ಪರಿಹಾರ ನೀಡಿ ಇಲ್ಲ ಪರಿಣಾಮ ಎದುರಿಸಿ, ರಜನಿಗೆ ವಿತರಕರ ಎಚ್ಚರಿಕೆ

ಬಿಡುಗಡೆಯಾಗಿ ೨೫ ದಿನ ಕಳೆದರೂ, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ
ಲಿಂಗಾ ಸಿನೆಮಾದ ಸ್ಟಿಲ್
ಲಿಂಗಾ ಸಿನೆಮಾದ ಸ್ಟಿಲ್
Updated on

ಚೆನ್ನೈ: ಬಿಡುಗಡೆಯಾಗಿ ೨೫ ದಿನ ಕಳೆದರೂ, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಲಿಂಗಾ ಚಿತ್ರದ ವಿತರಕರು ನೀಡಿದ್ದ ಹಣದ ಶೇ ೩೦ರಷ್ಟು  ಕೂಡ ವಾಪಸ್ ಗಳಿಸಲು ಸಾಧ್ಯವಾಗಿಲ್ಲ ಎಂದು ತಿರುಚಿ ಮೂಲದ ವಿತರಕ ಮತ್ತು ಚಿತ್ರ ಮಂದಿರ ಮಾಲೀಕ ಸಿಂಗರವೇಲನ್ ದೂರಿದ್ದಾರೆ.

ಆದುದರಿಂದ ಚಿತ್ರಮಂದಿರ ಮಾಲಿಕರು ಮತ್ತು ವಿತರಕರು ಒಗ್ಗೂಡಿ ಸೂಪರ್ ಸ್ಟಾರ್ ಮನೆಯ ಮುಂದೆ ಉಪವಾಸ ಧರಣಿ ನಡೆಸಲಿದ್ದೇವೆ ಎಂದಿದ್ದಾರೆ. "ರಜನಿಯವರು ಹಣ ಹಿಂದಿರುಗಿಸಲು ನಿರಾಕರಿಸಿದರೆ, ಅವರ ಮುಂದಿನ ಸಿನೆಮಾಗಳನ್ನು ಬಹಿಷ್ಕರಿಸದೆ ನಮಗೆ ವಿಧಿಯಿಲ್ಲ" ಎಂದಿದ್ದಾರೆ ಸಿಂಗರವೇಲನ್.

ನಗರ ಪೊಲೀಸ ಆಯುಕ್ತ ಉಪವಾಸ ಧರಣಿಗೆ ಅನುಮತಿ ನೀಡಿಲ್ಲವಾದ್ದರಿಂದ, ಚಿತ್ರಮಂದಿರ ಮಾಲಿಕರು ಮತ್ತು ವಿತರಕರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಲು ಯೋಚಿಸುತ್ತಿದ್ದಾರೆ.

"ನಿರ್ಮಾಪಕ (ರಾಕ್ ಲೈನ್ ವೆಂಕಟೇಶ್) ೪೫ ಕೋಟಿ ಬಜೆಟ್ ನಲ್ಲಿ ಸಿನೆಮಾ ಮಾಡಿದರು. ಏರೋಸ್ ಅವರಿಂದ ಅದನ್ನು ಕೊಂಡು ೨೦೦ ಕೋಟಿ ಗಳಿಸಿತು. ಸಿನೆಮಾವನ್ನು ನಮಗೆ ಮಾರಿದ ವೆಂಧಾರ್ ಮೂವೀಸ್ ಕೂಡ ಭಾಗಶಃ ಲಾಭ ಗಳಿಸಿತು. ಆದರೆ ನಾವು ಮಾತ್ರ ನಷ್ಟ ಅನುಭವಿಸುವುದು ಯಾವ ನ್ಯಾಯ" ಎಂದು ಕೇಳಿದ್ದಾರೆ.

ಕೊನೆಯ ಪಕ್ಷ ರಜನಿಯವರು ಚಿತ್ರಮಂದಿರ ಮಾಲಿಕರನ್ನು ಮಾತುಕತೆಗಾದರೂ ಕರೆಯಬೇಕು ಎಂದು ಆಗ್ರಹಿಸಿದ್ದಾರೆ.

"ಯಾವಾಗ 'ಜಿಲ್ಲಾ' ಸಿನೆಮಾಗೆ ತೆರಿಗೆ ವಿನಾಯಿತಿ ಸಿಕ್ಕಿರಲಿಲ್ಲವೋ, ವಿಜಯ್ ಮತ್ತು ಆರ್ ಬಿ ಚೌಧರಿಯವರು ನಮ್ಮನ್ನು ಮಾತುಕತೆಗೆ ಕರೆದು ಪರಿಹಾರ ಕೊಡಲು ಮುಂದಾಗಿದ್ದರು. ಚಿತ್ರೋದ್ಯಮದಲ್ಲಿ ಇದು ಸಾಮಾನ್ಯವಾದ ರೂಢಿ" ಎಂದಿದ್ದರೆ.

"ನಾವು ರಜನಿಯವರನ್ನು ನಂಬಿ ನಮ್ಮ ಹಣ ಹೂಡಿದ್ದೆವು. ಕೆ ಎಸ್ ರವಿಕುಮಾರ್ ಅಥವಾ ಏರೋಸ್ ನೋಡಿ ಯಾರು ಸಿನೆಮಾ ಕೊಳ್ಳಲಿಲ್ಲ, ನಿರ್ಮಾಪಕನನ್ನಂತೂ ಬಿಟ್ಟುಬಿಡಿ," ಎಂದು ರಾಕ್ಲೈನ್ ವೆಂಕಟೇಶ್ ನಿರ್ಮಾಣದ ವಿಕ್ರಮ್ ಅಭಿನಯದ 'ಮಜಾ' ಸಿನೆಮಾ ನೆಲಕಚ್ಚಿದ್ದನ್ನು ಪರೋಕ್ಷವಾಗಿ ಸೂಚಿಸಿ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com