'ವಿಜಯಾದಿತ್ಯ'ನಿಗೆ ಪರೂಲ್ ಮಾಡೆಲ್
ನಟ ಕೋಮಲ್ ಜತೆ ಗೋವಿಂದಾಯ ನಮಃ ಎಂದ, ಬಚ್ಚನ್ ಬೆಡಗಿ ಈಗ ಸೂಪರ್ ಮಾಡೆಲ್.
ಹೌದು, ಗ್ಲಾಮರ್ ನಟಿ ಎನಿಸಿಕೊಂಡಿರುವ ಪರೂಲ್ ಯಾದವ್ ಈಗ ನಟ ಧನಂಜಯ್ ಜತೆ ಹೆಜ್ಜೆ ಹಾಕಲು ರೆಡಿಯಾಗಿದ್ದಾರೆ. ಮೊದಲ ಬಾರಿಗೆ ನಿರ್ಭಯ್ ಚಕ್ರವರ್ತಿ ನಿರ್ದೇಶನ ಮಾಡುತ್ತಿರುವ ವಿಜಯಾದಿತ್ಯ ಚಿತ್ರದಲ್ಲಿ ನಟಿ ಪರೂಲ್ ಯಾದವ್ ಸೂಪರ್ ಮಾಡೆಲ್ ಪಾತ್ರ ಮಾಡುತ್ತಿದ್ದಾರೆ.
ಡೈರೆಕ್ಟರ್ ಸ್ಪೆಷಲ್ ಚಿತ್ರದ ನಂತರ ಧನಂಜಯ್ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಈಗಾಗಲೇ ಅರ್ಧ ಚಿತ್ರೀಕರಣ ಮುಗಿದಿದೆ. ಐತಿಹಾಸಿಕ ಮತ್ತು ಮಾಡ್ರನ್ ಈ ಎರಡು ಮುಖಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಧನಂಜಯ್ ರಾಜನ ಗೆಟಪ್‌ನಲ್ಲಿ ಗಮನ ಸೆಳೆಯಲಿದ್ದಾರಂತೆ.
ಚಿತ್ರದ ನಾಯಕನ ಪಾತ್ರಧಾರಿಗೆ ಬೆನ್ನೆಲುಬಾಗಿ ನಿಲ್ಲುವಂಥ ಒಂದು ಪವರ್‌ಫುಲ್ ಪಾತ್ರ ಬೇಕಿತ್ತು. ಈ ಕಾರಣಕ್ಕೆ ನಾನು ನಟಿ ಪರೂಲ್‌ರನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಇಲ್ಲಿ ಪರೂಲ್ ಅವರದ್ದು ಸೂಪರ್ ಮಾಡೆಲ್ ಮಾತ್ರ. ಮಾಡೆಲಿಂಗ್ ಕ್ಷೇತ್ರದಲ್ಲಿರುವ ಪರೂಲ್ ಮತ್ತು ಧನಂಜಯ್ ಹೇಗೆ ಪ್ರೇಮಿಗಳಾಗುತ್ತಾರೆ, ಪ್ರಸಿದ್ಧ ಮಾಡೆಲ್ ಆಗಿರುವ ಹುಡುಗಿ ಒಬ್ಬ ಸಾಮಾನ್ಯ ಯುವಕನ ಹಿಂದೆ ಯಾಕೆ ಬರುತ್ತಾಳೆ ಎನ್ನುವದು ುಈ ಸೂಪರ್ ಮಾಡೆಲ್ ಪಾತ್ರಧಾರಿಯ ಒಂದು ಸಾಲಿನ ಕಥೆ ಎನ್ನುವ ನಿರ್ದೇಶಕ ನಿರ್ಭಯ್. ಬಾದಾಮಿ, ಐಹೊಳೆ, ದಾಂಡೇಲಿ ಮುಂತಾದ ಕಡೆ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರಂತೆ.
ಕಾವ್ಯ ಶೆಟ್ಟಿ ಚಿತ್ರದಲ್ಲಿ ಮುಖ್ಯಪಾತ್ರ ಮಾಡುತ್ತಿದ್ದಾರೆ. ನನಗೆ ಚಿತ್ರದ ಕಥೆ ಇಷ್ಟವಾಯಿತು. ಕಥೆಯಲ್ಲಿ ಎರಡು ರೀತಿಯ ಶೇಡ್‌ಗಳಿವೆ. ಇಲ್ಲಿ ಐತಿಹಾಸಿಕ ದೃಶ್ಯಗಳು ಪ್ರಧಾನವಾಗಿದ್ದರೂ ನನ್ನ ಪಾತ್ರಕ್ಕೂ ಮಹತ್ವ ಇದೆ. ಈ ಕಾರಣಕ್ಕೆ ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದೇನೆ ಎನ್ನುತ್ತಾರೆ ನಟಿ ಪರೂಲ್ ಯಾದವ್, ಅಂದಹಾಗೆ ಪರೂಲ್ ಕಾಣಿಸಿಕೊಳ್ಳಲಿರುವ ಹಾಡನ್ನು ಅರಮನೆ ಮೈದಾನದಲ್ಲಿ ಅದ್ಧೂರಿ ವೆಚ್ಚದ ಸೆಟ್ ನಿರ್ಮಿಸಿ ಇಲ್ಲಿ ಚಿತ್ರೀಕರಣ ಮಾಡುವ ಯೋಚನೆ ನಿರ್ದೇಶಕರದ್ದು. ನಿರ್ಭಯ್ ಅವರ ಈ ಯೋಚನೆಗೆ ಚಿತ್ರದ ನಿರ್ಮಾಪಕ ಪ್ರಕಾಶ್ ಅವರೂ ಸಹ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಸೂರ್ಯ ಎಂಬುವರು ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದು, ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ವಿಶೇಷ ಅಂದರೆ ಬಹುಕೋಟಿ ವೆಚ್ಚದ, ರಾಜ್‌ಮೌಳಿ ನಿರ್ದೇಶನದ ತೆಲುಗಿನ ಬಾಹುಬಲಿ ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನ್ ಮಾಡಿದ ತಂಡವೇ ನಿರ್ಭಯ್ ಅವರ ವಿಜಯಾದಿತ್ಯ ಚಿತ್ರದ ರಾಜರ ಎಸಿಸೋಡ್‌ಗಳಿಗೂ ಕಾಸ್ಟ್ಯೂಮ್ ಮಾಡಿದೆ.
- ಕೇಶವ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ