ಸೋನಂ ಕಣ್ಣು ವಿರಾಟ್ ಮೇಲೆ?

ಬಂದರು ನಗರಿ ಸಿಡ್ನಿಯಲ್ಲಿ ವಿರಾಟ್ ಮತ್ತು ಅನುಷ್ಕಾ ಕೈ ಕೈ...
ಸೋನಂ ಕಪೂರ್
ಸೋನಂ ಕಪೂರ್

ಬಂದರು ನಗರಿ ಸಿಡ್ನಿಯಲ್ಲಿ ವಿರಾಟ್ ಮತ್ತು ಅನುಷ್ಕಾ ಕೈ ಕೈ ಹಿಡಿದುಕೊಂಡು ಮಾಧ್ಯಮಗಳಿಗೆ ಬಿಂದಾಸ್ ಫೋಸ್ ಕೊಡುತ್ತಿದ್ದರೆ, ಇತ್ತ ಭಾರತದ ಬಂದರು ನಗರಿ ಮುಂಬೈನಿಂದ ಅನುಷ್ಕಾಗೆ ಎಚ್ಚರಿಕೆ ಗಂಟೆಯೊಂದು ಸದ್ದು ಮಾಡುತ್ತಿದೆ.  ಅನಿಲ್ ಕಪೂರ್ ಮಗಳು ಸೋನಂ ಕಪೂರ್ ಕಣ್ಣು ಕ್ರೀಡಾರಂಗದ ಸದ್ಯದ ಚಾಲ್ತಿಯಲ್ಲಿರುವ ವಿರಾಟ್‌ಕೊಹ್ಲಿ ಮೇಲೆ ಬಿದ್ದಿದೆ ಅನ್ನುತ್ತವೆ ಬಾಲಿವುಡ್ಡಿನ ಗಾಸಿಪ್ ಜಗುಲಿಗಳು.

ಇದ್ದದ್ದನ್ನು ಇದ್ದಾಂಗೆ ಹೇಳೋದ್ರಲ್ಲಿ  ಸೋನಂ ಕಪೂರ್ ಎತ್ತಿದ ಕೈ ಅನ್ನೋದು ಎಲ್ಲರಿಗೂ ಗೊತ್ತಿರುವ  ವಿಚಾರ. ತನ್ನ ಮನಸ್ಸಿನಲ್ಲಿರುವ ಮಾತನ್ನು ಎಷ್ಟೋ ಬಾರಿ ಹೇಳಿ, ತಂದೆಯೂ ಮುಜುಗರಕ್ಕೀಡಾಗುವಂತೆ ಮಾಡಿರುವ ಕೀರ್ತಿ ಸೋನಂಗೆ ಸಲ್ಲುತ್ತದೆ.ಯ  ಪಾರ್ಟಿಯೊಂದರಲ್ಲಿ ಸೋನಂ ಮಾಧ್ಯಮದವರ ಪ್ರಶ್ನೆಗೆ, ನನ್ನ ಫೇವರೆಟ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅನ್ನೋದಷ್ಟೇ ಅಲ್ಲದೇ 'ವಿರಾಟ್ ಕೊಹ್ಲಿ ಈಸ್ ವೆರೆ ಹಾಟ್‌' ಎಂದು ಮಾಧ್ಯಮದವರತ್ತ ತುಂಟ ನಗು ಬೀರಿ ಅಲ್ಲಿಂದ ತೆರಳಿದ್ದಾಳೆ. ಸೋನಂ ಕಪೂರ್ ಒಂದು ಕ್ಷಣ ಯೋಚಿಸದೇ ವಿರಾಟ್ ಕೊಹ್ಲಿ ಅಂತ ನೀಡಿದ ಉತ್ತರ ಮತ್ತು ನಾಚಿಕೊಂಡ ರೀತಿ ಮಾಧ್ಯಮಗಳ ಮತ್ತಷ್ಟು ಪ್ರಶ್ನೆಗೆ ಆಹಾರವಾಗಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com