
ಕೋಟೆ ನಾಡು ಎಂದೇ ಪ್ರಸಿದ್ಧವಾದ ಚಿತ್ರ ದುರ್ಗದಲ್ಲಿ ಬಾಳಿ ಬದುಕಿದ ಅನೇಕ ವೀರ-ಶೂರರ
ಕಾಲ್ಪನಿಕ ಹಾಗೂ ನೈಜ ಕಥೆಗಳನ್ನಾಧರಿಸಿ ಈಗಾಗಲೇ ಹಲವಾರು ಚಲನಚಿತ್ರಗಳು ಸ್ಯಾಂಡಲ್ ವುಡ್‍ನಲ್ಲಿ ಬಂದು ಹೋಗಿವೆ.
ಅದೇ ರೀತಿ ಇದೀಗ ಮತ್ತೊಂದು ಸಿನಿಮಾ ಸದ್ದಿಲ್ಲದಂತೆ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ತೊಡಗಿಕೊಂಡಿದೆ. ಹಿರಿಯ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಕೆ.ಎಸ್. ಸತ್ಯನಾರಾಯಣ, ತಿಪಟೂರು ರಘು, ಎ.ಟಿ. ರಘು ಮೊದಲಾದ ದಿಗ್ಗಜರ ಬಳಿ ಕೆಲಸ ಮಾಡಿದ ಎ. ಎಸ್. ರತ್ನಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಹೆಸರು `ಕೋಟೆ ಹೈದ' ಟೈಟಲ್ ಕೇಳಿದರೆ ಇದೊಂದು ಐತಿಹಾಸಿಕ ಚಿತ್ರ ಎನ್ನುವ ಆಲೋಚನೆ ಬರುವುದು ಸಹಜ. ಆದರೆ ಇದು ಪಕ್ಕಾ ಈಗಿನ ಕಾಲದ ಹುಡುಗನೊಬ್ಬನ ಸ್ಟೋರಿ, ಕ್ಲಾಸ್ ಮಾಸ್, ಕಾಮಿಡಿ ಲವ್ ಈ ಥರದ ಎಲ್ಲಾ ಮಸಾಲೆ ಅಂಶಗಳನ್ನು ಒಳಗೊಂಡಿರುವ ಕೋಟೆ ಹೈದನಿಗೆ ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಉಳ್ಳಳ್ಳಿ ಸುತ್ತಮುತ್ತ ಮಾತಿನ ಭಾಗದ ಚಿತ್ರೀಕರಣ ನಡೆಸಲಾಗಿದೆ.
ಚಿತ್ರದ 5 ಹಾಡುಗಳ ಶೂಟಿಂಗ್ ಮಾತ್ರ ಬಾಕಿ ಇದೆ. ಈಗಾಗಲೇ ಹಲವಾರು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದ ಸೂರ್ಯ ಈ ಚಿತ್ರದ ಮೂಲಕ ನಾಯಕನಾಗುತ್ತಿದ್ದಾರೆ. ಕೋಟೆ ಮಾರಮ್ಮ ಮೂವೀ ಮೇಕರ್ಸ್ ಲಾಂಛನದಲ್ಲಿ ಎನ್. ಮಂಜುಳಾ ರಾಮಯ್ಯ, ಸುರೇಶ್ ನಿರ್ಮಲಾ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶ್ಯಾಮ್ ಸಿಂಧನೂರು ಛಾಯಾಗ್ರಹಣ, ಧನಶೀಲ ಸಂಗೀತ, ಎಸ್. ಮಂಜು (ಸೋಮು) ಕಥೆ, ಚಿತ್ರಕಥೆ, ಸಂಭಾಷಣೆ. ಕೌರವ ವೆಂಕಟೇಶ್ ಸಾಹಸ, ಅಂಜಿರೆಡ್ಡಿ ಸಂಕಲನ, ಬಿ.ಜಿ. ರವಿ ನಿರ್ಮಾಣ ನಿರ್ವಹಣೆ, ಕೃಷ್ಣೋಜಿರಾವ್ ಸಹನಿರ್ದೇಶನವಿದೆ. ಸೂರ್ಯ, ಶಿಲ್ಪಾ, ಸಂಧ್ಯಾ, ಪುಪ್ಪಾ, ರಂಜುಶ್ರೀ, ಹೊನ್ನವಳ್ಳಿ ಕೃಷ್ಣ, ಬೀರಾದಾರ್, ವೆಂಕಟೇಶ್, ಕುರಿರಂಗ, ಸಿತಾರಾ, ರಮ್ಯಾ, ಸುಜಾತಾ, ನಾಗವರ್ಧನ್, ಸತೀಶ್, ರಾಮಣ್ಣ ಇನ್ನೂ ಮೊದಲಾದ ತಾರಾಗಣವಿದೆ.
Advertisement