ಬುಲೆಟ್ ಬಸ್ಯದಲ್ಲಿ ಕಾಮಿಡಿಯಲ್ಲೂ ಕೈಚಳಕ ತೋರಲಿರುವ ಹರಿಪ್ರಿಯ

'ಬುಲೆಟ್ ಬಸ್ಯ' ಬಿಡುಗಡೆಗೆ ಸೆನ್ಸಾರ್ ಮಂಡಲಿ ಹಸಿರು ನಿಶಾನೆ ತೋರಿದೆ. ಸಾಮಾನ್ಯವಾಗಿ ಕೌಟುಂಬಿಕ ಕಥೆಗಳ ಸಿನೆಮಾಗಳಲ್ಲಿ ಪಕ್ಕದ ಮನೆಗೆ ಹುಡುಗಿ ಪಾತ್ರಗಳಲ್ಲೇ
'ಬುಲೆಟ್ ಬಸ್ಯ' ಸಿನೆಮಾದ ಒಂದು ದೃಶ್ಯ
'ಬುಲೆಟ್ ಬಸ್ಯ' ಸಿನೆಮಾದ ಒಂದು ದೃಶ್ಯ

ಬೆಂಗಳೂರು: 'ಬುಲೆಟ್ ಬಸ್ಯ' ಬಿಡುಗಡೆಗೆ ಸೆನ್ಸಾರ್ ಮಂಡಲಿ ಹಸಿರು ನಿಶಾನೆ ತೋರಿದೆ. ಸಾಮಾನ್ಯವಾಗಿ ಕೌಟುಂಬಿಕ ಕಥೆಗಳ ಸಿನೆಮಾಗಳಲ್ಲಿ ಪಕ್ಕದ ಮನೆಗೆ ಹುಡುಗಿ ಪಾತ್ರಗಳಲ್ಲೇ ನಟಿಸುತ್ತಿದ್ದ ನಟಿ ಹರಿಪ್ರಿಯ ಈಗ ತಮ್ಮ ಕಾಮಿಡಿ ಕೈಚಳಕ ತೋರಲು ಮುಂದಾಗಿದ್ದಾರೆ.

"ಹಾಸ್ಯ ಪಾತ್ರದ ಮೇಲೆ ಕೆಲಸ ಮಾಡುವುದು ಸವಾಲಾಗಿತ್ತು. ಈ ಸಿನೆಮಾ ಹೇಗೆ ಸ್ವೀಕರಿಸುತ್ತಾರೋ ಎಂಬ ಉದ್ವೇಗ ಇದೆ" ಎಂದು ಹರಿಪ್ರಿಯ ತಿಳಿಸಿದ್ದಾರೆ. ನಿರ್ದೇಶಕ ಜಯತೀರ್ಥ ಮತ್ತು ನಿರ್ಮಾಪಕ ಜಯಣ್ಣ ಅವರಿಗೆ ಧನ್ಯವಾದ ಹೇಳುವ ಹರಿಪ್ರಿಯ "'ರಿಕ್ಕಿ' ಸಿನೆಮಾದ ಸೆಟ್ ಗಳಲ್ಲಿ ಮೊದಲು ಜಯತೀರ್ಥ ಅವರು ನನಗೆ ಕಥೆ ಹೇಳಿದ್ದು. ನನ್ನ ಮೊದಲ ದೃಶ್ಯ ಕೊಳದಿಂದ ಬಿಳಿ ಬಣ್ಣದ ಕೆಂಪು ಅಂಚಿರುವ ಸೀರೆ ಉಟ್ಟು ಹೊರಬರುವುದು. ಸ್ಕ್ರಿಪ್ಟ್ ಬಿಗಿತನ ಇದೆ ಎಂದು ಆಗಲೇ ಅನಿಸಿತು" ಎನ್ನುತ್ತಾರೆ,

ತಮ್ಮ ಸಹನಟ ಶರಣ್ ಅವರ ಬಗ್ಗೆಯೂ ಅಪಾರ ಮೆಚ್ಚುಗೆಯ ಮಾತುಗಳನ್ನಾಡುವ ಹರಿಪ್ರಿಯ "ನಾನು ಮುಗ್ಧ ಮತ್ತು ಹೆಚ್ಚು ಮಾತನಾಡದ ಹುಡುಗಿಯ ಪಾತ್ರ ಮಾಡಿದ್ದೇನೆ. ಶರಣ್ ಎಂತಹ ಪಾತ್ರವಾದರೂ ಬಹಳ ಆತ್ಮವಿಶ್ವಾಸದಿಂದ ಮಾಡುತ್ತಾರೆ. ಅವರ ನೋಟದ ಬಗ್ಗೆ ಅವರು ಬಹಳ ನಿರ್ಧಿಷ್ಟವಾಗಿರುತ್ತಾರೆ. ಅವರು ಸಿನೆಮಾಗಳಿಗೆ ಬಹಳ ಕಷ್ಟ ಪಟ್ಟು ದುಡಿದಿದ್ದಾರೆ" ಎನ್ನುತ್ತಾರೆ.

ಚಲನಚಿತ್ರದಲ್ಲಿನ ಹಾಸ್ಯದ ಬಗ್ಗೆ ಮಾತನಾಡಿದ ಅವರು "ಹಾಸ್ಯದಲ್ಲಿ ಟೈಮಿಂಗ್ ಬಹಳ ಮುಖ್ಯ. ನನಗೆ ಬಹಳ ಸ್ವಾತಂತ್ರ್ಯ ಇತ್ತು ಆದುದರಿಂದ ನಾನು ಉತ್ತಮವಾಗಿ ನಟಿಸಲು ಸಾಧ್ಯವಾಯಿತು" ಎನ್ನುತ್ತಾರೆ ಹರಿಪ್ರಿಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com