ಟೆಕ್ಕಿಗಳ 'ಎ ಡೆ ಇನ್ ಎ ಸಿಟಿ' ಬಿಡುಗಡೆಗೆ ಸಿದ್ಧ

ನಿರ್ದೇಶಕನಾಗಿ ಮಾರ್ಪಾಡಾಗಿರುವ ಟೆಕ್ಕಿ ವೆಂಕಟ್ ಭಾರದ್ವಾಜ್ ಅವರಿಗೆ ಶುಕ್ರವಾರ ಅತಿ ದೊಡ್ಡ ದಿನ.
ಎ ಡೆ ಇನ್ ಎ ಸಿಟಿ ಸಿನೆಮಾ ಸ್ಟಿಲ್
ಎ ಡೆ ಇನ್ ಎ ಸಿಟಿ ಸಿನೆಮಾ ಸ್ಟಿಲ್

ಬೆಂಗಳೂರು: ನಿರ್ದೇಶಕನಾಗಿ ಮಾರ್ಪಾಡಾಗಿರುವ ಟೆಕ್ಕಿ ವೆಂಕಟ್ ಭಾರದ್ವಾಜ್ ಅವರಿಗೆ ಶುಕ್ರವಾರ ಅತಿ ದೊಡ್ಡ ದಿನ. ಅವರ ಕನಸಿನ ಪಯಣ 'ಎ ಡೆ ಇನ್ ಎ ಸಿಟಿ' (ನಗರದಲ್ಲಿ ಒಂದು ದಿನ) ಸಿನೆಮಾ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆ ಕಾಣುತ್ತಿದೆ.

ಇದರಿಂದ ಸಂತಸಗೊಂಡಿರುವ ವೆಂಕಟ್ "ಸಿನೆಮಾವನ್ನು ಬರೀ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆ ಮಾಡುವುದು ಅಪಾಯ ಮತ್ತು ಸವಾಲು. ಮಲ್ಟಿಪ್ಲೆಕ್ಸ್ ಬಿಡುಗಡೆಯಲ್ಲಿ ಅನುಕೂಲವು ಇದೆ ಅನಾನುಕೂಲವೂ ಕೂಡ. ಚಲನಚಿತ್ರ ಗೆದ್ದರೆ ನಮಗೆ ಅದರಲ್ಲಿ ಒಂದು ಪಾಲು ಬಂದು ಸೇರುತ್ತದೆ. ಸೋತರೆ ಸಿನೆಮಾವನ್ನು ತೆಗೆದು ಹಾಕುತ್ತಾರೆ. ವಿಪರೀತ ಬಾಡಿಗೆಯ ಕಾರಣ ಬೇರೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದು ಸಾಧ್ಯವಿಲ್ಲ. ಆದುದರಿಂದ ೧೧ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನೆಮಾ ಬಿಡುಗಡೆಯಾಗುತ್ತಿದೆ" ಎನ್ನುತ್ತಾರೆ.

ಕಡಿಮೆ ಬಜೆಟ್ ಚಿತ್ರವಾದ್ದರಿಂದ ಸಿನೆಮಾವನ್ನು ಹೆಚ್ಚೆಚ್ಚು ಇಂಪ್ರೊವೈಸ್ ಮಾಡಲು ಸಾಧ್ಯವಾಯಿತು ಎನ್ನುವ ವೆಂಕಟ್ ತಮ್ಮ ಗೆಳೆಯರನ್ನೆ ಸಿನೆಮಾದಲ್ಲಿ ನಟನೆಗೆ ತೊಡಗಿಸಿಕೊಂಡಿದ್ದಾರೆ. "ಸಿನೆಮಾದಲ್ಲಿ ೪೪ ಪಾತ್ರಗಳಿವೆ ಅದರಲ್ಲಿ ೩೬ ಜನ ಟೆಕ್ಕಿಗಳು. ವಾರಾಂತ್ಯದಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ" ಎನ್ನುತ್ತಾರೆ ವೆಂಕಟ್.

"ಜನ ದಿನನಿತ್ಯದ ಜೀವನದಲ್ಲಿ ಎದುರಿಸುವ ಸಾಮಾನ್ಯ ತೊಂದರೆಗಳನ್ನು ಕುರಿತ ಸಿನೆಮಾ ಇದು. ೧೨೫ ನಿಮಿಷಗಳ ಈ ಸಿನೆಮಾದಲ್ಲಿ ಮಾನವ ಸಂಬಂಧಗಳ ೭ ಆಯಾಮಗಳನ್ನು ತೋರಿಸಿದ್ದೇನೆ" ಎನ್ನುತ್ತಾರೆ ವೆಂಕಟ್. ಹೆಚ್ಚು ಜನರನ್ನು ತಲುಪಲು ಸಿನೆಮಾದಲ್ಲಿ ಇಂಗ್ಲಿಶ್ ಅಡಿ ಶೀರ್ಷಿಕೆಗಳಿವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com