ಸಿಂಬಲ್ಲಾಗೊಂದ್ ಲವ್ ಸ್ಟೋರಿ

ಹೌದು ಇದು ಸಿಂಬಲ್ಲಾಗೊಂದ್ ಲವ್ ಸ್ಟೋರೀನೇ. ಆದರೆ ಸಿಂಬಲ್ ಏನು ಅಂತ ಕೇಳಿದ್ರೆ ಅಪಾರ್ಥ ಮಾಡ್ಕೊಳೋ ಸಾಧ್ಯತೆಯೇ ಹೆಚ್ಚು...
ಕಾಮ್ಮಾ ಚಿತ್ರ ತಂಡ (ಸಂಗ್ರಹ ಚಿತ್ರ)
ಕಾಮ್ಮಾ ಚಿತ್ರ ತಂಡ (ಸಂಗ್ರಹ ಚಿತ್ರ)

ಹೌದು ಇದು ಸಿಂಬಲ್ಲಾಗೊಂದ್ ಲವ್ ಸ್ಟೋರೀನೇ. ಆದರೆ ಸಿಂಬಲ್ ಏನು ಅಂತ ಕೇಳಿದ್ರೆ ಅಪಾರ್ಥ ಮಾಡ್ಕೊಳೋ ಸಾಧ್ಯತೆಯೇ ಹೆಚ್ಚು. ಅಲ್ಪವಿರಾಮದ ಚಿಹ್ನೆಯನ್ನು ಸಿನಿಮಾ ಶೀರ್ಷಿಕೆಯಾಗಿಸಿಕೊಂಡಿದೆ ಈ ತಂಡ.

ಕಾಮ ಅಂದರೂ ಕೋಮಾ ಅಂದರೂ ಅಪಾರ್ಥವಾಗುವ ಸಾಧ್ಯತೆ ಹೆಚ್ಚಿರೋದ್ರಿಂದ ಕಾಮ್ಮಾ ಎಂದು ಒಂಚೂರು ಒತ್ತಿಹೇಳಿದರಡ್ಡಿಯಿಲ್ಲ. ಈ ಥರದ ಶೀರ್ಷಿಕೆಗಳು ಇನ್ನಾದರೂ ಟ್ರೆಂಡ್ ಅಂದ್ಕೊಂಡಿರೋದು ಕನ್ನಡ ಚಿತ್ರರಂಗದ ಮಟ್ಟಿಗೆ ಉಪೇಂದ್ರ ಔಟ್‍ಡೇಟೆಡ್ ಆಗಿಲ್ಲ. ಅನ್ನೋದನ್ನ ಪ್ರೂವ್ ಮಾಡುತ್ತಿದೆಯಾ ಅಥವಾ ಕನ್ನಡ ಚಿತ್ರರಂಗವೇ ಅಪ್‍ಡೇಟ್
ಆಗಿಲ್ಲ ಅನ್ನೋದನ್ನ ಹೇಳುತ್ತಿದೆಯಾ ಗೊತ್ತಿಲ್ಲ. ಆದರೂ ಶೀರ್ಷಿಕೆಯಲ್ಲೇನಿದೆ ಬಿಡಿ ..

ಚಿತ್ರದ ಕಂಟೆಂಟ್ ಮುಖ್ಯ ಅನ್ನೋದಾದ್ರೆ, ಈ ಹೊಸ ಚಿತ್ರದಲ್ಲಿ ಅದು ಇದೆಯಂತೆ. ಜಿಯಾ ಉಲ್ಲಾ ಖಾನ್ ಎಂಬ ಪ್ರತಿಭಾನ್ವಿತ ನಿರ್ದೇಶಕನ ಚೊಚ್ಚಲ ಚಿತ್ರದಲ್ಲಿ ಏನೋ ಸಮ್ ಥಿಂಗ್ ಇದೆ ಎಂಬುದಕ್ಕೆ ಅಂದಿನ ಚಿತ್ರದ ಟೈಟಲ್ ರಿಲೀಸ್ ಸಮಾರಂಭವೇ ಸಾಕ್ಷಿ ಅನ್ನುವಂತಿತ್ತು. ಅಂದು ಮರಳು ಕಲಾವಿದ ರಾಘವೇಂದ್ರ ಹೆಗಡೆ ತಮ್ಮ ಮರಳಿನ ಕಲೆಯ ಮೂಲಕ ಶೀರ್ಷಿಕೆ ಅನಾವರಣಗೊಳಿಸಿದ್ದು, ಇದು ಕ್ರಿಯಾಶೀಲ ಬಳಗದ ಚಿತ್ರ ಎನ್ನುವುದನ್ನು ತೋರಿಸುತ್ತಿತ್ತು.

ಬಿ.ಎನ್. ವಾಣಿ ಕಾಂತರಾಜು ನಿರ್ಮಿಸುತ್ತಿರುವ ಈ ಚಿತ್ರದ ತಾರಾಗಣ ಇನ್ನಾದರೂ ಅಂತಿಮವಾಗಿಲ್ಲ. ಆದರೆ ಚಿತ್ರದ ರೂಪುರೇಷೆಗಳು ಮಾತ್ರ ಸಂಪೂರ್ಣವಾಗಿ ಸಿದ್ಧವಾಗಿದೆ. ಜಿಯಾ ಉಲ್ಲಾ ಖಾನ್‍ಗೆ ಇದು ಮೊದಲನೇ ಚಿತ್ರವಾದರೂ ಆತ್ಮವಿಶ್ವಾಸ ಬೆಟ್ಟದಷ್ಟಿದೆ.

ಅವರ ಉತ್ಸಾಹವನ್ನು ಕಂಡಾಗ ಈ ಚಿತ್ರವನ್ನು ಪಾಕಿಸ್ತಾನದಲ್ಲಿ ಚಿತ್ರೀಕರಿಸಲಿದ್ದೇನೆ ಎನ್ನುವ ಅವರ ಮಾತು ಉತ್ಪ್ರೇಕ್ಷೆ ಅಥವಾ ಗಿಮಿಕ್ ಎಂಬಂತೆ ಕಾಣಲಿಲ್ಲ. ಪ್ರೀತಿ ಮತ್ತು ದೈಹಿಕ ಸಂಬಂಧ ಇತ್ಯಾದಿಗಳನ್ನು ವಸ್ತುವಾಗಿಟ್ಟುಕೊಂಡು ಕಥೆ ಹೆಣೆದಿರುವ ಜಿಯಾ ಖಾನ್ ಪ್ರಕಾರ ಸಾವು ಎಂಬುದು ಮಾತ್ರ ಪೂರ್ಣವಿರಾಮ, ಮಿಕ್ಕಂತೆ, ಪ್ರೀತಿ ಗೀತಿ ಇತ್ಯಾದಿ ಎಲ್ಲದರಲ್ಲೂ ಬರೀ..ಕಾಮ!

ಈ ಚಿತ್ರ ಕನ್ನಡದಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡುವುದು ಖಚಿತ ಎಂದು ವಿಶ್ವಾಸದಿಂದ ಬೀಗುವ ಜಿಯಾ ಉಲ್ಲಾ ಖಾನ್‍ಗೆ ಥಾಮಸ್ ಆಲ್ವ ಎಡಿಸನ್
ಸ್ಫೂರ್ತಿಯಂತೆ. ಕಥೆಗೆ ಅಗತ್ಯವಿರುವ ಕಾರಣ ಪಾಕಿಸ್ತಾನದಲ್ಲಿ ಶೂಟ್ ಮಾಡುವ ಯೋಜನೆಯಿಟ್ಟು ಕೊಂಡಿರುವ ಜಿಯಾ ಮಿಕ್ಕಂತೆ ಬೆಂಗಳೂರು ಮಡಿಕೇರಿ, ವಿರಾಜಪೇಟೆ,
ಆಗ್ರಾ ಮತ್ತು ರಾಜಸ್ತಾನದಲ್ಲಿ ಚಿತ್ರೀಕರಣ ಮಾಡಲಿದ್ದಾರೆ.

ಈ ಚಿತ್ರದ ಇನ್ನೊಂದು ವಿಶೇಷತೆ ಅಂದ್ರೆ ಜೋಗಿ ಪ್ರೇಮ್ ಚಿತ್ರಗಳ ಪರ್ಮನೆಂಟ್ ಸದಸ್ಯರಾಗಿದ್ದ, ಪ್ರೇಮ್ ಚಿತ್ರಗಳ ಪ್ರೊಡಕ್ಷನ್ ವಿಭಾಗಗಳಲ್ಲಿ ದುಡಿದು ಅನುಭವ ಹೊಂದಿರುವ ದಶವಾರ ಚಂದ್ರು ಈ ಚಿತ್ರದ ಮೂಲಕ ಕಾರ್ಯಕಾರಿ ನಿರ್ಮಾಪಕರಾಗುತ್ತಿರುವುದು. ಸದ್ಯಕ್ಕೆ ಚಿತ್ರದ ಸಂಗೀತ ನಿರ್ದೇಶಕರು ಮಾತ್ರ ಆಯ್ಕೆಯಾಗಿದ್ದು, ತಾಂತ್ರಿಕ ವಿಭಾಗ ಹಾಗೂ ತಾರಾಗಣದ ವಿವರಗಳನ್ನು ಮುಂದಿನ ಮಾಧ್ಯಮಗೋಷ್ಠಿಯ ಹೊತ್ತಿಗೆ ಅಂತಿಮಗೊಳಿಸುವ ಆಲೋಚನೆಯಲ್ಲಿದೆ ಚಿತ್ರತಂಡ. ಆದಿ ಲೋಕೇಶ್ ಮತ್ತು ಗುರುರಾಜ್ ಹೊಸಕೋಟೆ ಕೂಡ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರಿಂದ ಅವರು ತಾರಾಗಣದ ಭಾಗವಿರಬಹುದೆಂಬ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com