
Advertisement