ಐದು ದಿನದ ಪ್ರದರ್ಶನ; ೨೧೫ ಕೋಟಿ ಗಳಿಕೆ; ನೂತನ ದಾಖಲೆ ಬರೆದ ಬಾಹುಬಲಿ

ಎಸ್ ಎಸ್ ರಾಜಮೌಳಿ ಅವರ 'ಬಾಹುಬಲಿ' ದೇಶದ ಅತಿ ದೊಡ್ಡ ಬ್ಲಾಕ್ ಬಸ್ಟರ್ ಸಿನೆಮಾ ಎಂದೆನಿಸಿಕೊಂಡು ಮುನ್ನುಗ್ಗುತ್ತಿದೆ. ಜಾಗತಿಕವಾಗಿ ೨೦೦ ಕೋಟಿಗೂ ಹೆಚ್ಚು
ಬಾಹುಬಲಿ ಸಿನೆಮಾದಲ್ಲಿನ ಯುದ್ಧದ ಒಂದು ದೃಶ್ಯ
ಬಾಹುಬಲಿ ಸಿನೆಮಾದಲ್ಲಿನ ಯುದ್ಧದ ಒಂದು ದೃಶ್ಯ

ಚೆನ್ನೈ: ಎಸ್ ಎಸ್ ರಾಜಮೌಳಿ ಅವರ 'ಬಾಹುಬಲಿ' ದೇಶದ ಅತಿ ದೊಡ್ಡ ಬ್ಲಾಕ್ ಬಸ್ಟರ್ ಸಿನೆಮಾ ಎಂದೆನಿಸಿಕೊಂಡು ಮುನ್ನುಗ್ಗುತ್ತಿದೆ. ಜಾಗತಿಕವಾಗಿ ೨೦೦ ಕೋಟಿಗೂ ಹೆಚ್ಚು ಗಳಿಸಿ ೨೦೦ ಕೋಟಿ ಕ್ಲಬ್ ನ್ನು ಅತಿ ವೇಗವಾಗಿ ಸೇರಿದ ಸಿನೆಮಾ ಎಂಬ ಹೊಸ ದಾಖಲೆ ಬರೆದಿದೆ.

"೨೦೦ ಕೋಟಿ ಸಿನೆಮಾಗಳ ಕ್ಲಬ್ ಅನ್ನು ಅತಿ ವೇಗಗವಾಗಿ ಸೇರಿದ ದಾಖಲೆ ಮಾಡಿದೆ ಬಾಹುಬಲಿ. ಮಂಗಳವಾರದವರೆಗೆ ಜಾಗತಿಕವಾಗಿ ೨೧೫ ಕೋಟಿ ಗಳಿಸಿದೆ. ವಾರದ ದಿನಗಳಲ್ಲೂ ಕೂಡ ಗಳಿಕೆಯಲ್ಲಿ ಕುಂದಾಗಿಲ್ಲ" ಎಂದು ಮಾರುಕಟ್ಟೆ ತಜ್ಞ ತ್ರಿನಾಥ್ ತಿಳಿಸಿದ್ದಾರೆ.

೨೫೦ಕೋಟಿ ರೂ ಬಜೆಟ್ ನಲ್ಲಿ ನಿರ್ಮಿಸಲಾಗಿರುವ ಈ ಸಿನೆಮಾದಲ್ಲಿ ಪ್ರಭಾಸ್, ರಾಣಾ ದಗ್ಗುಭಟಿ, ಅನುಷ್ಕಾ ಶೆಟ್ಟಿ, ತಮನ್ನ ಭಾಟಿಯಾ ಮತ್ತು ಸುದೀಪ್ ನಟಿಸಿದ್ದಾರೆ.

ಜುಲೈ ೧೦ ರಂದು ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾದ ಈ ಸಿನೆಮಾ ಆಶ್ಚರ್ಯಕರವಾದ ರೀತಿಯಲ್ಲಿ ಎಲ್ಲ ಭಾಷೆಗಳಲ್ಲೂ ಒಳ್ಳೆಯ ಪ್ರದರ್ಶನ ನೀಡುತ್ತಿದೆ.

ಮೊದಲ ವಾರಾಂತ್ಯದಲ್ಲಿ ಬಾಲಿವುಡ್ ನ ಸಿನೆಮಾಗಳಾದ 'ಹ್ಯಾಪಿ ನ್ಯೂ ಯಿಯರ್', 'ಪಿಕೆ' ಇವುಗಳನ್ನೂ ಮೀರಿ ಗಳಿಸಿರುವುದು ಎಲ್ಲ ಚಿತ್ರರಂಗ ಉದ್ಯಮಿಗಳು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com