
ಚೆನ್ನೈ: ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿಗೆ ಮೂರು ವರ್ಷಗಳ ಕಾಲ ಸತತ ಬಸವಳಿದ ನಂತರ ಈಗ ನಟ ಪ್ರಭಾಸ್ ಅವರು ರಜೆ ತೆಗೆದುಕೊಂಡು ತಮ್ಮ ಗೆಳೆಯರೊಂದಿಗೆ ಯೂರೋಪ್ ಪ್ರವಾಸ ಮಾಡಲಿದ್ದಾರಂತೆ.
ವರದಿಗಳ ಪ್ರಕಾರ ರಾಜಮೌಳಿ ಕೂಡ ಕುಟುಂಬದೊಂದಿಗೆ ರಜೆ ತೆಗೆದುಕೊಂಡು ಪ್ರವಾಸಕ್ಕೆ ಹೋಗಲಿದ್ದಾರಂತೆ.
'ಬಾಹುಬಲಿ' ಸಿನೆಮಾದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿರುವ ಪ್ರಬಾಸ್, ಸಿನೆಮಾಗೆ ಸಿಕ್ಕಿರುವ ಯಶಸ್ಸಿನಿಂದ ಸಂತಸಗೊಂಡಿದ್ದು ಎಲ್ಲ ಶ್ರೇಯಸ್ಸು ಸಿನೆಮಾದ ಸ್ಕ್ರಿಪ್ಟ್ ಗೆ ಸಲ್ಲಬೇಕು ಎಂದಿದ್ದಾರೆ.
"ಸಿನೆಮಾದ ಎಲ್ಲ ನಟರಿಗಿಂತಲೂ ಸ್ಕ್ರಿಪ್ಟ್ ಉನ್ನತವಾದದ್ದು. ಸ್ಕ್ರಿಪ್ಟ್ ಚೆನ್ನಾಗಿದ್ದಲಿ ಮಾತ್ರ ಸಿನೆಮಾ ಗೆಲ್ಲುತ್ತದೆ, ನಾವು ನಟರು ಸ್ಕ್ರಿಪ್ಟ್ ಗೆ ಜೀವ ತುಂಬುತ್ತೇವೆ" ಎಂದು ತಿಳಿಸಿದ್ದಾರೆ.
ಬಾಹುಬಲಿಯ ಎರಡನೆ ಭಾಗದ ಚಿತ್ರೀಕರಣ ಕೂಡ ಸುಮಾರು ೪೦% ಸಂಪೂರ್ಣಗೊಂಡಿದೆಯಂತೆ.
"ನಾವು ಸೆಪ್ಟಂಬರ್ ನಲ್ಲಿ ಚಿತ್ರೀಕರಣ ಮತ್ತೆ ಪ್ರಾರಂಭಿಸಲಿದ್ದೇವೆ. ನನ್ನ ಶಕ್ತಿಯನ್ನು ನವೀಕರಿಸಲು ಕೆಲವು ದಿನಗಳ ರಜೆ ತೆಗೆದುಕೊಳ್ಳುತ್ತಿದ್ದೇನೆ. ರಾಜಮೌಳಿ ನಮ್ಮನ್ನು ಮತ್ತೆ ಸುಧೀರ್ಘ ಚಿತ್ರೀಕರಣಕ್ಕೆ ತೊಡಗಿಸಿಕೊಳ್ಳುತ್ತಾರೆ ಎಂದು ತಿಳಿದಿದೆ" ಎಂದು ಅವರು ತಿಳಿಸಿದ್ದಾರೆ.
೨೦೧೬ರಲ್ಲಿ ಬಾಹುಬಲಿ ೨ನೆ ಭಾಗ ಬಿಡುಗಡೆಯಾಗಲಿದೆ.
Advertisement