ಅಡ್ಡಾದಿಡ್ಡಿ ಚಾಲನೆ: ಪೂಜಾಗಾಂಧಿ ಬಂಧನ, ಬಿಡುಗಡೆ

ಅಡ್ಡಾದಿಡ್ಡಿ ಚಾಲನೆ ಮತ್ತು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಆರೋಪದ ಮೇಲೆ ಜಯನಗರ ಸಂಚಾರಿ ಪೊಲೀಸರು ಶುಕ್ರವಾರ ನಟಿ ಪೂಜಾ ಗಾಂಧಿ
ಪೂಜಾ ಗಾಂಧಿ
ಪೂಜಾ ಗಾಂಧಿ

ಬೆಂಗಳೂರು: ಅಡ್ಡಾದಿಡ್ಡಿ ಚಾಲನೆ ಮತ್ತು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಆರೋಪದ ಮೇಲೆ ಜಯನಗರ ಸಂಚಾರಿ ಪೊಲೀಸರು ಶುಕ್ರವಾರ ನಟಿ ಪೂಜಾ ಗಾಂಧಿ ಅವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರೆ.

ಈ ಅಪಘಾತದಲ್ಲಿ ದ್ವಿಚಕ್ರ ವಾಹನ ಓಡಿಸುತ್ತಿದ್ದ ಬನಶಂಕರಿ ನಿವಾಸಿ ೫೫ ವರ್ಷದ, ವರ್ಷ ಸಹನಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

"ಪೂಜಾ ಅವರು ಅಪಘಾತದ ನಂತರ ತಲೆಮರೆಸಿಕೊಂಡಿದ್ದರಿಂದ ಅವರ ಮನೆಯಿಂದ ಪೂಜಾ ಅವರನ್ನು ಬಂಧಿಸಿದೆವು. ಅವರು ಈ ಅಪಘಾತದ ಬಗ್ಗೆ ಪೊಲೀಸರಿಗೆ ತಿಳಿಸದೆ, ತಮ್ಮ ಚಾಲಕನನ್ನು ಸಿಕ್ಕಿಸಲು ಪ್ರಯತ್ನಿಸಿದರು" ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಬೇಜವಬ್ದಾರಿ ಚಾಲನೆ ಮತ್ತು ದ್ವಿಚಕ್ರ ವಾಹನಕ್ಕೆ ಅಪಘಾತ ಮಾಡಿದ್ದಾಗಿ ಪೂಜಾ ಗಾಂಧಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. "ವಿಚಾರಣೆ ನಡೆದು ಅವರ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಅವರು ಜಾಮೀನು ಪಡೆದು ಬಂಧನಮುಕ್ತರಾಗಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.

"ನನ್ನನು ಪೊಲೀಸರು ಪ್ರಶ್ನಿಸಿದರು ಹಾಗು ನನ್ನ ಹೇಳಿಕೆಯನ್ನು ದಾಖಲಿಸಿಕೊಂದರು. ಪೊಲೀಸರು ನನ್ನ ಜೊತೆ ಚೆನ್ನಾಗಿ ವರ್ತಿಸಿದರು, ಇದು ನನ್ನ ತಪ್ಪು ಆದರೆ ಉದ್ದೇಶಪೂರ್ವಕವಲ್ಲ" ಎಂದಿದ್ದಾರೆ ಪೂಜಾ ಗಾಂಧಿ.

ಗುರುವಾರ ಪೂಜಾ ಮತ್ತು ಇನ್ನಿತರು ಕಾರಿನಲ್ಲಿ ಬನಶಂಕರಿಯತ್ತ ತೆರಳುತ್ತಿರುವಾಗ ಜಯನಗರ ೭ ನೆ ಬ್ಲಾಕ್ ಎಡೆಯೂರು ಕೆರೆಯ ಬಳಿ ಈ ಅಪಘಾತ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com