
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಉಪ್ಪಿ-೨ ಬಿಡುಗಡೆ ಮಾಡಲು ನಿರ್ದೇಶಕ ನಟ ಉಪೇಂದ್ರ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.
ಆಗಸ್ಟ್ ೧೫ಕ್ಕೆ ಸಿನೆಮಾ ಬಿಡುಗಡೆ ಮಾಡಲು ಸಹಕರಿಸುವಂತೆ ಈ ನಿರ್ದೇಶಕ ಸುಮಾರು ಎಂಟು ನಿರ್ಮಾಪಕ-ನಿರ್ದೇಶಕರನ್ನು ತಮ್ಮ ಸಿನೆಮಾದ ಸೆನ್ಸಾರ್ ವಿಳಂಬ ಮಾಡುವಂತೆ ಕೇಳಿಕೊಂಡಿದ್ದಾರಂತೆ. ಅವುಗಳಲ್ಲಿ ಆರ್ ಎಕ್ಸ್ ಸೂರಿ ಮತ್ತು ಕೆಂಡಸಂಪಿಗೆ ಸಿನೆಮಾಗಳು ಕೂಡ ಸೇರಿವೆ.
ಉಪ್ಪಿ-೨ ಆಡಿಯೋ ಬಿಡುಗಡೆಯಾದಾಗಿನಿಂದ, ಹಲವಾರು ವಿವಾದಗಳೊಂದಿಗೆ ಜನರ ಕುತೂಹಲ ಕೆರಳಿಸಿದೆ. ಒಳ್ಳೆಯ ಮೊತ್ತಕ್ಕೆ ವಿತರಣಾ ಹಕ್ಕುಗಳು ಮಾರಾಟವಾಗಿದೆ ಎಂದು ತಿಳಿದುಬಂದಿದೆ.
ಅಧಿಕೃತವಾಗಿ ಇನ್ನೂ ಬಹಿರಂಗವಾಗದೇ ಹೋದರೂ ಬಲ್ಲ ಮೂಲಗಳ ಪ್ರಕಾರ ಮಂಡ್ಯಾದ ಸಿನೆಮಾ ಮಂದಿರಗಳ ಮಾಲಿಕ ಶ್ರೀಕಾಂತ್ ೧೦ ಕೋಟಿಗೆ ಉಪ್ಪಿ-೨ ಸಿನೆಮಾದ ವಿತರಣಾ ಹಕ್ಕುಗಳನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.
ಉಪ್ಪಿ-೨ ಸಿನೆಮಾದ ನಿರ್ಮಾಪಕಿ ಪ್ರಿಯಾಂಕ ಉಪೇಂದ್ರ. ಉಪೇಂದ್ರ ಜೊತೆಗೆ ಅಖೀವಾ ಯಾದವ್ ಮತ್ತು ಪರುಲ್ ಯಾದವ್ ಸಹ ನಟಿಯರು.
Advertisement