ರೈಮಿಂಗ್ ಮತ್ತು ರೈನಿಂಗ್ ಡಬಲ್ ಮೀನಿಂಗ್
ಗಾಲಿ ಚಿತ್ರದಲ್ಲಿ ಮಾಡಿದಂತೆ ಈ ಚಿತ್ರದಲ್ಲಿ ನಾನು ಡಬಲ್ ಮೀನಿಂಗ್ ಇಷ್ಟ ಪಡೋ ಪ್ರೇಕ್ಷಕರನ್ನು ನಿರಾಸೆ ಮಾಡುವುದಿಲ್ಲ ಎನ್ನುವ ಡೈಲಾಗ್ ಹೊಡೆಯುತ್ತಾ ತಮ್ಮ ಚಿತ್ರದ ತುಂಬ ಮೊದಲಿನಿಂದ ಕೊನೆಯವರೆಗೂ ಡಬಲ್ ಮೀನಿಂಗ್ ಡೈಲಾಗ್‌ಗಳಿವೆ ಎಂದು ಎದೆತಟ್ಟಿಕೊಂಡು ಹೇಳುತ್ತಾರೆ ರೈನ್ ಕೋಟ್ ಚಿತ್ರದ ನಿರ್ದೇಶಕ ಲಕ್ಕಿ.
ಹಾಗಾಗಿ ಲಕ್ಕಿ ಅವರ ಎರಡನೇ ಚಿತ್ರ ರೈನ್‌ಕೋಟ್‌ನಲ್ಲಿ ರೈಮಿಂಗ್ ವರ್ಡ್ಸ್‌ಗಳೂ ಇವೆ, ಡಬಲ್ ಮೀನಿಂಗ್‌ನ ವಿಷಯದಲ್ಲಿ ಇಟ್ಸ್ ರೈನಿಂಗ್ ಎನ್ನುವಂಥ ವರ್ಡ್ಸ್‌ಗಳೂ ಇವೆ ಎನ್ನಬಹುದು. ರೈನ್‌ಕೋಟ್ ಎಂಬ ಟೈಟಲ್ ಅನ್ನೂ ಕೂಡ ಕೋಟ್‌ಗೇ ಕೋಟ್ ಹಾಕಿಕೊಂಡು ಕೇಳಿಸಿಕೊಳ್ಳಬೇಕು.
ಅಂದು ನಡೆದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಅವರು ತೋರಿಸಿದ ಚಿತ್ರದ ಟ್ರೈಲರ್ ಅನ್ನು ನೋಡಿದ ಮೇಲೆ ಲಕ್ಕಿ ಅವರು ಮಾತಿಗೆ ತಪ್ಪಿಲ್ಲ ಅನಿಸಿದ್ದು ಸುಳ್ಳಲ್ಲ. ಶ್ ಸ್ವಲ್ಪ ಕಿವಿ ಮುಚ್ಕೊಳಿ ಎನ್ನುವವರಿಗೆ ಈ ಚಿತ್ರ ಖಂಡಿತಾ ಹೇಳಿ ಮಾಡಿಸಿದ್ದಲ್ಲ. ಕಣ್ ಮುಚ್ಕೊಂಡು ಕಿವಿ ಓಪನ್ ಇಟ್ಕೊಂಡಿದ್ರೆ ಸಾಕು. ಲಕ್ಕಿ ಅವರ ಈ ಸಿನಿಮಾಕ್ಕೆ ಬಂದ ನಾವೇ ಲಕ್ಕಿ ಎಂದುಕೊಂಡು ಡಬಲ್ ಮೀನಿಂಗ್ ಡೈಲಾಗ್ ಪ್ರಿಯರು ಸಿನಿಮಾ ಎಂಜಾಯ್ ಮಾಡಬಹುದು ಎನಿಸುತ್ತದ್ದಂತೆ ಕಣ್ಣಿಗೂ ಕೊಂಚ ತಂಪು ಕೊಡುವ ಹಾಡುಗಳನ್ನೂ ತೋರಿಸಿದರು ಲಕ್ಕಿ.
ಇಂದು ನಟ ರಕ್ಷಿತ್ ಶೆಟ್ಟಿ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚಿತ್ರದ ಆಡಿಯೋ ಬಿಡುಗಡೆ ಮಾಡಲು ಬಂದಿದ್ದರು. ಅವರ ಜೊತೆಯಲ್ಲಿ ರೈನ್ ಕೋಟ್ ಚಿತ್ರತಂಡ.
ಇದೊಂದ ಸಂಪೂರ್ಣ ಮಳೆಯಲ್ಲೇ ನಡೆಯುವ ಚಿತ್ರವಂತೆ. ಮಳೆಗಾಲದಲ್ಲಿ ನೂರು ದಿನ ನಡೆಯುವ ಕಥೆ ಇದು, ಹಾಗಾಗಿ ಮಳೆಗಾಲದಲ್ಲಿ ನೂರು ದಿನ ಎಂಬುದು ಚಿತ್ರದ ಕ್ಯಾಪ್ಮನ್ ಕೂಡ ಆಗಿದೆ ಎಂಬುದು ಚಿತ್ರದ ಕ್ಯಾಪ್ಟನ್ ಲಕ್ಕಿ ಹೇಳಿಕೆ. ರೈನ್‌ಕೋಟ್ ಚಿತ್ರದ ನಾಯಕ ವಿಜಯ್ ಜಟ್ಟಿ. ಸೋಮಶೇಖರ್ ಚಿತ್ರ ನಿರ್ಮಾಪಕರು. ವೆಸ್ಲೀ ಬ್ರೌನ್ ಛಾಯಾಗ್ರಹಣ ಮತ್ತು ಡ್ಯಾನಿಯಲ್ ಅವರ ಸಂಗೀತ ರೈನ್‌ಕೋಟ್ ಚಿತ್ರಕ್ಕಿದೆ.
ಗಾಲಿ ಚಿತ್ರದಲ್ಲಿ ಡಬಲ್ ಮೀನಿಂಗ್ ಹೊಡೆದಿದ್ದ ರೂಪ ನಟರಾಜ್ ಅವರ ಜಾಗಕ್ಕೆ ರಮ್ಯಾ ರಾಮಚಂದ್ರನ್ ಎಂಬ ಹುಡುಗಿ ಬಂದಿದ್ದಾಳೆ. ಚಿತ್ರದ ಮೊದಲ ಅರ್ಧದಲ್ಲಿ ಬರೋ ಇನ್ನೊಬ್ಬ ನಾಯಕಿ ಅಪೂರ್ವ ರೈ ಅವರಿಗೆ ಡಬಲ್ ಮೀನಿಂಗ್ ಡೈಲಾಗ್ ಹೇಳುವ ಭಾಗ್ಯ ಇಲ್ಲವಂತೆ. ಅವಳನ್ನು ಪ್ರೀತಿಸುವ ನಾಯಕ ಡಬಲ್ ಮೀನಿಂಗ್ ಡೈಲಾಗ್ ಹೇಳುತ್ತಿದ್ದರೂ ಅದು ಈಕೆಗೆ ಅರ್ಥವಾಗುವುದಿಲ್ಲ. ಆದರೆ ಕಥೆಯ ಇನ್ನೊಂದು ತಿರುವಿನಲ್ಲಿ ಬರೋ ರಮ್ಯಾ ಮಾತ್ರ ನಾಯಕನಿಗೆ ಅವನದ್ದೇ ಡಬಲ್ ಮೀನಿಂಗ್ ಶೈಲಿಯಲ್ಲಿ ಕೌಂಟರ್ ಕೊಡೋದು ಚಿತ್ರದ ಹೈಲೈಟ್.
-ಹರಿ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ