'ಆಟಗಾರ'ನ ಮೊದಲ ನೋಟ

ಆ ದಿನಗಳು ಖ್ಯಾತಿಯ ಕೆ ಎಂ ಚೈತನ್ಯ ನಿರ್ದೇಶನದ 'ಆಟಗಾರ' ಚಲನಚಿತ್ರದ ಟ್ರೇಲರ್ ಬಿಡುಗಡೆಗೆ ಸಿದ್ಧವಾಗಿದೆ. ದ್ವಾರಕೀಶ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ
ಆಟಗಾರ ಸಿನೆಮಾ ಸ್ಟಿಲ್
ಆಟಗಾರ ಸಿನೆಮಾ ಸ್ಟಿಲ್
Updated on: 

ಬೆಂಗಳೂರು: ಆ ದಿನಗಳು ಖ್ಯಾತಿಯ ಕೆ ಎಂ ಚೈತನ್ಯ ನಿರ್ದೇಶನದ 'ಆಟಗಾರ' ಚಲನಚಿತ್ರದ ಟ್ರೇಲರ್ ಬಿಡುಗಡೆಗೆ ಸಿದ್ಧವಾಗಿದೆ. ದ್ವಾರಕೀಶ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಮೂಡಿ ಬಂದಿರುವ ಈ ಸಿನೆಮಾ ಸಿನೆಮಾ ರಸಿಕರ ನಿರೀಕ್ಷೆ ಕೆರಳಿಸಿದೆ. "ಆಟಗಾರನಿಗೆ ಹಲವಾರು ಅರ್ಥಗಳಿವೆ. ಸಾಮಾನ್ಯ ಅರ್ಥದಲ್ಲಿ ಇದರರ್ಥ ಆಟ ಆಡುವವನು. ಆಟ ಎಂದರೆ ನಾಟಕ ಎಂದು ಕೂಡ ಅರ್ಥವಿದೆ. ಮಂಗಳೂರಿನವರ ನಡುವೆ ಆಟಗಾರ ಎಂದರೆ ಕಲಾವಿದ. ಅಡ್ಡ ಅರ್ಥದಲ್ಲಿ ಇದಕ್ಕೆ ಮೋಸಗಾರ ಎಂಬ ಅರ್ಥವೂ ಇದೆ" ಎನ್ನುತ್ತಾರೆ ನಿರ್ದೇಶಕ ಚೈತನ್ಯ.

"ಎಲ್ಲ ಆಟಗಾರನ ಕೈನಲ್ಲಿದೆ ಇದೆ ಎಂದರೆ 'ದೇವರಿಗೆ ಬಿಟ್ಟಿದ್ದು' ಎಂಬ ಅರ್ಥವೂ ಇದೆ. ಹೀಗೆಯೇ ನನ್ನ ಸಿನೆಮಾಗೂ ನಾನಾ ಅರ್ಥವಿದೆ. ಆಟಗಾರ ಸಿನೆಮಾ ಥ್ರಿಲ್ಲರ್ ಅಥವಾ ಲವ್ ಸಿನೆಮಾ ಎನ್ನಲು ಸಾಧ್ಯವಿಲ್ಲ. ಯಾವ ವಿಭಾಗಕ್ಕೂ ಸೇರಿಸುವುದು ಸಾಧ್ಯವಿಲ್ಲ. ಟ್ರೇಲರ್ ಅದನ್ನೇ ತೋರಿಸಲಿದೆ. ಟ್ರೇಲರ್ ಶೀಘ್ರದಲ್ಲೆ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಿದ್ದೇವೆ. ಸಿನೆಮಾ ಜುಲೈನಲ್ಲಿ ಬಿಡುಗಡೆಯಾಗಲಿದೆ" ಎಂದು ಕೆ ಎಂ ಚೈತನ್ಯ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com