
ಕಳೆದ ವರ್ಷ ವೇಶ್ಯಾವಾಟಿಕೆ ಆರೋಪದ ಮೇಲೆ ಬಂಧಕ್ಕೀಡಾಗಿ ಬಿಡುಗಡೆಯಾಗಿರುವ ವಿವಾದಿತ ನಟಿ ಶ್ವೇತಾ ಬಸು ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸಲಿದ್ದಾರೆ.
ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು ಹೆಸರು ಮಾಡಿರುವ ಅಕುಲ್ ಬಾಲಾಜಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಕನ್ನಡದ 'ದೇವ್ರವ್ನೆ ಬುಡು ಗುರು' ಎಂಬ ಚಿತ್ರದಲ್ಲಿ ಶ್ವೇತಾ ಬಸು, ಆ್ಯಟ್ ಮಾಡಲಿದ್ದಾರೆ.
ನವ ನಿರ್ದೇಶಕ ಪ್ರಥಮ್ ಎಂಬುವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇಶಾ ದೀರ್ ನಾಯಕಿಯಾಗಿದ್ದು, ಶ್ವೇತಾ ಪ್ರಸಾದ್ ಅವರು ಪತ್ರಕರ್ತೆಯ ಪಾತ್ರದಲ್ಲಿ ಮಿಂಚಲಿದ್ದಾರಂತೆ.
Advertisement